Adani Group: ರೈಲ್ವೆ ಕ್ಷೇತ್ರದಲ್ಲಿ ಅದಾನಿ ಸಮೂಹಕ್ಕೆ ಮತ್ತಷ್ಟು ಪವರ್!

ನವದೆಹಲಿ: ದೇಶದಲ್ಲಿ ಬಹುದೊಡ್ಡ ಉದ್ದಿಮೆ ಕಟ್ಟಿ ನಿಭಾಯಿಸುತ್ತಿರುವ ಅಧಾನಿ ಗ್ರೂಪ್ ಈಗ ಮತ್ತೊಂದು ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ. ಈ ಮೂಲಕ ರೈಲ್ವೆ ಕ್ಷೇತ್ರದಲ್ಲಿ ಅದಾನಿ ಸಮೂಹಕ್ಕೆ ಮತ್ತಷ್ಟು ಪವರ್ ಬಂದಂತಾಗಿದೆ. ಹಾಗಾದ್ರೆ ಅದಾನಿ ಸಮೂಹದ ಹೊಸ ಒಪ್ಪಂದ ಏನು? ರೈಲ್ವೆ ಕ್ಷೇತ್ರದಲ್ಲಿ ಅದಾನಿ ಗ್ರೂಪ್‌ನ ಮತ್ತೊಂದು ಸಾಧನೆ ಏನು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಹೌದು ಅದಾನಿ ಸಮೂಹ ಸ್ವಾಮ್ಯದ ಅಂಗಸಂಸ್ಥೆ ಅದಾನಿ ಡಿಜಿಟಲ್ ಲ್ಯಾಬ್ಸ್ ಬಹುದೊಡ್ಡ ಯೋಜನೆಗೆ ಕೈಹಾಕಿದೆ ಎನ್ನಲಾಗಿದೆ. ದೇಶದ ಆನ್‌ಲೈನ್ ರೈಲು ಬುಕಿಂಗ್ ಪ್ಲಾಟ್‌ಫಾರ್ಮ್ ಪೈಕಿ ಒಂದಾದ 'ಟ್ರೈನ್‌ಮ್ಯಾನ್' ಅನ್ನ ನಿರ್ವಹಿಸುವ ಸ್ಟಾರ್ಕ್ ಎಂಟರ್‌ಪ್ರೈಸಸ್‌ನಲ್ಲಿ ಶೇಕಡ 100ರಷ್ಟು ಷೇರುಗಳಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹ ಮುಂದಾಗಿದೆ ಅಂತಾ ಹೇಳಲಾಗಿದೆ. ಹೀಗೆ ಮತ್ತೊಂದು ಮಹತ್ವದ ಯೋಜನೆಗೆ ಅದಾನಿ ಸಮೂಹ ಸಜ್ಜಾದಂತೆ ಕಾಣುತ್ತಿದೆ. ಹಾಗೇ ಈ ಮೂಲಕ ಭಾರತೀಯ ರೈಲ್ವೆ ವಿಭಾಗದಲ್ಲಿ ಅದಾನಿ ಗ್ರೂಪ್ ಮತ್ತೊಂದು ಸಾಧನೆಗೆ ಸಜ್ಜಾಗಿದೆ.

Adani Group set to invest

ಎಷ್ಟು ಕೋಟಿಯ ಒಪ್ಪಂದು ಇದು?

ಇನ್ನು ಕಂಪನಿಯ ಒಪ್ಪಂದದ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದಾನಿ ಡಿಜಿಟಲ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಒಪ್ಪಂದ ನಡೆಯುತ್ತಿರುವ ಬಗ್ಗೆ ತಿಳಿಸಲಾಗಿದೆ. ಆನ್‌ಲೈನ್ ರೈಲು ಬುಕಿಂಗ್ ಮತ್ತು ಮಾಹಿತಿ ವೇದಿಕೆ ಹಾಗೂ 'ಟ್ರೈನ್‌ಮ್ಯಾನ್' ಎಂದೂ ಕರೆಯಲ್ಪಡುವ ಸ್ಟಾರ್ಕ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಶೇಕಡ 100ರಷ್ಟು ಪಾಲು ಹೊಂದುವ ಒಪ್ಪಂದದ ಬಗ್ಗೆ ಮಾಹಿತಿ ನೀಡಲಾಗಿದೆ. ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ಅದಾನಿ ಗ್ರೂಪ್‌ನಿಂದ ಷೇರು ವಿನಿಮಯ ಅಧಿಸೂಚನೆ ಹೊರಬಿದ್ದಿದೆ. ಆದರೂ ವಹಿವಾಟಿನ ಹಣಕಾಸಿನ ವಿವರ ಮಾತ್ರ ಬಹಿರಂಗವಾಗಿಲ್ಲ.

