Fidias Panayiotou: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದ ಯೂಟ್ಯೂಬರ್, ಆತನ ವಿರುದ್ಧ BMRCL ಕ್ರಮ
ಬೆಂಗಳೂರು, ಸೆಪ್ಟಂಬರ್ 24: ಬಿಲಿಯನೇರ್ ಎಲೋನ್ ಮಸ್ಕ್ (Ellon Musk) ಅವರನ್ನು ಅಪ್ಪಿ ಸುದ್ದಿಯಾಗಿದ್ದ ವಿದೇಶಿ ಯೂಟೂಬರ್ ಇದೀಗ ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಪ್ರಯಾಣ ಮಾಡಿದ್ದಾನೆ. ಅಷ್ಟೇ ಅಲ್ಲದೇ ಪ್ರಯಾಣ ಕುರಿತ ವಿಡಿಯೋವನ್ನು ಅಪ್ಲೋಡ್ ಮಾಡಿದ ಆತನ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಮಸ್ಕ್ ಅಪ್ಪಿಕೊಂಡು ಜನಪ್ರಿಯತೆ ಗಳಿಸಿದ್ದ ವಿದೇಶಿ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಕಾಮಿಡಿ ಸ್ಟಾರ್ ಫಿಡಿಯಾಸ್ ಪನಾಯೊಟೌ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದಾರೆ. ಭಾರತೀಯ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸಿ ಅದರ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ಟಿಕೆಟ್ ಇಲ್ಲದೇ ಪ್ರಯಾಣ ಮಾಡುವುದು ಹೇಗೆ ಎಂದು ವಿವರಣೆ ನೀಡಿದ ವಿಡಿಯೋ ಅನ್ನು ಆತನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇದರಲ್ಲಿ ನಮ್ಮ ಮೆಟ್ರೋ ನಿಯಮ ಉಲ್ಲಂಘನೆ ಸ್ಪಷ್ಟವಾಗಿ ಕಾಣಿಸುತ್ತದೆ.

ಸೈಪ್ರಸ್ ದೇಶದ ಫಿಡಿಯಾಸ್ ಹೆಸರಿನ ಯೂಟ್ಯೂಬರ್, 'ವೃತ್ತಿಪರ ತಪ್ಪು ಮಾಡುವದು ಹೇಗೆ ಎಂದು ವಿವರಿಸಿದ್ದಾರೆ. ಈತ ತನ್ನ ಯೂಟ್ಯೂಬ್ ಚಾನೆಲ್‌ಗೆ 2.26 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾನೆ. 'ಭಾರತೀಯ ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ (ಜಿಗಿಯುವುದು) ನುಸುಳುವುದು ಹೇಗೆ' ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ತಪ್ಪ ಮಾಡುವುದನ್ನು ತಿಳಿಸಿದ್ದಾನೆ.
ಕೂಪನ್ ಹಾಕದೇ ಜಂಪ್ ಮಾಡಿದ ಯೂಟ್ಯೂಬರ್
ಘಟನೆ ವೇಳೆ ಫಿಡಿಯಾಸ್ ನೀಲಿ ಶಾರ್ಟ್, ಬಿಳಿ ಟೀ ಶರ್ಟ್ ಧರಿಸಿದ್ದಾರೆ. ಟಿಕೆಟ್ ಇಲ್ಲದೇ ಕೌಂಟರ್ ದಾಟಿ ಬರುವ ಈತ ವಿಡಿಯೋದಲ್ಲಿ ಮಾತನಾಡಿಕೊಂಡೆ ಮೆಟ್ರೋ ನಿಲ್ದಾಣದಿಂದ ಹೊರ ಬಂದಿದ್ದಾನೆ. ಟಿಕೆಟ್ ಪಡೆದವರು ಒಂದು ಕಡೆ ಸರತಿ ಸಾಲಿನಲ್ಲಿ ನಿಂತ ಟಿಕೆಟ್ ಅನ್ನು ಕೌಂಟರ್‌ನಲ್ಲಿ ಹಾಕಿ ನಿಯಮಾನುಸಾರ ದಾಟಿ ಬರುತ್ತಿದ್ದರೆ, ಈತ ಮಾತ್ರ ಅಡ್ಡಲಾಗಿ ಹಾಕಿರುವ ಗ್ರೀನ್ ಬಾಗಿಲುಗಳನ್ನು ಜಂಪ್ ಮಾಡಿ (ದಾಟಿ) ಹೊರ ಬರುತ್ತಾನೆ.
ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಇಷ್ಟೇ ಭಾರತೀಯ ಸಾರಿಗೆ ಯಲ್ಲಿ ಉಚಿತವಾಗಿ ಓಡಾಡುವುದು ಎಂದು ಆತ ವಿವರಿಸಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದೆ.
How To Sneak Into The Indian Metro pic.twitter.com/uEJgtGGKda
— Fidias (@Fidias0) September 21, 2023
ಫಿಡಿಯಾಸ್ ಮೇಲೆ ಕ್ರಿಮಿನಲ್ ಕೇಸ್: BMRCL ಎಂಡಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಅಸಮಾಧಾನ ಹೊರ ಹಾಕಿದ್ದಾರೆ. ವ್ಯಕ್ತಿಯೊಬ್ಬ ಟಿಕೆಟ್ ಇಲ್ಲದೆ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿ ಮೆಟ್ರೋದಲ್ಲಿ ಪ್ರಯಾಣಿಸುವ ವೀಡಿಯೊವನ್ನು ಗಮನಿಸಿದ್ದೇನೆ.
