ಬೀದರ್ : ಟೆಕ್ಕಿ ಹತ್ಯೆಯ ಮತ್ತೊಂದು ಭೀಕರ ವಿಡಿಯೋ ಬಹಿರಂಗ

ಬೀದರ್, ಜುಲೈ 17 : ಬೀದರ್‌ನಲ್ಲಿ ಮಕ್ಕಳ ಕಳ್ಳರೆಂಬ ವದಂತಿ ಹಿನ್ನಲೆಯಲ್ಲಿ ನಡೆದ ಟೆಕ್ಕಿ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಕ್ಸೆಂಚರ್ ಉದ್ಯೋಗಿ ಮೊಹ್ಮದ್ ಅಜಮ್ ಹತ್ಯೆ ಮಾಡುವ ಮುನ್ನ ಹಗ್ಗಕಟ್ಟಿ ಹೊಲದಲ್ಲಿ ಎಳೆದುಕೊಂಡು ಹೋಗುವ ವಿಡಿಯೋ ಈಗ ಬಹಿರಂಗವಾಗಿದೆ.

32 ವರ್ಷದ ಮೊಹ್ಮದ್ ಅಜಮ್‌ನನ್ನು ಶುಕ್ರವಾರ ರಾತ್ರಿ ಜನರು ಹೊಡೆದು ಸಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ಈಗ ಮಾಧ್ಯಮಗಳಿಗೆ ಸಿಕ್ಕಿದೆ. ಅಜಮ್‌ನನ್ನು ಜನರು ಹಗ್ಗಕಟ್ಟಿ ಹೊಡೆಯುತ್ತಾ ಎಳೆದುಕೊಂಡು ಹೋಗುತ್ತಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಮೊಹ್ಮದ್ ಅಜಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿವೆ. ವಾಟ್ಸಪ್‌ನಲ್ಲಿ ಹರಿದಾಡಿದ ಕೆಲವು ಸಂದೇಶಗಳಿಂದಾಗಿ ಮೊಹ್ಮದ್ ಅಜಮ್ ಪ್ರಾಣ ಕಳೆದುಕೊಳ್ಳುವಂತಾಗಿದೆ.

Bidar mob killing : Mohammad Azam dragged face down in muddy field in

ಮೊಹ್ಮದ್ ಅಜಮ್‌ನನ್ನು ಹಗ್ಗ ಕಟ್ಟಿ ಎಳೆದುಕೊಂಡು ಹೋಗುವಾಗ ಪೊಲೀಸರು ಸಹ ಅಲ್ಲೇ ಇದ್ದರು. ಅವರು ಜನರಿಗೆ ಕೈ ಮುಗಿದು ಮೊಹ್ಮದ್ ಅಜಮ್‌ಗೆ ಹೊಡೆಯಬೇಡಿ ಎಂದು ಮನವಿ ಮಾಡುತ್ತಿದ್ದರು. ಆದರೆ, ಯಾವ ಮನವಿಯೂ ಫಲ ಕೊಟ್ಟಿಲ್ಲ. ವಿಡಿಯೋ ಮೊಹ್ಮದ್ ಅಜಮ್ ಕೊನೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ.

ಮೊಹ್ಮದ್ ಅಜಮ್‌ ಹತ್ಯೆಗೆ ಯಾವುದೇ ಜಾತಿ, ಮತದ ಕಾರಣವಿಲ್ಲ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಜನರು ಕೊಂದು ಹಾಕಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2 ಎಫ್‌ಐಆರ್ ದಾಖಲು ಮಾಡಲಾಗಿದ್ದು, 28 ಜನರನ್ನು ಬಂಧಿಸಲಾಗಿದೆ. ಬಂಧಿಸಿದ ಆರೋಪಿಗಳಲ್ಲಿ ಇಬ್ಬರು ಮಹಿಳೆಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+