ಫೇಸ್‌ಬುಕ್ ಯುವತಿಯರಿಗೆ ಸೆಕ್ಸ್ ವಿಡಿಯೋ ಡೆಲಿವರಿ..!
ಬೆಂಗಳೂರು, ಜೂನ್1: ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಜನರು ಸಾಕಷ್ಟು ಹುಚ್ಚುತವನ್ನು ಮೆರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯದಕ್ಕೆ ಬಳಸದೇ ವಿಕೃತ ಮನೋಭಾವಕ್ಕೆ ಬಳಸಿ ಅಸಹ್ಯವನ್ನು ಉಂಟು ಮಾಡುತ್ತಿದ್ದಾರೆ. ಕಾಮವನ್ನು ಕೆರಳಿಸಲು ಜೊಮ್ಯಾಟೋ ಡೆಲಿವರಿ ಬಾಯ್ ಮಾಡಬಾರದ ಕೆಲಸವನ್ನು ಮಾಡುತ್ತಿದ್ದ ತಪ್ಪಿಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆತನನ್ನು ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ.
ಜೊಮ್ಯಾಟೋ ಡೆಲಿವಿರಿ ಬಾಯ್.. ಛೇ ಅಲ್ಲ ಅಲ್ಲಾ ಅಂಕಲ್.. 40 ವರ್ಷದ ಪುರುಷೋತ್ತಮ ತಾನು ವಿದೇಶಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ. ಆ ವಿಡಿಯೋವನ್ನು ನೋಡಿ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದ. ಅಪ್ರಾಪ್ತೆಯರ ವಿಡಿಯೋವನ್ನೇ ಹೆಚ್ಚಾಗಿ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ. ಪದೇ ಪದೇ ವಿಡಿಯೋವನ್ನು ನೋಡಿ ವಿಕೃತ ಸಂತೋಷವನ್ನು ಅನುಭವಿಸುತ್ತಿದ್ದ.
ಈತ ವೆಬ್‌ಸೈಟ್‌ಗಳಲ್ಲಿ ವಿದೇಶಿ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ ಪುರುಷೋತ್ತಮ್ ವಿಡಿಯೋವನ್ನು ಚಂದ ಚಂದದ ಹುಡುಗಿಯರಿಗೆ ಕಳುಹಿಸುತ್ತಿದ್ದ. ಅದು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಫೇಸ್‌ಬುಕ್‌ನಲ್ಲಿ. ಆ ಮೂಲಕವಾಗಿ ಕಾಮಭಾವನೆಯನ್ನು ಕೆರಳಿಸುವಂತ ಕೆಲಸವನ್ನು ಮಾಡುತ್ತಿದ್ದ ಎನ್ನಲಾಗಿದೆ. ಈತನ ಫೇಸ್‌ಬುಕ್ ಅಕೌಂಟ್ ಮೇಲೆ ಸಿಐಡಿ ಸೈಬರ್ ಸೆಲ್ ಅಧಿಕಾರಿಗಳು ಸಹ ನಿಗಾವನ್ನು ಇಟ್ಟಿದ್ದರು.

ಮನೆಯನ್ನೇ ಖಾಲಿ ಮಾಡಿದ್ದ ಕಿರಾತಕ
ಸಿಐಡಿ ಸೈಬರ್ ಸೆಲ್‌ನ ಅಧಿಕಾರಿಗಳು ಪುರುಷೋತ್ತಮ್‌ನ ಚಟುವಟಿಕೆ ಬಗ್ಗೆ ನಿಗಾ ಇಟ್ಟಿದ್ದರು. ಇದರಿಂದಾಗಿ ಆಗ್ನೇಯ ವಿಭಾಗದ ಸೈಬರ್ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದರು. ಸೈಬರ್ ಪೊಲೀಸರು ಮಡಿವಾಳ, ಕೋರಮಂಗಲದ ನಿವಾಸಿಯಾಗಿದ್ದ ಪುರುಷೋತ್ತಮ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ತನ್ನ ಮೇಲೆ ಪ್ರಕರಣ ದಾಖಲಾಗಿರೋ ಬಗ್ಗೆ ಅನುಮಾನ ಬಂದು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿದ್ದ ಪುರುಷೋತ್ತಮನನ್ನು ಹಿಡಿಯುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಸಕ್ಸಸ್ ಆಗಿದ್ದಾರೆ.

