ಬೀದರ್ - ಕಲಬುರಗಿಗೆ ಹೊಸ ಡೆಮೋ ರೈಲಿಗೆ ಚಾಲನೆ

ಕಲಬುರಗಿ ಬೀದರ್‌ ಜನರ ಬಹುಬೇಡಿಕೆಯಾಗಿದ್ದ ಬೀದರ್ ಕಲಬುರಗಿ ರೈಲು ಸಂಚಾರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.

ಬೀದರ್‌, ಮಾರ್ಚ್‌ 4: ಬೀದರ್‌ನಿಂದ ಕಲಬುರಗಿಗೆ ಚಲಿಸುವ ಬೀದರ್‌ ಕಲಬುರಗಿ ಡೆಮೋ ರೈಲಿಗೆ ಶನಿವಾರ ಕೇಂದ್ರ ರಸಾಯನಿಕ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಹಸಿರು ನಿಶಾನೆ ತೋರಿದ್ದಾರೆ.

ಈ ಬಗ್ಗೆ ಒಂಬತ್ತು ವರ್ಷಗಳಿಂದ ನಾನು ನನ್ನ ಸ್ವಂತ ಪ್ರಭಾವದಿಂದ, ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳ ಹಾಗೂ ಎಲ್ಲರ ವಿಶ್ವಾಸಗಳಿಸಿ, ಮಾಡಿರುವ ಅಭಿವೃದ್ಧಿ ಕಾರ್ಯಗಳು, ಜನರಿಗೆ ನೀಡುತ್ತಿರುವ ಸೇವೆಗಳಿಂದ ಜನತೆ ಸಂತೃಪ್ತಿಯಾಗಿದ್ದಾರೆ ಎಂದು ಸಚಿವ ಭಗವಂತ ಖೂಬಾ ಟ್ವೀಟ್‌ ಮಾಡಿದ್ದಾರೆ.

Bidar - Kalaburagi new demo train launched

ಕಲಬುರಗಿ ಬೀದರ್‌ ಜನರ ಬಹುಬೇಡಿಕೆಯಾಗಿದ್ದ ಬೀದರ್ ಕಲಬುರಗಿ ರೈಲು ಸಂಚಾರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಬೀದರ್‌ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಭಗವಂತಾ ಖೂಬಾ ಚಾಲನೆ ನೀಡಿದ್ದಾರೆ. ಕಳೆದ ತಿಂಗಳು ಈ ರೈಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಕಲಬುರಗಿಯ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಕಲಬುರಗಿ-ಬೀದರ್ ನಡುವೆ ಮತ್ತೊಂದು ರೈಲು ಸಂಚಾರ ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಕುರಿತು ಅಶ್ವಿನಿ ವೈಷ್ಣವ್ ಡಾ. ಉಮೇಶ್‌ ಜಾಧವ್‌ಗೆ ಪತ್ರ ಬರೆದು ಮಾಹಿತಿ ನೀಡಿದ್ದರು.

ಕಲಬುರಗಿ-ಬೀದರ್ ನಡುವೆ ಈಗಾಗಲೇ ಒಂದು ಡೆಮೋ ರೈಲು ಸಂಚಾರ ನಡೆಸುತ್ತಿತ್ತಿ. ಇದು ದಿನಕ್ಕೆ ಎರಡು ಬಾರಿ ಓಡಾಟ ನಡೆಸುತ್ತದೆ. ಆದರೆ ಉಭಯ ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಿದ್ದು, ಮತ್ತೊಂದು ರೈಲು ಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಸಂಸದರು ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಈಗ ಆ ಡೆಮೋ ರೈಲಿಗೆ ಸಚಿವ ಭಗವಂತಾ ಖೂಬಾ ಚಾಲನೆ ನೀಡಿದ್ದಾರೆ.

Bidar - Kalaburagi new demo train launched

ಹೊಸದಾಗಿ ಕಲಬುರಗಿ-ಬೀದರ್ ನಡುವೆ ಸಂಚಾರ ಆರಂಭಿಸಿರುವ ಡೆಮೋ ರೈಲು ಪ್ರತಿದಿನ ಬೆಳಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು, 10.15ಕ್ಕೆ ಬೀದರ್ ತಲುಪಲಿದೆ. ಬೀದರ್‌ನಿಂದ 10.30ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿಗೆ ವಾಪಸ್ ಆಗಲಿದೆ. ಮತ್ತೆ 1.30ಕ್ಕೆ ಕಲಬುರಗಿಯಿಂದ ಹೊರಟು ಸಂಜೆ 4.45ಕ್ಕೆ ಬೀದರ್ ತಲುಪಲಿದೆ. ಬೀದರ್‌ನಿಂದ ಸಂಜೆ 5 ಗಂಟೆಗೆ ಹೊರಟು, ಸಂಜೆ 7.40ಕ್ಕೆ ಕಲಬುರಗಿಗೆ ವಾಪಸ್ ಆಗಲಿದೆ.

ಇದಲ್ಲದೆ ಈಗಾಗಲೇ ಕಲಬುರಗಿ, ಶಹಾಬಾದ್, ವಾಡಿ ಮತ್ತು ನಾಲವಾರ ರೈಲು ನಿಲ್ದಾಣಗಳಲ್ಲಿ ಪ್ರಮುಖ ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲ್ಲಿಸಲು ಅನುಮತಿ ಸಿಕ್ಕಿದೆ. ಶಹಾಬಾದ್ ರೈಲು ನಿಲ್ದಾಣದಲ್ಲಿ ಮುಂಬೈ-ನಾಗರಕೋಯಿಲ್ ಎಕ್ಸ್‌ಪ್ರೆಸ್, ಮುಂಬೈ-ತಿರುವನಂತಪುರಂ ಎಕ್ಸ್‌ಪ್ರೆಸ್ ರೈಲು ನಿಲ್ಲಲಿದೆ. ಕಲಬುರಗಿ ರೈಲು ನಿಲ್ದಾಣದಲ್ಲಿ ಅಹಮದಾಬಾದ್-ಚೆನ್ನೈ ಎಕ್ಸ್‌ಪ್ರೆಸ್, ಕೇವಾಡಿಯಾ-ಚೆನ್ನೈ ಎಕ್ಸ್‌ಪ್ರೆಸ್ ಮತ್ತು ವಾಡಿ ನಿಲ್ದಾಣದಲ್ಲಿ ಮುಂಬೈ ಎಲ್‌ಟಿಟಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಮತ್ತು ನಾಲವಾರದಲ್ಲಿ ಲಾತೂರ್-ಯಶವಂತಪುರ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+