1,000 ಸಾವಿರ ಕೋಟಿ ಒಡೆಯ ವಿಜಯ್ ಮಲ್ಯ ಐಷಾರಾಮಿ ಜೀವನ: ಇಬ್ಬರು ಹೆಂಡತಿಯರು, ಎಷ್ಟು ಮಕ್ಕಳು & ಆಸ್ತಿ ಎಷ್ಟಿದೆ ?
ಮದ್ಯ ದೊರೆ ವಿಜಯ್ ಮಲ್ಯ ಈಗ ಆರ್ಥಿಕವಾಗಿ ದಿವಾಳಿಯಾಗಿರಬಹುದು ಇಲ್ಲವೇ ದೇಶವನ್ನೇ ತೊರೆದಿರಬಹುದು. ಆದರೆ ವಿಜಯ್ ಮಲ್ಯ ಬಾಳಿ ಬದುಕಿದ್ದೆಲ್ಲವೂ ಐಷಾರಾಮಿ ಜೀವನವೇ. ವಿಜಯ್ ಮಲ್ಯ ಕೋಟ್ಯಾಂತರ ರೂಪಾಯಿ ದುಡ್ಡಿದು. ಏರ್‌ಲೈನ್ ಹಾಗೂ ಮದ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರು. ಆದರೆ, ದೇಶ ತೊರೆಯುವ ಪರಿಸ್ಥಿತಿ ಎದುರಾಗಿ ತೀವ್ರ ಮುಜುಗರಕ್ಕೆ ಒಳಗಾಗಿದ್ದು ಬೇರೆಯ ಕಥೆ. ಆದರೆ, ಮಲ್ಯ ಎಷ್ಟು ಮದುವೆಯಾಗಿದ್ದರು ಅವರಿಗೆ ಎಷ್ಟು ಜನ ಮಕ್ಕಳು ಇವರ ಒಟ್ಟಾರೆ ಕೋಟಿ ಎಷ್ಟು ಎನ್ನುವ ವಿವರ ಇಲ್ಲಿದೆ.
ವಿಜಯ್ ಮಲ್ಯ ಒಂದು ಕಾಲದಲ್ಲಿ ರಾಜನಂತೆ ಬದುಕಿದ ಉದ್ಯಮಿ. ಭಾರತದಲ್ಲಿ ಉದ್ಯಮ ಕ್ಷೇತ್ರದಲ್ಲಿ ವಿಜಯ್ ಮಲ್ಯ ಅತ್ಯುನ್ನತ ಸ್ಥಾನಕ್ಕೇರಿ ಕೋಟಿ.. ಕೋಟಿ ದುಡಿದ ವ್ಯಕ್ತಿ. ಆತ ಬದುಕಿದ್ದು ಸಾಮಾನ್ಯವಾದ ಬದುಕೇನು ಅಲ್ಲ ಕಿಂಗ್ ಫಿಶರ್ ಮದ್ಯ ಕ್ಷೇತ್ರದಲ್ಲಿ ಬೇರೆ ಹವಾನೇ ಸೃಷ್ಟಿ ಮಾಡಿತ್ತು. ಏರ್‌ಲೈನ್ಸ್ ಸೇರಿ ಹಲವು ಉದ್ಯಮಗಳ ಒಡೆಯನಾಗಿದ್ದ ವಿಜಯ್ ಮಲ್ಯ ಆರ್‌ಸಿಬಿ ಖರೀದಿ ಮಾಡಿದ ಮೇಲಂತೂ ಲಕ್ ಬದಲಾಗಿ ಹೋಯಿತು ಅಂತಲೇ ಹೇಳಬಹುದು. ಮದುವೆಗಳು & ಮಕ್ಕಳು ಅಂತ ಜಾಲಿ ಜೀವನವನ್ನೇ ನಡೆಸಿರುವ ಮಲ್ಯ ಈಗ ಇರುವ ಪರಿಸ್ಥಿತಿ ನೋಡಿದರೆ ಯಾರಿಗಾದರೂ ಬೇಸರವಾಗುವಂತೆ ಇದೆ. ಮಲ್ಯ ಆಸ್ತಿ ಇಂದಿಗೂ ಕೋಟಿ.. ಕೋಟಿ ಇದೆ. ಆದರೆ ಅವರು ಮೊದಲ ಪತ್ನಿಯಿಂದ ದೂರವಾಗಿದ್ದಾರೆ.

