ಬೀದರ್-ಕಲಬುರಗಿ ಡೆಮು ರೈಲು ವೇಳಾಪಟ್ಟಿ ಬದಲು

ಬೀದರ್, ಆಗಸ್ಟ್ 08; ರೈಲ್ವೆ ಇಲಾಖೆ ಬೀದರ್-ಕಲಬುರಗಿ ನಡುವಿನ ಡೆಮು ರೈಲು ಸಂಚಾರದ ಸಮಯವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಯಶವಂತಪುರ-ಬೀದರ್‌ ಹಾಗೂ ಇತರೆ ಎಕ್ಸ್‌ಪ್ರೆಸ್ ರೈಲುಗಳು ನಿಗದಿತ ಅವಧಿಯ ಸಂಚಾರಕ್ಕೆ ಅನುಕೂಲವಾಗಲಿದೆ.

ಬೀದರ್ ಸಂಸದ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಕಾರಾಬಾದ್-ಬೀದರ್-ಪರಳಿ ಜೋಡಿ ರೈಲು ಮಾರ್ಗಕ್ಕೂ ಸಹ ಇಲಾಖೆ ಮಂಜೂರಾತಿ ನೀಡಿದೆ ಎಂದು ಸಚಿವರು ಹೇಳಿದ್ದಾರೆ.

kalaburagi-bidar-demu-train-timings

ಬೀದರ್-ಕಲಬುರಗಿ ನಡುವೆ ಸಂಚಾರ ನಡೆಸುವ ಎರಡು ಡೆಮು ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರು ಬದಲಾದ ವೇಳಾಪಟ್ಟಿ ತಿಳಿದು ಸಂಚಾರ ನಡೆಸುವುದು ಉತ್ತಮ.

ಬದಲಾದ ವೇಳಾಪಟ್ಟಿ; ರೈಲು ಸಂಖ್ಯೆ 07761 ಬೀದರ್‌-ಕಲಬುರಗಿ ರೈಲು ಬೆಳಗ್ಗೆ 7.30ರ ಬದಲು 6.45ಕ್ಕೆ ಹೊರಟು 9.30ಕ್ಕೆ ಕಲಬುರಗಿ ತಲುಪಲಿದೆ. ರೈಲು ಸಂಖ್ಯೆ 07748 ಸಂಜೆ 4.40ರ ಬದಲು 5.30ಕ್ಕೆ ಬೀದರ್‌ನಿಂದ ಹೊರಟು ರಾತ್ರಿ 8.20ಕ್ಕೆ ಕಲಬುರಗಿಗೆ ತಲುಪಲಿದೆ.

ರೈಲು ಸಂಖ್ಯೆ 07745 ಕಲಬುರಗಿ-ಬೀದರ್ ನಡುವಿನ ಡೆಮು ರೈಲು ಕಲಬುರಗಿಯಿಂದ ಬೆಳಗ್ಗೆ 7.30ರ ಬದಲು 6.45ಕ್ಕೆ ಹೊರಟು 9.30ಕ್ಕೆ ಬೀದರ್‌ಗೆ ತಲುಪಲಿದೆ. ರೈಲು ಸಂಖ್ಯೆ 07764 ಸಂಜೆ 4.40ರ ಬದಲು 5.30ಕ್ಕೆ ಕಲಬುರಗಿಯಿಂದ ಹೊರಟು, ರಾತ್ರಿ 8.30ಕ್ಕೆ ಬೀದರ್‌ಗೆ ತಲುಪಲಿದೆ.

ಡೆಮು ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಿರುವುದರಿಂದ ಯಶವಂತಪುರ-ಬೀದರ್ ಹಾಗೂ ಇತರೆ ವೇಗದೂತ ರೈಲುಗಳು ಸರಿಯಾದ ಸಮಯಕ್ಕೆ ಬೀದರ್ ತಲುಪಲು ಸಹಾಯಕವಾಗಿದೆ. ಜನರು ಈ ಬದಲಾವಣೆಯನ್ನು ಗಮನಿಸಿ, ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

ವಿಕಾರಾಬಾದ್-ಬೀದರ್-ಪರಳಿ ಜೋಡಿ ರೈಲು ಮಾರ್ಗ; ಸಂಸದ ಭಗವಂತ ಖೂಬಾ ವಿಕಾರಾಬಾದ್-ಬೀದರ್-ಪರಳಿ ಜೋಡಿ ರೈಲು ಮಾರ್ಗಕ್ಕೆ ಸಹ ಇಲಾಖೆಯಿಂದ ಮಂಜೂರಾತಿ ಸಿಕ್ಕಿದೆ ಎಂದು ಹೇಳಿದ್ದಾರೆ.

267.77 ಕಿ. ಮೀ. ಜೋಡಿ ರೈಲು ಮಾರ್ಗ ಇದಾಗಿದೆ. ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಇಲಾಖೆ ಮಂಜೂರಾತಿ ನೀಡಿದ್ದು, ಸಮೀಕ್ಷೆಗಾಗಿ 5.36 ಕೋಟಿ ರೂ. ಅನುದಾನವನ್ನು ನೀಡಿದೆ. ಶೀಘ್ರದಲ್ಲೇ ಟೆಂಡರ್ ಕರೆದು, ಸಮೀಕ್ಷೆ ಕಾರ್ಯ ಆರಂಭಿಸುವ ನಿರೀಕ್ಷೆ ಇದೆ.

ವಿಕಾರಾಬಾದ್-ಬೀದರ್-ಪರಳಿ ಜೋಡಿ ರೈಲು ಮಾರ್ಗದಿಂದಾಗಿ ಹಲವು ರೈಲುಗಳ ಸಂಚಾರಕ್ಕೆ ಅನುಕೂಲವಾಗಲಿದೆ. ರೈಲುಗಳು ತೆಲಂಗಾಣದ ವಿಕಾರಾಬಾದ್ ನಿಲ್ದಾಣದಲ್ಲಿ ಕಾದು ನಿಲ್ಲುವುದು ತಪ್ಪಲಿದೆ.

ಸಂಸದ ಭಗವಂತ ಖೂಬಾ ಮಾತನಾಡಿ, "ಜೋಡಿ ರೈಲು ಮಾರ್ಗ ಇದಾಗಿದ್ದು, ಈ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಜೋಡಿ ಮಾರ್ಗ ಇಲ್ಲದ ಕಾರಣ ನಮ್ಮ ರೈಲುಗಳು ವಿಕಾರಾಬಾದ್ ಬಳಿ ನಿಲ್ಲಬೇಕಿದೆ. ಇದರಿಂದಾಗಿ ಬೀದರ್‌ಗೆ ಸರಿಯಾದ ಸಮಯಕ್ಕೆ ಆಗಮನ ಮತ್ತು ನಿರ್ಗಮನಕ್ಕೆ ತೊಂದರೆಯಾಗುತ್ತಿದೆ" ಎಂದರು.

ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರ ದೂರದೃಷ್ಟಿಯಿಂದಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳು, ಹೊಸ ರೈಲುಗಳು ಮುಂತಾದ ಸೌಲಭ್ಯಗಳು ನಮಗೆ ಸಿಗುತ್ತಿವೆ ಎಂದು ಸಚಿವರು ಹೇಳಿದ್ದಾರೆ. ವಿಕಾರಾಬಾದ್-ಬೀದರ್-ಪರಳಿ ಜೋಡಿ ರೈಲು ಮಾರ್ಗಕ್ಕೆ ಮಂಜೂರಾತಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+