ಸೈಕ್ಲೋನ್ ಫೋನಿಯಿಂದ ಒಡಿಶಾಕ್ಕೆ ಆದ ನಷ್ಟವೆಷ್ಟು?
ಭುವನೇಶ್ವರ, ಮೇ 15: ಒಡಿಶಾಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿ 64 ಜನರನ್ನು ಬಲಿಪಡೆದಿತ್ತು. ಇದರಿಂದ 525 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
291 ಕಿ.ಮೀ ವ್ಯಾಪ್ತಿಯ ಚರಂಡಿ, ಸುಮಾರು 750 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿವೆ. ಅಷ್ಟೇ ಅಲ್ಲದೆ ಕ್ರೀಡಾಂಗಣಗಳು, ಉದ್ಯಾನಗಳು, ಟೌನ್‌ಹಾಲ್ ಸೇರಿದಂತೆ ಇತರೆ ಕಟ್ಟಡಗಳಿಗೂ ಹೊಡೆದ ಬಿದ್ದಿದೆ.
ಈ ಕುರಿತು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಿ ಮಥಿವಥನಮ್ ಮಾಹಿತಿ ನೀಡಿದ್ದಾರೆ.

20 ನಗರಗಳಿಗೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಆಹಾರ ಯೋಜನೆಯ 27 ಸೆಂಟ್ರಲ್ ಕಿಚನ್‌ಗಳು ಹಾನಿಗೀಡಾಗಿವೆ. 21 ಸಾವಿರ ಬೀದಿದೀಪಗಳಿಗೆ ಹಾನಿ ಉಂಟಾಗಿದೆ. ಎಲ್ಲಾ ಸೇರಿ 525 ಕೋಟಿ ರೂ ನಷ್ಟು ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 64ಕ್ಕೇರಿದೆ ಅದರಲ್ಲಿ ಪುರಿ ಒಂದೇ ಕಡೆ 39 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1.65 ಕೋಟಿ ರೂ. ಜನಸಂಖ್ಯೆಯಲ್ಲಿ 34 ಲಕ್ಷ ಮಂದಿ ಫೋನಿ ಚಂಡಮಾರುತದಿಂದ ತೊಂದರೆ ಅನುಭವಿಸಿರುವುದಾಗಿ ಒಡಿಶಾ ಸರ್ಕಾರ ತಿಳಿಸಿದೆ.












Click it and Unblock the Notifications