ಎಸ್.ಬಿ.ಐ ನ 12,000 ಕ್ಕೂ ಅಧಿಕ ನೌಕರರಲ್ಲಿ 2800 ಜನರಿಂದ ವಿ.ಆರ್.ಎಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಐದು ಸಹವರ್ತಿ ಬ್ಯಾಂಕ್ ಗಳು ವಿಲೀನಗೊಂಡ ಬಳಿಕ ಒಟ್ಟು 12 ಸಾವಿರಕ್ಕೂ ಹೆಚ್ಚು ಮಂದಿ ವಿಆರ್ಎಸ್ಗೆ ಅರ್ಹರಾಗಿದ್ದಾರೆ.
ನವದೆಹಲಿ, ಏಪ್ರಿಲ್ 03: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಐದು ಸಹವರ್ತಿ ಬ್ಯಾಂಕ್ ಗಳು ವಿಲೀನಗೊಂಡ ಬಳಿಕ ಒಟ್ಟು 12 ಸಾವಿರಕ್ಕೂ ಹೆಚ್ಚು ಮಂದಿ ವಿಆರ್ಎಸ್ಗೆ ಅರ್ಹರಾಗಿದ್ದಾರೆ.
ಆದರೆ, ಈ ಪೈಕಿ ಕೇವಲ 2,800 ಉದ್ಯೋಗಿಗಳು ವಿಆರ್ಎಸ್ಗೆ ಇಲ್ಲಿ ತನಕ ಅರ್ಜಿ ಸಲ್ಲಿಸಿದ್ದಾರೆ ಎಂದು ಎಸ್ ಬಿ ಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.[ವಿಶ್ವದ ಟಾಪ್ 50 ಬ್ಯಾಂಕುಗಳ ಪಟ್ಟಿಗೆ ಎಸ್ಬಿಐ ಎಂಟ್ರಿ]
ಸಹವರ್ತಿ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೋರ್ ಜತೆಗೆ ಭಾರತೀಯ ಮಹಿಳಾ ಬ್ಯಾಂಕ್ ಏಪ್ರಿಲ್ 1ರಂದು ಎಸ್ಬಿಐನಲ್ಲಿ ವಿಲೀನಗೊಂಡ ಬಳಿಕ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ಸುದ್ದಿ ಹಬ್ಬಿತ್ತು.

20 ವರ್ಷದ ಸೇವೆ ಸಲ್ಲಿಸಿದ್ದು, 55 ವರ್ಷ ವಯಸ್ಸು ದಾಟಿದ ನೌಕರರು ವಿಆರ್ಎಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 05,2017ರ ತನಕ ವಿಆರ್ ಎಸ್ ಅರ್ಜಿ ಹಾಕಲು ಅವಕಾಶವಿದೆ. ವಿಲೀನದ ನಂತರ ಎಸ್ಬಿಐನಲ್ಲಿ ಉದ್ಯೋಗಿಗಳ ಸಂಖ್ಯೆ 2,70,011ಕ್ಕೆ ತಲುಪಿದೆ.
ಈ ಮಹಾ ವಿಲೀನದ ಬಳಿಕ ಎಸ್ಬಿಐ ತನ್ನ ಮೌಲ್ಯವನ್ನು 41 ಲಕ್ಷ ಕೋಟಿ ರುಗೆ ಏರಿಸಿಕೊಂಡು ವಿಶ್ವದ ಟಾಪ್ 50 ಬ್ಯಾಂಕ್ ಪಟ್ಟಿಗೆ ಎಂಟ್ರಿ ಕೊಟ್ಟಿದೆ. ಎಸ್ಬಿಐ ಈಗ 37ಕೋಟಿ ಗ್ರಾಹಕರ ಸಂಖ್ಯೆ ಹೊಂದಿದ್ದು, 24 ಸಾವಿರ ಒಟ್ಟು ಶಾಖೆಗಳು ಹಾಗೂ 59 ಸಾವಿರ ಎಟಿಎಂಗಳನ್ನು ಹೊಂದಲಿದೆ.(ಪಿಟಿಐ)












Click it and Unblock the Notifications