ಮಲ್ಯ ಭದ್ರವಾಗಿ ನೆಲೆಯೂರಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಮಲ್ಯ ಮಾಡದ ಬ್ಯುಸಿನೆಸ್ ಇಲ್ಲ ಎನ್ನುವಷ್ಟು ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದರು. ಇನ್ನು ವಿಜಯ್ ಮಲ್ಯ ವೈಯಕ್ತಿಕ ಜೀವನವಾಗಲಿ & ಉದ್ಯಮದ ಜೀವನವಾಗಲಿ ವಿವಾದಗಳ ಸುತ್ತಲು ಸುತ್ತಿದ್ದೇ ಹೆಚ್ಚು. ಇನ್ನು ಮಲ್ಯ ಲವ್ ಸ್ಟೋರಿಗಳು ಯಾವ ಸಿನಿಮಾಗೂ ಕಡಿಮೆ ಏನಿಲ್ಲ ಎನ್ನುವಂತಿದೆ. ಗಗನಸಖಿಯೊಂದಿಗೆ ಮೊದಲು ಪ್ರೇಮದಲ್ಲಿ ಬಿದ್ದ ಅವರು ಆ ಮೇಲೆ ಅವರ ಬಾಲ್ಯದ ಗೆಳತಿಯೊಂದಿಗೂ ಮದುವೆಯಾದರು. ಇಬ್ಬರು ಹೆಂಡತಿಯರ ಮುದ್ದಿನ ಮಲ್ಯ! ಹೌದು ವಿಜಯ್ ಮಲ್ಯ ಅವರು ಎರಡು ಮದುವೆಯನ್ನಾಗಿದ್ದಾರೆ. ಅವರಿಗೆ ಒಟ್ಟು ಮೂರು ಜನ ಮಕ್ಕಳು. (ಇಬ್ಬರು ಮಕ್ಕಳಿಗೆ ಮಲತಂದೆ) ಮಕ್ಕಳು ಹಾಗೂ ಪತ್ನಿಯರ ಆಸ್ತಿ ಕೋಟ್ಯಾಂತರ ರೂಪಾಯಿ ಇದೆ. ಮಲ್ಯ ಅವರ ಈಗಿನ ಆಸ್ತಿ 1.2 ಬಿಲಿಯನ್‌ಗಿಂತಲೂ ಹೆಚ್ಚಾಗಿದೆ. ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ 1000 ಸಾವಿರ ಕೋಟಿ ರೂಪಾಯಿಗೂ ಹೆಚ್ಚು.
1986 ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ವ್ಯಾಪಾರ ಪ್ರವಾಸದ ಸಮಯದಲ್ಲಿ ವಿಜಯ್ ಮಲ್ಯ ಅವರು ಏರ್ ಇಂಡಿಯಾ ವಿಮಾನವನ್ನು ಹತ್ತಿದ್ದರು. ಗಗನಸಖಿ ಸಮೀರಾ ತ್ಯಾಬ್ಜಿ ಅವರೊಂದಿಗೆ ಮಲ್ಯಗೆ ಲವ್ ಆಗಿತ್ತು. ಮದುವೆಯೂ ಆದರು ವಿಜಯ್ ಮಲ್ಯ - ಸಮೀರಾ ತ್ಯಾಬ್ಜಿ ಅವರ ಪುತ್ರನೇ ಸಿದ್ಧಾರ್ಥ್ ಮಲ್ಯ. ಆದರೆ ಈ ವಿವಾಹ ಬಂಧ ತುಂಬಾ ದಿನಗಳ ಕಾಲ ಉಳಿಯಲಿಲ್ಲ. ಇದಾದ ಮೇಲೆ ಮಲ್ಯ ಬಾಲ್ಯದ ಗೆಳತಿ ರೇಖಾ ಅವರೊಂದಿಗೆ ಎರಡನೇ ಮದುವೆ ಮಾಡಿಕೊಂಡರು. ರೇಖಾ ಅವರಿಗೆ ಈಗಾಗಲೇ ಎರಡು ಬಾರಿ ಮದುವೆಯಾಗಿದ್ದು ಅವರಿಗೆ ಮಗು ಇತ್ತು. ರೇಖಾ - ಮಲ್ಯಗೆ ಲಿಯಾನಾ ಮಲ್ಯ, ತಾನ್ಯಾ ಮಲ್ಯ ಎನ್ನುವ ಮಕ್ಕಳಿದ್ದಾರೆ. ಲೈಲಾ ಎನ್ನುವ ಮಗುವನ್ನು ರೇಖಾ ಅವರು ದತ್ತುಪಡೆದುಕೊಂಡಿದ್ದಾರೆ. ಈ ಮೂಲಕ ಮಲ್ಯ ಅವರಿಗೆ ಒಟ್ಟು ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳು ಅಂತ ಆಗುತ್ತದೆ ಎನ್ನಲಾಗಿದೆ.
ವಿಜಯ್ ಮಲ್ಯ ಹಾಗೂ ಇವರ ಪತ್ನಿಯರು ಮತ್ತು ಮಕ್ಕಳು ಕೋಟ್ಯಾಧಿಪತಿಗಳು! ವಿಜಯ್ ಮಲ್ಯಗೆ ಈಗ 69 ವರ್ಷ ಇನ್ನೂ ಅವರ ಹುಮ್ಮಸ್ಸು ಕಿಂಚಿತ್ತು ಕಡಿಮೆಯಾಗಿಲ್ಲ.












Click it and Unblock the Notifications