ಬಿಬಿಎಂಪಿಯ ಪೌರಕಾರ್ಮಿಕರಿಗೆ ಒಂದು ಗಂಟೆ ಯೋಗಾ ಯೋಗ!

ಬೆಂಗಳೂರು, ಜೂನ್ 20: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂನ್ 20ರಂದು ಡೆಸ್ಟಾರ್ಪೊ ಮತ್ತು ಯೋಗ ಫಾರ್ ಆಲ್ ತಂಡವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಒಂದು ಗಂಟೆ ಅವಧಿಯ ಯೋಗ ಕಾರ್ಯಕ್ರಮ ಆಯೋಜಿಸಿದ್ದವು.

ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಯನಗರ ಕ್ಷೇತ್ರದ ನೂತನ ಶಾಸಕಿ ಸೌಮ್ಯಾ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯೋಗದಲ್ಲಿ ಚಿನ್ನದ ಪದಕ ಗಳಿಸಿದ್ದ ಸಾಧಕಿ ಅಂಬಿಕಾ ಸಿ. ಅವರು ಪೌರಕಾರ್ಮಿಕರಿಗೆ ಯೋಗದ ಪಟ್ಟುಗಳನ್ನು ಹೇಳಿಕೊಟ್ಟರು.

yoga sessions for bbmp pourakarmikaru

ಬನ್ನೇರುಘಟ್ಟ ಮುಖ್ಯರಸ್ತೆಯ ಲಕ್ಕಸಂದ್ರ ಮಿನಿ ಸೆಂಟರ್ ಬೆಂಗಳೂರು ಒನ್ ಬಳಿಯ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬುಧವಾರ ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ಯೋಗ ತರಬೇತಿ ನಡೆಯಿತು.

ನಗರದ ವಿವಿಧೆಡೆ ಕೆಲಸ ಮಾಡುವ ಪೌರಕಾರ್ಮಿಕರು ತಮ್ಮ ಬೆಳಗ್ಗಿನ ಕೆಲಸಕ್ಕೆ ಕೆಲವು ಸಮಯ ವಿರಾಮ ನೀಡಿ ಯೋಗದ ಅಭ್ಯಾಸದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ನಿತ್ಯವೂ ಕಸ, ದೂಳಿನ ಜತೆಯೇ ಕೆಲಸ ಮಾಡಬೇಕಾದ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಹೇಗೆ ಎಚ್ಚರವಹಿಸಬೇಕು, ದುಡಿಯುವ ಜನರಾದರೂ ಅವರಿಗೆ ಯೋಗ ಎಷ್ಟು ಅವಶ್ಯಕ ಮುಂತಾದ ವಿಚಾರಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+