ಸಚಿವ ಪ್ರಭು ಚೌವ್ಹಾಣ್‌ಗೆ ಕೋವಿಡ್ ಸೋಂಕು

ಬೀದರ್, ಸೆಪ್ಟೆಂಬರ್ 10: ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕೋವಿಡ್ ಸೋಂಕು ತಗುಲಿದೆ. "ನನ್ನ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ಇಂದ ಇರಿ" ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.

ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಖಾತೆ ಸಚಿವ ಪ್ರಭು ಚೌವ್ಹಾಣ್ ಗುರುವಾರ ಕೋವಿಡ್ ಸೋಂಕು ತಗುಲಿದೆ ಎಂದು ಫೇಸ್‌ ಬುಕ್ ಪೋಸ್ಟ್ ಹಾಕಿದ್ದಾರೆ. ಬುಧವಾರ ಸಚಿವರು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದರು.

ಸೆಪ್ಟೆಂಬರ್ 8ರಂದು ಸಚಿವರ ಕಾರು ಚಾಲಕ, ಭದ್ರತಾ ಸಿಬ್ಬಂದಿ, ಆಪ್ತ ಸಹಾಯಕನಿಗೆ ಕೋವಿಡ್ ಸೋಂಕು ತಗುಲಿದ್ದು ಖಚಿತವಾಗಿತ್ತು. ಬಳಿಕ ಅವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಬುಧವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು.

Karnataka Minister Prabhu Chauhan Tested Positive For COVID 19

ಸಚಿವರ ವಿಶೇಷಾಧಿಕಾರಿ ಕಟ್ಟೆ ಶಿವಕುಮಾರ್ ಸಚಿವರ ಸಂಪರ್ಕಕ್ಕೆ ಬಂದ ಜನರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡಿದ್ದಾರೆ.

ಸಚಿವರ ಫೋಸ್ಟ್: ಪ್ರಭು ಚೌವ್ಹಾಣ್ ಅವರು ಫೇಸ್‌ ಬುಕ್‌ನಲ್ಲಿ, "ನನಗೆ ಕೊರೊನಾ ಪಾಜಿಟಿವ್ ಬಂದಿದೆ ಮೊನ್ನೆಯಷ್ಟೆ ನನ್ನ ವಾಹನ ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಪಾಜಿಟಿವ್ ಬಂದ ಕಾರಣ ಮನೆಯಲ್ಲಿಯೆ ಕ್ವಾರಂಟೈನ್ ಗೆ ಒಳಗಾಗಿದ್ದೆ ನಿನ್ನೆ ಸ್ವತಃ ವೈದ್ಯರನ್ನು ಕರೆಯಿಸಿ ಪರೀಕ್ಷಿಸಿಕೊಂಡಾಗ ಸೋಂಕು ಧೃಢಪಟ್ಟಿದ್ದು ಜೊತೆಗೆ ನನ್ನ ಅಣ್ಣನ ಮಗ ದಿಲೀಪ್ ಚವ್ಹಾಣಗು ಕೂಡ ಸೋಂಕು ಧೃಢಪಟ್ಟಿದೆ"

"ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕೆಂದು ಕೋರುತ್ತೆನೆ.ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದಗಳೇ ನನಗೆ ಶ್ರೀರಕ್ಷೆ ನಾನು ಶೀಘ್ರದಲ್ಲಿ ಈ ಸೋಂಕಿನಿಂದ ಗುಣಮುಖನಾಗಿ ಬರುತ್ತೆನೆ ದಯವಿಟ್ಟು ಎಲ್ಲರು ಎಚ್ಚರಿಕೆಯಿಂದಿರಿ" ಎಂದು ಫೋಸ್ಟ್ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+