ಮಸೇಂಜರ್ ಮೂಲಕ ಕಾಮಕ್ರೀಡೆಗೆ ಆಫರ್
ಪುರುಷೋತ್ತಮ ಫೇಸ್‌ಬುಕ್‌ನಲ್ಲಿ ಸುಂದರ ಯುವತಿಯರನ್ನು ಗಮನಿಸುತ್ತಿದ್ದ. ಭಾರತೀಯರು ಮತ್ತು ವಿದೇಶಿ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಯುವತಿಯರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸುತ್ತಿದ್ದಂತೆ ಮೆಸೇಂಜರ್ ಮೂಲಕ ಚಾಟಿಂಗ್ ಮಾಡುತ್ತಿದ್ದ. Do u like sex vidieo ಎಂದು ಮೆಸೇಜ್ ಮಾಡ್ತಿದ್ದ. ಮೆಸೆಂಜರ್‌ನಲ್ಲಿ yes ಎಂಬ ರಿಪ್ಲೇ ಬಂದರೇ ಸಾಕು ಅವರಿಗೆ ವಿಡಿಯೋವನ್ನು ಶೇರ್ ಮಾಡುತ್ತಿದ್ದ. ಆ ಮೂಲಕ ಯುವತಿಯರ ಸ್ನೇಹವನ್ನು ಸಂಪಾದಿಸಿ ಅವರಿಗೆ ತಾನೂ ಡೌನ್‌ಲೋಡ್ ಮಾಡಿಕೊಂಡಿದ್ದ ವಿಡಿಯೋವನ್ನು ಕಳುಹಿಸುತ್ತಿದ್ದ.

ಐಟಿ ಆಕ್ಟ್ 67B ಅಡಿಯಲ್ಲಿ ಪ್ರಕರಣ
ಸೆಕ್ಸ್ ವಿಡಿಯೋ ಮತ್ತು ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಮೆಸೇಂಜರ್, ಟ್ವಿಟ್ಟರ್ ಸೇರಿದಂತೆ ಎಲ್ಲೂ ಹಾಕುವಂತಿಲ್ಲ. ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ ಶೇಖರಿಸುವುದು ಐಟಿ ಆಕ್ಟ್ ಪ್ರಕಾರ ಅಪರಾಧವಾಗಿರುತ್ತದೆ. ಅಪ್ರಾಪ್ತ ಮಕ್ಕಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವುದಕ್ಕೆ ಐಟಿ ಆಕ್ಟ್ 67B ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಜೊಮ್ಯಾಟೋ ಡಿಲಿವರಿ ಬಾಯ್ ಪುರುಷೋತ್ತಮನನ್ನು ಬಂಧಿಸಲಾಗಿದೆ.

ಸುಮೋಟೋ ಕೇಸ್ ದಾಖಲು
ಪುರುಷೋತ್ತಮ ಫೇಸ್‌ಬುಕ್‌ನಲ್ಲಿ ಸಣ್ಣವಯಸ್ಸಿನ ಯುವತಿಯ ಫೋಟೋ ಹಾಕಿದ್ದವರನ್ನೇ ಟಾರ್ಗೇಟ್ ಮಾಡುತ್ತಿದ್ದ. ಅವರ ಸ್ನೇಹಗಳಿಸಿ ವಿಡಿಯೋ ಕಳುಹಿಸುತ್ತಿದ್ದ. ಯುವತಿಯರ ಜೊತೆ ಚಾಟ್ ಮಾಡೋದು ಸೆಕ್ಸ್ ವಿಚಾರವಾಗಿ ಮಾತನಾಡುವುದರಿಂದ ನನಗೆ ಬಹಳ ಸಂತೋಷವಾಗುತ್ತಿತ್ತು ಎಂದು ತನ್ನ ವಿಕೃತ ಸಂತೋಷದ ಕುರಿತು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾನೆ. ಈತನ ವಿರುದ್ದ ಯಾರೂ ಕೇಸನ್ನು ನೀಡಿಲ್ಲ. ಇದರಿಂದಾಗಿ ಆಗ್ನೇಯ ವಿಭಾಗದ ಸಿಇಎನ್ ಇನ್ಸ್‌ಪೆಕ್ಟರ್ ಎಸ್‌ಟಿ ಯೋಗೇಶ್ ಸುಮೋಟೋ ಕೇಸ್ ದಾಖಲಿಸಿಕೊಂಡು ಆರೋಪಿಯ ಹೆಡೆಮುರಿಯನ್ನು ಕಟ್ಟಿದ್ದಾರೆ.












Click it and Unblock the Notifications