Hindenburg: ಹಿಂಡೆನ್‌ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ತತ್ತರಿಸಿದ ಅದಾನಿ ಗ್ರೂಪ್
ಬೆಂಗಳೂರು, ಆಗಸ್ಟ್ 13: ಒಂದು ವರ್ಷದ ಹಿಂದೆ ಇದೇ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದ ಶ್ರೀಮಂತ ಪಟ್ಟಿಯಿಂದಾಗಿ ಅದಾನಿ ಗ್ರೂಪ್ ಸಹ ಸಾಕಷ್ಟು ಹಿನ್ನಡೆ ಅನುಭವಿಸಿತು. ಭಾರತೀಯ ಸಂಘಟಿತ ಸಂಸ್ಥೆಯು ಷೇರುಗಳು ಮೌಲ್ಯ ಕುಸತ ಕಂಡಿತ್ತು. ಸಣ್ಣ ಸಣ್ಣ ಷೇರು ಮಾರಾಟಗಾರನು ಭಾರತೀಯ ಮಾರುಕಟ್ಟೆಗಳಲ್ಲಿ ಹಿನ್ನಡೆ ಅನುಭವಿಸಿದ್ದರು.
ಇದೀಗ ಹುಂಡೇನಬರ್ಗ್ ವರದಿ ಪ್ರಕಟವಾದ ನಂತರ ಅದಾನಿ ಗ್ರೂಪ್ ಹೊರತುಪಡಿಸಿದರೆ ಉಳಿದೆಲ್ಲ ಷೇರುಗಳಿಗೆ ಯಾವುದೇ ಅಧಿಕ ಪ್ರಮಾಣದ ನಕಾರಾತ್ಮಕ ಪರಿಣಾಮ ಬೀರಿಲ್ಲ. ಸೋಮವಾರ ಅದಾನಿ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ ಕುಸಿತ ಕಂಡಿತು. ಆದರೆ ಮೊದಲಿನ ನಷ್ಟಕ್ಕಿಂತಲೂ ಅದಾನಿ ಗ್ರೂಪ್ 13ಮಿಲಿಯನ್ ಡಾಲರ್‌ನಷ್ಟು ಚೇತರಿಕೆ ಕಂಡಿತು.

ಸುಮಾರು ಒಂದೂವರೆಗೆ ವರ್ಷದ ಹಿಂದೆ ಅದಾನಿ ಗ್ರೂಪ್ ಸರಿಯಾದ ತೆರಿಗೆ ರಿಟರ್ನ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದ ಬಳಿಕ ಹೊರ ಬಿದ್ದ ಹಿಂಡೆನ್‌ಬರ್ಗ್ ವರದಿ ಬಹಿರಂಗವಾಯಿತು. ಅಲ್ಲಿಂದ ಹಿಂಡೆನ್‌ಬರ್ಗ್ ಮತ್ತು ಅದಾನಿ ಗ್ರೂಪ್ ಮಧ್ಯೆ ಕದನ ಮುಂದುವರಿಯಿತು ಎಂದು ವಿಶ್ಲೇಷಿಸಲಾಗಿದೆ.
ಹಿಂಡೆನ್‌ಬರ್ಗ್ ವರದಿ ಹಾಗೂ ಅದಾನಿ ಗ್ರೂಪ್ ಮಧ್ಯ ಬಿರುಸಿಗೆ 18 ತಿಂಗಳಾಗಿದೆ. ಕಾರಣ 2013ರಲ್ಲಿ ಹಿಂಡೆನ್‌ಬರ್ಗ್ ಸಂಸ್ಥೆ ಅದಾನಿ ಗ್ರೂಪ್ ಷೇರುಗಳ ಬೆಲೆ ಏರಿಕೆ ಆಗಲು ಮ್ಯಾನುಪಲೇಟ್ ಮಾಡಿದೆ ಎಂದು ಆರೋಪಿಸಿತ್ತು. ಅದಾನಿ ಷೇರುಗಳು ಸಾಗರೋತ್ತರ ಮಾರುಕಟ್ಟೆಯಲ್ಲಿ ಲಿಸ್ಟ್‌ಗೆ ಬಂದ ಬೆನ್ನಲ್ಲೆ ಈ ರೀತಿ ಆರೋಪ ಮಾಡಲಾಗಿದೆ. ಷೇರು ಎಲ್ಲವು ಪಾರದರ್ಶಕವಾಗಿದೆ ಎಂದು ಅದಾನಿಯವರೇ ಕಳೆದ ಭಾನುವಾರ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು.