'ಟ್ರೈನ್‌ಮ್ಯಾನ್' ಬಗ್ಗೆ ಗೊತ್ತೇ?

ಭಾರತದಲ್ಲಿ ಅನೇಕ ರೈಲು ಟಿಕೆಟ್ ಬುಕಿಂಗ್ ಅಪ್ಲಿಕೇಷನ್ಸ್ ಇವೆ. ಇಷ್ಟೆಲ್ಲಾ ಅಪ್ಲಿಕೇಷನ್ ಪೈಕಿ 'ಟ್ರೈನ್‌ಮ್ಯಾನ್' ಸಾಕಷ್ಟು ಹೆಸರು ಕೂಡ ಗಳಿಸಿದೆ. IIT ಪದವೀಧರರಾದ ವಿನೀತ್ ಚಿರಾನಿಯಾ ಮತ್ತು ಕರಣ್ ಕುಮಾರ್ ಸ್ಥಾಪಿಸಿದ ಗುರುಗ್ರಾಮ ಮೂಲದ ಅಧಿಕೃತ ರೈಲು ಟಿಕೆಟ್ ಬುಕಿಂಗ್ ಸ್ಟಾರ್ಟ್ ಅಪ್ ಇದಾಗಿದೆ. ಅಲ್ಲದೆ ತನ್ನದೇ ವಿಶಿಷ್ಟ ಸೇವೆಯ ಮೂಲಕ ಈ ಟ್ರೈನ್‌ಮ್ಯಾನ್ ಅಪ್ಲಿಕೇಷನ್ ಭಾರತೀಯ ರೈಲು ಪ್ರಯಾಣಿಕರ ಮನಸ್ಸನ್ನ ಕೂಡ ಗೆದ್ದಿದೆ. ಇದೀಗ ಅದಾನಿ ಸಮೂಹ 'ಟ್ರೈನ್‌ಮ್ಯಾನ್' ಮಾತೃ ಸಂಸ್ಥೆಯಲ್ಲಿ ದೊಡ್ಡ ಮಟ್ಟಿನ ಹೂಡಿಕೆ ಮಾಡುತ್ತಿರುವುದು ಗಮನ ಸೆಳೆದಿದೆ.

ಒಟ್ನಲ್ಲಿ ದೇಶದ ರೈಲ್ವೆ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಮಟ್ಟಿನ ಹೂಡಿಕೆ ಒಪ್ಪಂದವು ನಡೆಯುತ್ತಿದೆ. ಹೀಗೆ ಅದಾನಿ ಸಮೂಹ ರೈಲ್ವೆ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಇಡೀ ಜಗತ್ತಿನಲ್ಲೇ ಭಾರತೀಯ ರೈಲ್ವೆ ಇಲಾಖೆ ಹಾಗೂ ರೈಲ್ವೆ ಕ್ಷೇತ್ರ ಸಾಕಷ್ಟು ಹೆಸರು ಗಳಿಸಿದೆ. ತನ್ನ ಸೇವೆ ಹಾಗೂ ಗುಣಮಟ್ಟದ ವಿಚಾರದಲ್ಲೂ ಸಾಧನೆ ಮಾಡಿದೆ. ಇಂತಹ ಕ್ಷೇತ್ರದಲ್ಲಿ 'ಟ್ರೈನ್‌ಮ್ಯಾನ್' ಕೂಡ ಛಾಪು ಮೂಡಿಸಿತ್ತು. ಈಗ ಅದಾನಿ ಗ್ರೂಪ್ 'ಟ್ರೈನ್‌ಮ್ಯಾನ್' ಮಾತೃ ಸಂಸ್ಥೆಯಲ್ಲಿ ದೊಡ್ಡ ಮಟ್ಟಿನ ಹೂಡಿಕೆ ಮಾಡುತ್ತಿರುವುದು ಗಮನಾರ್ಹ ವಿಚಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+