790 ಮಿಲಿಯನ್ ಡಾಲರ್‌ ಸಾಲ ಮರುಪಾವತಿಸಲು ಮುಂದಾದ ಅದಾನಿ ಗ್ರೂಪ್

ಅದಾನಿ ಗ್ರೀನ್ ಎನರ್ಜಿ ತನ್ನ 2024 ಬಾಂಡ್‌ಗಳನ್ನು 800 ಮಿಲಿಯನ್ ಡಾಲರ್‌ ಅನ್ನು ಮೂರು ವರ್ಷಗಳ ಕ್ರೆಡಿಟ್ ಲೈನ್ ಮೂಲಕ ಮರುಪಾವತಿ ಮಾಡಲು ಯೋಜಿಸಿದೆ.

ನವದೆಹಲಿ, ಫೆಬ್ರವರಿ 28: ಅದಾನಿ ಗ್ರೂಪ್ ಮುಂದಿನ ತಿಂಗಳು ಮಾರ್ಚ್ ಅಂತ್ಯದ ವೇಳೆಗೆ 690 ಮಿಲಿಯನ್ ಡಾಲರ್‌ ಮತ್ತು 790 ಮಿಲಿಯನ್ ಡಾಲರ್‌ ಮೌಲ್ಯದ ಷೇರು-ಬೆಂಬಲಿತ ಸಾಲಗಳನ್ನು ಅವಧಿ ಮುನ್ನ ಪಾವತಿ ಮಾಡಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

ಅದಾನಿ ಗ್ರೀನ್ ಎನರ್ಜಿ ತನ್ನ 2024 ಬಾಂಡ್‌ಗಳನ್ನು 800 ಮಿಲಿಯನ್ ಡಾಲರ್‌ ಅನ್ನು ಮೂರು ವರ್ಷಗಳ ಕ್ರೆಡಿಟ್ ಲೈನ್ ಮೂಲಕ ಮರುಪಾವತಿ ಮಾಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದೆ ಎಂದು ಎನ್‌ಡಿಟಿವಿ ತಿಳಿಸಿದೆ. ವಿವಿಧ ಯೋಜನೆಗಳನ್ನು ಮಂಗಳವಾರ ಹಾಂಗ್ ಕಾಂಗ್‌ನಲ್ಲಿರುವ ಗುಂಪಿನ ಬಾಂಡ್‌ಹೋಲ್ಡರ್‌ಗಳಿಗೆ ಅದಾನಿ ಮ್ಯಾನೇಜ್‌ಮೆಂಟ್ ಪ್ರಸ್ತುತಪಡಿಸಿದೆ.

Adani Group to repay 790 million dollars of debt in the end of march

ಈ ಬಗ್ಗೆ ಅದಾನಿ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜನವರಿ 24 ರಂದು ಹೊರಬಂದ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯಿಂದ ಏಳು ಅದಾನಿ ಸಮೂಹದ ಕಂಪನಿಗಳು 140 ಶತಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ. ಆದರೆ ಅದಾನಿ ಸಮೂಹ ಈ ಆರೋಪಗಳನ್ನು ತಿರಸ್ಕರಿಸಿದೆ.

ಅದಾನಿ ಗ್ರೂಪ್ ಹೂಡಿಕೆದಾರರ ಕಳವಳವನ್ನು ನಿವಾರಿಸುವ ಪ್ರಯತ್ನದಲ್ಲಿ ಈ ತಿಂಗಳ ಆರಂಭದಲ್ಲಿ ಬಾಂಡ್ ಹೋಲ್ಡರ್‌ಗಳೊಂದಿಗೆ ಸಭೆಗಳನ್ನು ನಡೆಸಿದೆ. ಅಲ್ಲಿ ಗುಂಪಿನ ಕಾರ್ಯನಿರ್ವಾಹಕರು ಅದರ ಕೆಲವು ಘಟಕಗಳಲ್ಲಿ ಮರುಹಣಕಾಸು ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ ಮತ್ತು ಷೇರುಗಳ ವಿರುದ್ಧ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಪೂರ್ವ-ಪಾವತಿಸಲು ಯೋಜಿಸಿದ್ದಾರೆ.

ಗೌತಮ್ ಅದಾನಿ ಈಗ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಕುಸಿದಿದ್ದಾರೆ. ಹಿಂಡೆನ್‌ಬರ್ಗ್ ವರದಿಯನ್ನು ಪ್ರಕಟಿಸುವ ಮೊದಲು ಮೂರನೇ ಸ್ಥಾನದಿಂದ ಅದು 38ನೇ ಸ್ಥಾನಕ್ಕೆ ಕುಸಿತವಾಗಿದೆ. ವರದಿ ಅವರ ಗುಂಪಿನ ಷೇರು ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರಸ್ತುತ, ಅದಾನಿಯವರ ನಿವ್ವಳ ಮೌಲ್ಯವು 33.4 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ. ಫೋರ್ಬ್ಸ್‌ನ ನೈಜ-ಸಮಯದ ಟ್ರ್ಯಾಕರ್ ಪ್ರಕಾರ, ಇದು ಜನವರಿ 24 ರಂದು ವರದಿಯನ್ನು ಪ್ರಕಟಿಸುವ ಮೊದಲು 119 ಶತಕೋಟಿ ಡಾಲರ್‌ನಿಂದ 85 ಶತಕೋಟಿ ಡಾಲರ್‌ನಷ್ಟು ಆದಾಯ ನಷ್ಟವಾಗಿದೆ.

Adani Group to repay 790 million dollars of debt in the end of march

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಜಾಗತಿಕ ಶ್ರೀಮಂತ ಪಟ್ಟಿಯಲ್ಲಿ ಸುಮಾರು 40 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯದೊಂದಿಗೆ ಅದಾನಿಯನ್ನು 30ನೇ ಸ್ಥಾನಕ್ಕೆ ತಳ್ಳಿದೆ. ಅವರ ನಿವ್ವಳ ಮೌಲ್ಯದ ಗಮನಾರ್ಹ ಭಾಗವು ಅವರು ಅಧ್ಯಕ್ಷರಾಗಿರುವ ಅದಾನಿ ಗ್ರೂಪ್‌ನಲ್ಲಿ ಹಿಡುವಳಿಯಿಂದ ಬಂದಿದೆ. ಹಿಂಡೆನ್‌ಬರ್ಗ್ ವರದಿಯನ್ನು ಪ್ರಕಟಿಸಿ ಲೆಕ್ಕಪತ್ರವನ್ನು ಪ್ರಶ್ನಿಸಿದ ನಂತರ ಒಂದು ತಿಂಗಳ ನಂತರ ಅದಾನಿ ಗುಂಪು ಸಂಘಟಿತ ಕಂಪನಿಯ ಒಟ್ಟು ನಿವ್ವಳ ಮೌಲ್ಯವು ಸುಮಾರು 150 ಶತಕೋಟಿ ಡಾಲರ್‌ಗಳಷ್ಟು ಕಡಿಮೆಯಾಗಿದೆ ಎಂದು ಬಿಎಸ್‌ಇ ಡೇಟಾ ತೋರಿಸಿದೆ.

84.3 ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಆಸಕ್ತಿ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಅಂಬಾನಿ ಅಧ್ಯಕ್ಷರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+