ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪರಿಸರ ಸ್ನೇಹಿ ಇ-ಬೈಕ್ ಲೋಕಾರ್ಪಣೆ
ಬೆಂಗಳೂರು, ಮೇ 31: ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿ (ಎಲ್ಸಿಟಾ) ಸಂಸ್ಥೆ ಹಾಗೂ ಯೂಲು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪರಿಸರ ಸ್ನೇಹಿ ಇ-ಬೈಕ್ "ಯೂಲು ಮಿರಾಕಲ್"ಅನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಂದು ಲೋಕಾರ್ಪಣೆ ಮಾಡಲಾಯಿತು. ಸುಮಾರು 200 ಇ-ಬೈಕ್ ಗಳನ್ನು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಈವರೆಗೆ ನಿಯೋಜಿಸಲಾಗಿದೆ.
ಉದ್ಘಾಟನೆ ನಂತರ ಮಾತನಾಡಿದ ಎಲ್ಸಿಟಾ ಮುಖ್ಯ ಕಾರ್ಯ ನಿರ್ವಣಾ ಅಧಿಕಾರಿ ರಮಾ ಎನ್. ಎಸ್. ಕೆಲವು ತಿಂಗಳ ಹಿಂದಷ್ಟೆ ಲೋಕಾರ್ಪಣೆಯಾದ ಯೂಲು ಸೈಕಲ್ ಸೇವೆ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಆ ಕಾರಣಕ್ಕಾಗಿ ಬ್ಯಾಟರೀ ಚಾಲಿತ ಯೂಲು ಮಿರಾಕಲ್ ಬೈಕ್ ಸೇವೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪ್ರಾರಂಭಿಸಲಾಗಿದೆ. ಈ ಸೇವೆಯು ಮಹಿಳೆಯರಿಗೆ ಹೆಚ್ಚಾಗಿ ಪ್ರಯೋಜನವಾಗಬಹುದು ಎಂದು ನಮ್ಮ ನಂಬಿಕೆ. ಯೂಲು ಮಿರಾಕಲ್ ನಿಂದಾಗಿ ಟ್ರಾಫಿಕ್ ಸಮಸ್ಯೆ ಬಹಳಷ್ಟು ಕಡಿಮೆಯಾಗುವುದು ಖಂಡಿತ ಎಂದು ಅಭಿಪ್ರಾಯಪಟ್ಟರು.
ಯೂಲು ಮಿರಾಕಲ್ ಕುರಿತು ಪ್ರತಿಕ್ರೀಯಿಸಿದ ಯೂಲು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅಮಿತ್ ಗುಪ್ತಾ, ಎಲೆಕ್ಟ್ರಾಕ್ಸ್ ಸಿಟಿಯಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಸಲುವಾಗಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಯೂಲು ಮಿರಾಕಲ್ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಇನ್ನಷ್ಟು ಹಸಿರಾಗಿಸುವಲ್ಲಿ ಸಹಕರಿಸಲಿದೆ ಎಂದರು.

ಎಲ್ಸಿಟಾ (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ)
2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ಸ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.

ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ 'ಯುಲು'
ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ 'ಯುಲು' ಕಂಪನಿಯು ಬೆಂಗಳೂರಿನ ಕೆಲವೆಡೆ ಕಾರ್ಯಾರಂಭ ಮಾಡಿದೆ. ಎಂ.ಜಿ.ರಸ್ತೆ ಸೇರಿದಂತೆ 19 ನಿಲ್ದಾಣಗಳನ್ನು ಘೋಷಿಸಲಾಗಿತ್ತು. ಯುಲು ಕಂಪನಿಯು ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 2, 300 ಸೈಕಲ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದೆ. ಉಳಿದ ಕಂಪನಿಗಳು ಸದ್ಯದಲ್ಲೆ ಸೇವೆ ಆರಂಭಿಸಲಿವೆ. ಪ್ರತಿ ಬೈಸಿಕಲ್‌ಗೆ ವಾರ್ಷಿಕ 50 ರೂ.ಶುಲ್ಕ ವಿಧಿಸಿ, ಪರವಾನಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

24 ಗಂಟೆಯೂ ಬೈಸಿಕಲ್ ಲಭ್ಯ
ಯುಲು ಕಂಪನಿಯು 10 ಮೆಟ್ರೊ ನಿಲ್ದಾಣ ಹಾಗೂ ನಗರದ ಇತರೆ ಪ್ರದೇಶಗಳಲ್ಲೂ ಸೇವೆ ಆರಂಭಿಸಿದ್ದು, ಎಲ್ಲೆಡೆ ದಿನದ 24 ಗಂಟೆಯೂ ಸೈಕಲ್ ಲಭ್ಯವಿರುತ್ತದೆ. ಬಳಕೆದಾರರು ಯುಲು ಆ್ಯಪ್ ಡೌನ್ಲೋಡ್ ಮಾಡಿಕೊಂಡು, ನೋಂದಣಿಯಾಗಬೇಕು. ಆನಂತರ 100 ರೂ. ಠೇವಣಿ ಇಡಬೇಕು. ಬಳಿಕ ಆಪ್ ಮೂಲಕ ಯುಆರ್ ಕೋಡ್ ಸ್ಕಾನ್ ಮಾಡಿದ ಕೂಡಲೇ ಬೀಗ ತೆಗೆದುಕೊಳ್ಳಲಿದೆ. ಆ ಬಳಿಕ ನಿಗದಿತ ಸ್ಥಳ ತಲುಪಿದ ನಂತರ ಸಮೀಪದ ಪಾರ್ಕಿಂಗ್ ಹಬ್‌ನಲ್ಲಿ ಸೈಕಲ್ ನಿಲುಗಡೆ ಮಾಡಬಹುದು.

ಪ್ರತಿ ಸೈಕಲ್ ಕೂಡಾ ಜಿಪಿಎಸ್
ಸೈಕಲ್ ಜಿಪಿಎಸ್ ವ್ಯವಸ್ಥೆ, ಕಾರ್ಡ್‌ಲೆಸ್ ತಂತ್ರಜ್ಞಾನ(ಆ್ಯಪ್ ಮೂಲಕ ಬೀಗ ತೆರೆಯುವ ವಿಧಾನ) ಹೊಂದಿದೆ. ಈ ನಿಟ್ಟನಲ್ಲಿ ಸೈಕಲ್ ಕಳ್ಳತನ ಮಾಡುವುದು ಕಷ್ಟ. ಪ್ರತಿ ನಿಲ್ದಾಣದಲ್ಲಿ 50 ಸೈಕಲ್‌ಗಳು ಬಾಡಿಗೆಗೆ ಲಭ್ಯವಿರುತ್ತವೆ. ಬೈಯಪ್ಪನಹಳ್ಳಿ, ಇಂದಿರಾನಗರ, ಹಲಸೂರು, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಕಬ್ಬನ್‌ಪಾರ್ಕ್, ವಿಧಾನಸೌಧ ಮೆಟ್ರೊ ನಿಲ್ದಾಣಗಳು ಸೇರಿ ಹಲವು ಕಡೆಗಳಲ್ಲಿ ಸೈಕಲ್ ಲಭ್ಯವಿರುತ್ತವೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications