ಮ.ಪ್ರ.ದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಬಯಲು, ದೊಡ್ಡ ತಲೆಗಳೇ ಶಾಮೀಲು

ಭೋಪಾಲ್ (ಮಧ್ಯಪ್ರದೇಶ), ಸೆಪ್ಟೆಂಬರ್ 27: ಮಧ್ಯಪ್ರದೇಶದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣವೊಂದು ಬಯಲಿಗೆ ಬಿದ್ದಿದೆ. ಈ ಪ್ರಕರಣದಲ್ಲಿ ಹತ್ತಾರು ಅಧಿಕಾರಿಗಳು, ಎಂಟು ಮಾಜಿ ಸಚಿವರನ್ನು ವಿಚಾರಣೆ ನಡೆಸಲಾಗಿದೆ. ಇದು ಹೈ ಪ್ರೊಫೈಲ್ ಸುಲಿಗೆ ದಂಧೆಯಾಗಿದ್ದು, 1000 ಲೈಂಗಿಕ ಚಾಟ್ ನ ಕ್ಲಿಪ್ಸ್, ವಿಡಿಯೋಗಳು ಹಾಗೂ ಆಡಿಯೋಗಳು ಕಂಪ್ಯೂಟರ್ಸ್ ಮತ್ತು ಮೊಬೈಲ್ ಫೋನ್ ಗಳಲ್ಲಿ ಕಂಡುಬಂದಿವೆ.

Recommended Video

      ಸೋನಿಯಾ ಗಾಂಧಿಗೆ ಎದುರಾಯ್ತು ದೊಡ್ಡ ತಲೆನೋವು..! | Sonia Gandhi | Oneindia Kannada

      ಈ ಹಗರಣವನ್ನು 'ಹನಿ ಟ್ರ್ಯಾಪಿಂಗ್' ಎನ್ನಲಾಗಿದ್ದು, ಮುಖ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವ ಹುನ್ನಾರ ಇದಾಗಿದೆ. ಇದರಲ್ಲಿ ಐವರು ಮಹಿಳೆಯರು ಒಳಗೊಂಡಿದ್ದಾರೆ. ಲೈಂಗಿಕ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

      ಇನ್ನೂರಕ್ಕೂ ಹೆಚ್ಚು ಮೊಬೈಲ್ ಫೋನ್ ಕಾಂಟ್ಯಾಕ್ಟ್ ಗಳನ್ನು ಒಳಗೊಂಡಿರುವ ಈ ಹಗರಣವು ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬ ಅಂಶವು ತಿಳಿದುಬಂದಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಬಯಲಾಗಿರುವ ಪ್ರಮುಖ ಸಂಗತಿಗಳು ಇಲ್ಲಿವೆ.

      Countrys Biggest Sex Scandal Unearthed In Madhya Pradesh

      * ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಹತ್ತಕ್ಕೂ ಹೆಚ್ಚು ಅಧಿಕಾರಿಗಳನ್ನು ವಿಚಾರಣೆ ಮಾಡಲಾಗಿದೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಸಂಜೀವ್ ಶಮಿ ತಿಳಿಸಿದ್ದಾರೆ. ಇನ್ನು ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ರಾಜಕೀಯ ನಾಯಕರಿದ್ದಾರೆ.

      * ಶ್ವೇತಾ ಜೈನ್, ಬರ್ಖಾ ಸೋನಿ (ಕಾಂಗ್ರೆಸ್ ಐಟಿ ಸೆಲ್ ನ ಅಮಿತ್ ಸೋನಿ ಪತ್ನಿ), ಹದಿನೆಂಟು ವರ್ಷದ ಕಾಲೇಜು ವಿದ್ಯಾರ್ಥಿನಿ, ಆರ್ತಿ ದಯಾಲ್ ಹಾಗೂ ಆಕೆಯ ಚಾಲಕನನ್ನು ಬಂಧಿಸಲಾಗಿದೆ.

      * ಶ್ವೇತಾ ಜೈನ್ ಸ್ಥಳೀಯವಾಗಿ ಎನ್ ಜಿಒ ನಡೆಸುತ್ತಿದ್ದು, ಬಿಜೆಪಿ ಶಾಸಕ ಬ್ರಿಜೇಂದ್ರ ಪ್ರತಾಪ್ ಸಿಂಗ್ ಮನೆಯನ್ನು ಬಾಡಿಗೆಗೆ ಪಡೆದು, ಕಾರ್ಯಾಚರಣೆ ನಡೆಸುತ್ತಿದ್ದಳು. ಆಕೆ ಮಧ್ಯಪ್ರದೇಶದ ಪ್ರಭಾವಿ ರಾಜಕಾರಣಿಗಳ ಜತೆಗೆ ಮಾತ್ರವಲ್ಲ, ಮಹಾರಾಷ್ಟ್ರದ ಮರಾಠವಾಡ ಭಾಗದ ರಾಜಕೀಯ ನಾಯಕರ ಜತೆಗೂ ನಂಟು ಹೊಂದಿದ್ದಳು. ಮಧ್ಯಪ್ರದೇಶದ ಮಾಜಿ ಸಚಿವರೊಬ್ಬರ ಮೂಲಕ ಇವರೆಲ್ಲರ ಜತೆ ಸಂಪರ್ಕಕ್ಕೆ ಬಂದಿದ್ದಳು ಎನ್ನಲಾಗಿದೆ.

      * ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಆಮಿಷ ಒಡ್ಡಲು ಶ್ವೇತಾ ಜೈನ್, ಕೆಳ ಮಧ್ಯಮ ವರ್ಗದ ಕನಿಷ್ಠ ಇಪ್ಪತ್ತೈದು ಯುವತಿಯರನ್ನು ಬಳಸಿಕೊಂಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ಕೆಲಸ ಕೊಡಿಸುತ್ತೇನೆ, ದುಬಾರಿ ಜೀವನಶೈಲಿ, ಔಡಿ ಕಾರು ಹಾಗೂ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ರೂಮ್ ಗಳನ್ನು ಮಾಡಿಕೊಡುವ ಆಸೆ ತೋರಿಸುತ್ತಿದ್ದಳು ಎಂದು ತಿಳಿದುಬಂದಿದೆ.

      * ಕೋಟ್ಯಂತರ ರುಪಾಯಿ ಮೌಲ್ಯದ ಸರ್ಕಾರದ ಕಾಂಟ್ರ್ಯಾಕ್ಟ್ ಪಡೆಯಲು ಹೀಗೆ ಮಾಡುತ್ತಿದ್ದುದಾಗಿ ಶ್ವೇತಾ ಜೈನ್ ಹೇಳಿಕೊಂಡಿದ್ದಾಳೆ. ಪ್ರತಿಷ್ಠಿತ ಕಂಪೆನಿಗಳಿಂದ ಕಮಿಷನ್ ಪದೆಯುತ್ತಿದ್ದ ಶ್ವೇತಾ ಜೈನ್ ಹಾಗೂ ಆರ್ತಿ ದಯಾಲ್ ಸರ್ಕಾರದ ಕಾಂಟ್ರ್ಯಾಕ್ಟ್ ಕೊಡಿಸುತ್ತಿದ್ದರು. ಇನ್ನು ಶ್ವೇತಾ ಜೈನ್ ಅಂತೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕೂಡ ಮಾಡಿಸುತ್ತಿದ್ದಳು ಎಂಬುದು ತಿಳಿದುಬಂದಿದೆ.

      * ಪ್ರಭಾವಿಗಳು ಹಾಗೂ ಶ್ರೀಮಂತರ ಸಾವಿರಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿಟ್ಟುಕೊಂಡು, ಈ ಗ್ಯಾಂಗ್ ಹಣ ಸುಲಿಗೆ ಮಾಡುತ್ತಿತ್ತು ಎಂದು ಹೇಳಲಾಗಿದೆ.

      * ಶ್ವೇತಾ ಜೈನ್ ಮನೆಯಿಂದ ಲ್ಯಾಪ್ ಟಾಪ್ ಗಳು, ಮೊಬೈಲ್ ಫೋನ್ ಗಳು, ದಾಖಲೆಗಳು ಹಾಗೂ ವಿಡಿಯೋ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

      * ಈ ಹಗರಣದಲ್ಲಿ ಆರೋಪಿಯಾಗಿರುವ ಪ್ರತಿ ಮಹಿಳೆಯೂ ತನ್ನದೇ ಗ್ಯಾಂಗ್ ನಡೆಸುತ್ತಿದ್ದುದು ಗೊತ್ತಾಗಿದ್ದು, ತಮಗೆ ಬೇಕಾದ ಅನುಕೂಲ ಪಡೆಯುವ ಸಲುವಾಗಿ ನಡೆಯುತ್ತಿದ್ದ ದೇಶದ ಅತಿ ದೊಡ್ಡ ಲೈಂಗಿಕ ಹಗರಣ ಇದೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

      * ಈ ಗುಂಪಿನ ಪೈಕಿ ಒಂದು ಗ್ಯಾಂಗ್ ಈಚೆಗೆ ಟಾಪ್ ಐಎಎಸ್ ಅಧಿಕಾರಿಯ ವಿಡಿಯೋ ಇಟ್ಟುಕೊಂಡು, ಎರಡು ಕೋಟಿ ರುಪಾಯಿ ಹಣವನ್ನು ಕೇಳಿತ್ತು.

      * ಇಂದೋರ್ ನಗರ ಪಾಲಿಕೆ ಅಧಿಕಾರಿಯೊಬ್ಬರ ಬಳಿ ಮೂರು ಕೋಟಿ ರುಪಾಯಿ ಹಣಕ್ಕೆ ಬೇಡಿಕೆ ಇಟ್ಟಾಗ ಅವರು ಅರ್ತಿ ದಯಾಲ್ ವಿರುದ್ಧ ದೂರು ದಾಖಲಿಸಿದರು. ಆ ಮೇಲೆ ಈ ಹಗರಣ ಬೆಳಕಿಗೆ ಬಂತು. ಮೂರು ಕೋಟಿಯ ಪೈಕಿ ಮೊದಲ ಕಂತು ಐವತ್ತು ಲಕ್ಷ ರುಪಾಯಿ ಪಡೆಯಲು ಆರ್ತಿ ಇಂದೋರ್ ಗೆ ತೆರಳುವಾಗ ಪೊಲೀಸರು ಆಕೆಯನ್ನು ಬಂಧಿಸಿದರು. ಆಕೆಯ ವಿಚಾರಣೆ ನಡೆಸುವಾಗ ಬಾಯ್ಬಿಟ್ಟ ಸಂಗತಿಗಳಿಂದ ಇತರರನ್ನು ಬಂಧಿಸಲಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+