ಬೆಂಗಳೂರಿನ ಬಳಿಕ ಬೀದರ್‌ನಲ್ಲಿಯೂ ಕೊರೊನಾ ವೈರಸ್ ಪತ್ತೆ
ಬೀದರ್, ಮಾರ್ಚ್ 4: ಬೆಂಗಳೂರಿಗೆ ಹಬ್ಬಿದ್ದ ಕೊರೊನಾ ವೈರಸ್ ಈಗ ಬೀದರ್‌ನಲ್ಲಿಯೂ ಪತ್ತೆಯಾಗಿದೆ. 14 ವರ್ಷದ ಒಬ್ಬ ಹುಡುಗನಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಶಂಕೆ ವ್ಯಕ್ತವಾಗಿದೆ.
ಬೀದರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಟೀಚಿಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಅನುಮಾನ ಮೂಡಿದೆ. ವೈದ್ಯರು ರೋಗಿ ವಿವರದ ಚೀಟಿಯಲ್ಲಿ ''Suspected Coronavirus Infection'' (ಕೊರೊನಾ ವೈರಸ್ ಇರುವ ಶಂಕಿಸಲಾಗಿದೆ) ಎಂದು ಬರೆದಿದ್ದಾರೆ.
ಬೀದರ್ ನ ಈ ರೋಗಿ ಎರಡ್ಮೂರು ದಿನಗಳಿಂದ ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿದ್ದರು. ಹೀಗಾಗಿ ಪೋಷಕರು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದಾರೆ. ಕೆಮ್ಮು, ಜ್ವರ, ಶೀತ ಕೊರೊನಾ ವೈರಸ್ ಲಕ್ಷಣ ಇರುವ ಕಾರಣ ವೈದ್ಯರು ಪರೀಕ್ಷೆ ನಡೆಸಿದ್ದಾರೆ.

ವೈದ್ಯರ ತಪಾಸಣೆಯಲ್ಲಿ 14 ವರ್ಷದ ಹುಡುಗಿನಿಗೆ ಕೊರೊನಾ ವೈರಸ್ ಶಂಕೆಯಾಗಿದೆ. ಬೆಂಗಳೂರಿನ ನಂತರ ಬೀದರ್ ನಲ್ಲಿ ಕೊರೊನಾ ಕಾಣಿಸಿಕೊಂಡಿದೆ.











Click it and Unblock the Notifications