ಇಂತಹ ನಡವಳಿಕೆಯನ್ನು ನಾವು ಸಹಿಸುವುದಿಲ್ಲ. ಈ ವಿಡಿಯೋ ಬಗ್ಗೆ ಸಂಬಂಧಿಸಿದ ಅಧಿಕಾರಿಯನ್ನು ಪ್ರಕರಣ ದಾಖಲಿಸಲು ಕೇಳಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇವೆ. ವೀಡಿಯೊ ಕ್ಲಿಪ್‌ನಲ್ಲಿ, ಫಿಡಿಯಾಸ್ ಸ್ಮಾರ್ಟ್‌ಕಾರ್ಡ್ ಅಥವಾ ಟೋಕನ್ ಅನ್ನು ಟ್ಯಾಪ್ ಮಾಡದೆ ಟಿಕೆಟ್ ಇಲ್ಲದೆಯೇ ನಿಲ್ದಾಣ ಪ್ರವೇಶಿಸುವ ಮೊದಲು ಮತ್ತು ನಿಲ್ದಾಣದಿಂದ ನಿರ್ಗಮಿಸುವ ವೇಳೆ ಜಂಪ್ ಮಾಡಿದ್ದಾರೆ. ಇಂತಹ ಕೃತ್ಯವನ್ನು ವಿದೇಶಗಳನ್ನು ಅಪರಾಧವೆಂದು ಪರಿಗಣಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

2011ರಿಂದ ಈವರೆಗೆ ಈ ರೀತಿಯ ಕೇಸ್ ಇದೇ ಮೊದಲು
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 2011 ರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಅಲ್ಲಿಂದ ಈವರೆಗೆ ಟಿಕೆಟ್ ಇಲ್ಲದೇ ಜಂಪ್ ಮಾಡಿ ಪ್ರಯಾಣಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿದು ಬಂದಿದೆ.
ಆರಂಭಿಸಿದ ಬೆಂಗಳೂರು ಮೆಟ್ರೋದಲ್ಲಿ ಟರ್ನ್‌ಸ್ಟೈಲ್ ಜಂಪಿಂಗ್‌ನ ಮೊದಲ ದಾಖಲಾದ ಪ್ರಕರಣ ಎಂದು ಹೇಳಲಾಗುತ್ತದೆ. ಫಿದಿಯಾಸ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅವರು ಬಿಳಿ ಟಿ-ಶರ್ಟ್ ಮತ್ತು ನೀಲಿ ಶಾರ್ಟ್ಸ್‌ನಲ್ಲಿ ಮೆಟ್ರೋ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ: " ಭಾರತದಲ್ಲಿ ಮೆಟ್ರೋವನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ನಾನು ನಿಮಗೆ ಕಲಿಸುತ್ತೇನೆ.
ಅವನು ಇಬ್ಬರು ಪ್ರಯಾಣಿಕರ ಕಡೆಗೆ ತಿರುಗಿ ಕೇಳುತ್ತಾನೆ: "ನಾನು ಅದನ್ನು ಉಚಿತವಾಗಿ ಪಡೆಯುತ್ತೇನೆ ಅಥವಾ ಇಲ್ಲವೇ?" ಒಬ್ಬರು ಋಣಾತ್ಮಕವಾಗಿ ಉತ್ತರಿಸುತ್ತಾರೆ, ಆದರೆ ಫಿಡಿಯಾಸ್ ನಿಲ್ದಾಣದಲ್ಲಿ ಪಾವತಿಸಿದ ಪ್ರದೇಶದ ಕಡೆಗೆ ಹೋಗುತ್ತಾರೆ, "ನಾನು ಅವನನ್ನು ತಪ್ಪು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತೇನೆ." ಸ್ವಯಂಚಾಲಿತ ಶುಲ್ಕ ಸಂಗ್ರಹ ಪ್ರವೇಶ ಬಿಂದುವನ್ನು ಸಮೀಪಿಸಿದಾಗ, ಅವನು ಮುಚ್ಚಿದ ಟರ್ನ್ಸ್ಟೈಲ್ ಮೇಲೆ ಹಾರುತ್ತಾನೆ.
ಫಿಡಿಯಾಸ್ ವಿಡಿಯೋಗೆ ಛೀಮಾರಿ
ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಿಡಿಯೋ ನೋಡಿ ನಕ್ಕು ಸುಮ್ಮನಾದರೆ, ಇನ್ನು ಕೆಲವರು ಛೀಮಾರಿ ಹಾಕಿದ್ದಾರೆ. ಇಂತಹ ವರ್ತನೆ ತಪ್ಪು, ಈ ರೀತಿ ಸಾರ್ವಜನಿಕ ಸಾರಿಗೆ ಯಲ್ಲಿ ಮಾಡಬಾರದು ಎಂದು ಒಬ್ಬರು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಆ ವಿಡಿಯೋಗೆ ಪೊಲೀಸರು ಮತ್ತು ಬಿಎಂಆರ್‌ಸಿಎಲ್‌ಗೆ ಟ್ಯಾಗ್ ಮಾಡಿದ್ದಾರೆ. ಫಿಡಿಯಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications