ತಂಗಿ ಎಂದೂ ನೋಡದೆ ಅತ್ಯಾಚಾರ ಮಾಡಿಯೇ ಬಿಟ್ಟರು ಕಾಮುಕ ಸಹೋದರರು
ಸಾಗರ್, ಮಧ್ಯಪ್ರದೇಶ, ಮಾರ್ಚ್ 19: ಬಾಲಕಿ ಮೇಲೆ ಸೋದರರು ಹಾಗೂ ಸಂಬಂಧಿಯೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ್ ಪ್ರದೇಶದಲ್ಲಿ ನಡೆದಿದೆ.
ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಅದೇ ದಿನ ಊರಾಚೆ ಆಕೆಯ ಶವ ಪತ್ತೆಯಾಗಿದೆ. ಶಾಲೆಯಿಂದ ಮನೆಗೆ ವಾಪಸಾಗದಿದ್ದಾಗ ಆಕೆಯ ಪೋಷಕರು ದೂರು ನೀಡಿದ್ದರು.
ಬಾಲಕಿ ಮನೆ ಹಾಗೂ ಆಕೆಯ ಸಂಬಂಧಿ ಚೋಟೆ ಪಟೇಲ್ ಅವರ ಮಧ್ಯೆ ಆಸ್ತಿ ವಿಚಾರ ಸಂಬಂಧ ವ್ಯಾಜ್ಯವಿತ್ತು ಅವರೇ ಕೊಲೆ ಮಾಡಿರಬಹುದು ಎಂದು ಅನುಮಾನಿಸಲಾಗಿತ್ತು. ವಿಚಾರಣೆಯಲ್ಲಿ ಅನುಮಾನ ನಿಜವಾಗಿದೆ.

ಪೋಸ್ಟ್ ಮಾರ್ಟಮ್ ರಿಪೋರ್ಟ್ ವರದಿಯಲ್ಲಿ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ. ಆಕೆಯ ಒಬ್ಬ ಸಹೋದರ ಆಕೆಯನ್ನು ಕರೆದುಕೊಂಡು ಹೋಗಿ ಆಕೆಯ ಸಂಬಂಧಿ ಮನೆಗೆ ಬಿಟ್ಟಿದ್ದ, ಬಳಿಕ ಸಂಬಂಧಿ ಹಾಗೂ ಸಹೋದರರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಒಬ್ಬ ಸಹೋದರನನ್ನು ಪೊಲೀಸರು ಬಂಧಿಸಿದ್ದು ಇನ್ನೊಬ್ಬನ ಹುಡುಕಾಟದಲ್ಲಿದ್ದಾರೆ.
ಪರೀಕ್ಷೆ ಮುಗಿಸಿಕೊಂಡು ವಾಪಸ್ ತೆರಳುವಾಗ ಆಕೆಯ ಒಬ್ಬ ಸಹೋದರ ಆಕೆಯನ್ನು ಕರೆದುಕೊಂಡು ಸಂಬಂಧಿ ಮನೆಗೆ ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆಕೆ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದ ಬಳಿಕ ಆಕೆಯನ್ನು ಕೊಲೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಬಯಲು ಪ್ರದೇಶದಲ್ಲಿ ಆಕೆಯ ಶವವನ್ನು ಎಸೆದು ಪರಾರಿಯಾಗಿದ್ದರು.ತಮ್ಮ ಮೇಲೆ ಅನುಮಾನ ಬಾರದಿರುವಂತೆ ನಾಟಕವಾಡಿದ್ದರು.
ಅವರ ಪೋಷಕರ ಹೇಳಿಕೆ ಹಾಗೂ ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆ. ರಕ್ತಸಿಕ್ತವಾದ ಬಟ್ಟೆ ಹಾಗೂ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳು ದೊರೆತಿವೆ.












Click it and Unblock the Notifications