5,000 ರೂಪಾಯಿಗೆ Honda Jazz ಕಾರು ಬುಕ್ ಮಾಡಿ
ನವದೆಹಲಿ, ಆಗಸ್ಟ್ 10: ಹೋಂಡಾ ಇಂಡಿಯಾ ಲಿಮಿಟೆಡ್ ತನ್ನ ಪ್ರಿಮಿಯಂ ಹ್ಯಾಚ್ ಬ್ಯಾಕ್ ಜಾಜ್ (Jazz) ಕಾರಿನ ಪ್ರೀ ಲಾಂಚ್ ಬುಕಿಂಗ್ ಆರಂಭಿಸಿದೆ ಎಂದು ಸೋಮವಾರ ಘೋಷಿಸಿದೆ. ಇದನ್ನು ನೀವು ಆನ್‌ಲೈನ್‌ನಲ್ಲಿ ಹಾಗೂ ಆಫ್ ಲೈನ್ ನಲ್ಲಿಯೂ ಕೂಡ ಬುಕ್ ಮಾಡಬಹುದಾಗಿದೆ.
ಹೋಂಡಾ ಕಾರ್ಸ್ ಅಧಿಕೃತ ಡೀಲರ್‌ಶಿಪ್ ಮಳಿಗೆಗೆ ಭೇಟಿ ನೀಡಿ ನೀವು 21,000 ರೂಪಾಯಿ ಮುಂಗಡವಾಗಿ ಪಾವತಿಸಿ ಈ ಕಾರನ್ನು ಬುಕ್ ಮಾಡಬಹುದಾಗಿದೆ. ಇಷ್ಟಲ್ಲದೇ ನೀವು ಮನೆಯಲ್ಲಿಯೇ ಕುಳಿತು ಸಹ ಬುಕ್ ಮಾಡಬಹುದು.
ನೀವು ಮನೆಯಲ್ಲಿಯೇ ಕಾರ್ ಅನ್ನು ಬುಕ್ ಮಾಡಲು ಕೇವಲ 5,000 ರೂಪಾಯಿ ಅಷ್ಟೇ ಸಾಕು. ಇದಕ್ಕಾಗಿ 'ಹೊಂಡಾ ಫ್ರಮ್ ಹೋಮ್' ಅಂದರೆ ಹೆಚ್‌ಸಿಐಎಲ್ ವೆಬ್‌ಸೈಟ್‌ಗೆ ಭೇಟಿ ಮಾಡಿ ಬುಕ್ ಮಾಡಬಹುದಾಗಿದೆ.

ನೂತನ ಹೊಂಡಾ ಜಾಜ್ ಕಾರಿಗೆ ಸ್ಪೋರ್ಟ್ಸ್ ಕಾರಿನ ಲುಕ್ ನೀಡಲಾಗಿದೆ. ಇದರಲ್ಲಿ BS-VI ಇಂಜಿನ್ ನೀಡಲಾಗಿದೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಇದರಲ್ಲಿದ್ದು, ಮ್ಯಾನುವಲ್ ಹಾಗೂ ವೆರಿಯೇಬಲ್ ಟ್ರಾನ್ಸ್ಮಿಶನ್ (CVT)ಎರಡೂ ವಿಧಗಳಲಿ ಇದು ಲಭ್ಯವಿದೆ.
ಈ ಕಾರು ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಇದೇ ತಿಂಗಳಿನಲ್ಲಿ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಂಪನಿ ಯೋಜಿಸಿದೆ ಎನ್ನಲಾಗಿದೆ.












Click it and Unblock the Notifications