ಯಶವಂತಪುರ-ವಾಸ್ಕೋ ನಡುವೆ ಪ್ರತಿದಿನದ ವಿಶೇಷ ರೈಲು

ಬೆಂಗಳೂರು, ನವೆಂಬರ್ 18 : ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ವಾಸ್ಕೋ-ಡಾ-ಗಾಮ ನಡುವೆ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆರಂಭಿಸಲಾಗಿದೆ.

ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಸಮನ್ವಯದಲ್ಲಿ ಈ ರೈಲು ಓಡಲಿದೆ. ಪ್ರತಿದಿನ ಕರ್ನಾಟಕದ ರಾಜಧಾನಿ ಮತ್ತು ಕರಾವಳಿ ಭಾಗವನ್ನು ಸಂಪರ್ಕಿಸಲಿದೆ. ಜನರು ರೈಲಿನ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಯಶವಂತರಪುರ-ವಾಸ್ಕೋ-ಡಾ-ಗಾಮ-ಯಶವಂತಪುರ ನಡುವೆ ಪ್ರತಿದಿನ ರೈಲು ನಂಬರ್ 07339 ಮತ್ತು 07340 ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Yeshwantpur-Vasco Daily Special Train Schedule

ರೈಲು ಸಂಖ್ಯೆ 07340 ವಾಸ್ಕೋ-ಡಾ-ಗಾಮ-ಯಶವಂತಪುರ ರೈಲು ಪ್ರತಿದಿನ ವಾಸ್ಕೋ-ಡಾ-ಗಾಮ ನಿಲ್ದಾಣದಿಂದ 9.20ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 12.30ಕ್ಕೆ ಯಶವಂತಪುರ ತಲುಪಲಿದೆ.

ರೈಲು ನಂಬರ್ 07339 ಯಶವಂತಪುರ-ವಾಸ್ಕೋ-ಡಾ-ಗಾಮ ವಿಶೇಷ ಎಕ್ಸ್‌ಪ್ರೆಸ್ ರೈಲು ಯಶವಂತಪುರಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 6 ಗಂಟೆಗೆ ವಾಸ್ಕೋ-ಡಾ-ಗಾಮಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.

ವಿಶೇಷ ರೈಲು 21 ಕೋಚ್‌ಗಳನ್ನು ಒಳಗೊಂಡಿದೆ. ಟು ಟೈರ್ ಎಸಿ 1, ತ್ರೀ ಟೈರ್ ಎಸಿ 2, 11 ಸ್ಲೀಪರ್ ಕೋಚ್, ದ್ವಿತೀಯ ದರ್ಜೆಯ ಬೋಗಿಯ 5 ಕೋಚ್‌ಗಳನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+