ವಿಮಾ ಪಾಲಿಸಿ ಜತೆ ಆಧಾರ್ ಜೋಡಣೆ ಕೊನೆ ದಿನಾಂಕ ವಿಸ್ತರಣೆ
ನವದೆಹಲಿ, ಡಿಸೆಂಬರ್ 20:ಬೆಂಗಳೂರು, ಡಿಸೆಂಬರ್ 31: ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ, ಮೊಬೈಲ್ ಜತೆ ಆಧಾರ್ ಲಿಂಕ್ ಅಲ್ಲದೆ ವಿಮಾ ಪಾಲಿಸಿಗಳು ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಮೊಬೈಲ್, ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆಗೆ ಮಾರ್ಚ್ 31 ಅಂತಿಮ ದಿನಾಂಕವಾಗಿದೆ.
ಈಗ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಐಆರ್ ಡಿಐ ಕೂಡಾ ವಿಮಾ ಪಾಲಿಸಿಗಳಿಗೆ ಆಧಾರ್ ಲಿಂಕ್ ಮಾಡುವ ಕೊನೆ ದಿನಾಂಕವನ್ನು ಮಾರ್ಚ್ 31ಕ್ಕೆ ವಿಸ್ತರಿಸಿದೆ. ಸರ್ಕಾರದ ಅನೇಕ ಸೌಲಭ್ಯಗಳ ಪ್ರಯೋಜನ ಪಡೆಯಲು ಆಧಾರ್ ಜತೆ ಜೋಡಣೆ ಅನಿವಾರ್ಯವಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸುವುದಕ್ಕೆ ಕೊನೆಯ ದಿನಾಂಕ 31, 2018 ಆಗಿದ್ದು, ಆ ದಿನಾಂಕದೊಳಗೆ ಆಧಾರ್, ಪ್ಯಾನ್(Permanent Account Number) ಮತ್ತು ಫಾರ್ಮ್ 60 ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಲಾಗಿದೆ.
ಜೊತೆಗೆ ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸುವುದಕ್ಕೆ ಫೆ.6, 2018 ಕೊನೆಯ ದಿನವಾಗಿದ್ದು, ಈ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜತೆಗೆ ಬ್ಯಾಂಕ್, ಪ್ಯಾನ್ ಜತೆ ವಿಮೆ ಯೋಜನೆಗಳ ಜೋಡಣೆಗೆ ಮಾರ್ಚ್ 31 ಕೊನೆ ದಿನಾಂಕವಾಗಿದೆ.












Click it and Unblock the Notifications