ಆರೋಪಗಳಿಗೆ ಸೆಬಿ ಅಧ್ಯಕ್ಷರ ಉತ್ತರವೇನು?
ಇನ್ನೂ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಅಧ್ಯಕ್ಷರಾದ ಮಾಧಬಿ ಪುರಿ ಬುಚ್ ಅವರು ಅದಾನಿ ಗ್ರೂಪ್‌ನ ಷೇರುಗಳ ಮೇಲೆ ಈ ಹಿಂದೆ ಹೂಡಿಕೆ ಮಾಡಿದವರ ಮಧ್ಯ ಒಂದಷ್ಟು ಸಂಘರ್ಷಗಳು ಉಂಟಾಗಿವೆ. ಇದು 2022ರಿಂದ ಕಂಡು ಬಂದ ಬೆಳವಣಿಗೆ ಯಾಗಿದೆ ಎಂದು ಹಿಂಡೆನ್‌ಬರ್ಗ್ ಕಳೆದ ಶನಿವಾರ ಹೇಳಿತ್ತು.
ಹಿಂಡೆನ್‌ಬರ್ಗ್ ವರದಿಯ ಆರೋಪಗಳನ್ನು ಸೆಬಿ ಮಾಧಬಿ ಪುರಿ ಬುಚ್ ಅವರು ತಳ್ಳಿ ಹಾಕರಿದರು. ಈ ಆರೋಪಗಳು ಎಲ್ಲವು ಆಧಾರರಹಿತವಾಗಿವೆ. ಸದ್ಯ ಹಿಂಡೆನ್‌ಬರ್ಗ್ ಬಿಡುಗಡೆ ಮಾಡಿದ ಅದಾನಿ ಗ್ರೂಪ್ ಗೆ ಸಂಬಂಧಿಸಿದ ಸಂಶೋಧನಾ ವರದಿಯನ್ನು, ಅದರಲ್ಲಿ ಆರೋಪಗಳನ್ನು ಸೂಕ್ತವಾಗಿ ತನಿಖೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೆಲ್ಲ ಬೆಳವಣಿಗೆ ಮಧ್ಯೆ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಸೋಮವಾರ 1.1 ರಷ್ಟು ಕುಸಿತ ಕಂಡಿವು. ಅದಾನಿ ಪವರ್, ಅದಾನಿ ಪೋರ್ಟ್ಸ್, ಅದಾನಿ ವಿಲ್ಮಾರ್ , ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಷೇರುಗಳು ಸೋಮವಾರ ಶೇಕಡಾ 0.6 ರಿಂದ 4.2 ರಷ್ಟು ಇಳಿಕೆ ಕಂಡವು. ಇವು ಮಂಗಳವಾರ ತುಸು ಚೇತರಿಕೆಯ ಹಾದಿ ಹಿಡಿದಿವೆ.
ಇಕ್ವಿಟಿ ಸಂಶೋಧನೆಯ ಮುಖ್ಯಸ್ಥ ಸನ್ನಿ ಅಗರವಾಲ್ ಅವರು ಸಹ ಹಿಂಡೆನ್‌ಬರ್ಗ್ ವಿರುದ್ಧ ಕಿಡಿ ಕಾರಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಆರೋಪಗಳ ಮೇಲೆ ಸಾಕಷ್ಟು ತನಿಖೆಗಳು ನಡೆದಿವೆ. ಷೇರುಗಳು ಮೌಲ್ಯ ಸಹಜ ಸ್ಥಿತಿಯತ್ತ ಬರುತ್ತಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಮಾಡಿದ ಆರೋಪಗಳು ಇದಾಗಿದೆ ಎಂದಿದ್ದಾರೆ.












Click it and Unblock the Notifications