ಹುಡುಗನ ಜೊತೆ ಫೋನಿನಲ್ಲಿ ಮಾತಾಡಿದ್ದಕ್ಕೆ ಪೋಷಕರಿಂದ ಇದೆಂಥಾ ಶಿಕ್ಷೆ
ಭೋಪಾಲ್, ಫೆಬ್ರವರಿ 29: ಮಗಳು ಹುಡುಗನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಾಳೆ ಎಂದು ಸಂಶಯಪಟ್ಟು ಆಕೆಯನ್ನು ಥಳಿಸಿದ್ದಷ್ಟೆ ಅಲ್ಲದೆ ರಸ್ತೆಗೆ ಎಳೆದುತಂದು ತಲೆ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಎಲ್ಲರ ಜೀವನದಲ್ಲಿ ಸಮಾಜವೇ ಶತೃವಾದರೆ ಈ ಬಾಲಕಿ ಬದುಕಿನಲ್ಲಿ ಆಕೆಯ ಪೋಷಕರೇ ಶತೃವಿನಂತೆ ವರ್ತಿಸಿದ್ದಾರೆ. ತಾವು ಎತ್ತಾಡಿಸಿದ ಮಗಳ ಮಾನವನ್ನು ಎಲ್ಲೆರೆದುರು ಹರಾಜು ಹಾಕಿದ್ದಾರೆ.
ಯುವತಿ ಫೋನಿನಲ್ಲಿ ಮಾತನಾಡುವುದನ್ನು ನೋಡಿ ಆಕೆ ಹುಡುಗನ ಜೊತೆಯೇ ಮಾತನಾಡುತ್ತಿದ್ದಾಳೆ ಎಂದು ಸಂಶಯದಿಂದ ಕುಟುಂಬದ ಮೂವರು ಸದಸ್ಯರು ಸೇರಿ ಆಕೆಯನ್ನು ಥಳಿಸಿದ್ದಾರೆ. ಬಳಿಕ ರಸ್ತೆಯಲ್ಲಿ ಊರ ಜನರ ಎದುರು ಆಕೆಯ ತಲೆಕೂದಲನ್ನು ಕತ್ತರಿಸಿ ಅವಮಾನ ಮಾಡಿದ್ದಾರೆ.

ಘಟನೆ ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ನಡೆದಿದೆ.ಸಬ್ ಡಿವಿಜನಲ್ ಪೊಲೀಸ್ ಅಧಿಕಾರಿ ಬಬ್ಬರ್ ಅವರು ಹೇಳುವ ಪ್ರಕಾರ, ಆಕೆಯ ಕುಟುಂಬದ ಮೂವರನ್ನು ಬಂಧಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications