Railway Bridge: ಯಶವಂತಪುರ ರೈಲ್ವೇ ಓವರ್ ಬ್ರಿಡ್ಜ್ ಯೋಜನೆಗೆ ಫಿಕ್ಸ್‌ ಆಯ್ತು ಡೆಡ್‌ಲೈನ್

ಬೆಂಗಳೂರು: ರೈಲ್ವೆ ಇಲಾಖೆಯಿಂದ ಯಶವಂತಪುರ ರೈಲ್ವೆ ನಿಲ್ದಾಣವು ಬಹುಕೋಟಿ ವೆಚ್ಚದಲ್ಲಿ ಪನರ್ ಅಭಿವೃದ್ಧಿ ಆಗುತ್ತಿದ್ದು, ಆಧುನಿಕ ವ್ಯವಸ್ಥೆ ಹೊಂದಲಿದೆ. ಇತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ (ಜಿಬಿಎ) ರೈಲ್ವೇ ಓವರ್ ಬ್ರಿಡ್ಜ್ ಅಗಲೀಕರಣ ಕಾಮಗಾರಿಗೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಅಯುಕ್ತರ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.

ಹೌದು, ಗುರುವಾರ ರೈಲ್ವೇ ಓವರ್ ಬ್ರಿಡ್ಜ್ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ ಅವರು, ಯೋಜನೆ ಯಾವುದೇ ವಿಳಂಬವಿಲ್ಲದೇ ನಡೆಸಬೇಕು. ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

Yeshwanthpur Railway Over Bridge

ಏಕೆಂದರೆ ಯೋಜನೆ ಕೈಗೊಂಡ ಪ್ರಸ್ತುತ ಪ್ರದೇಶವು ನಗರದ ಕೇಂದ್ರ ಭಾಗದಲ್ಲಿದೆ. ಅವ್ಯವಸ್ಥಿತವಾಗಿ ಕಾಣುತ್ತಿದ್ದು, ಕಾಮಗಾರಿ ಪ್ರದೇಶದಲ್ಲಿ ಕಸ ತಂದು ಸುರಿಯದಂತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ವಾಹನಗಳ ನಿಲುಗಡೆ ಮಾಡದಂತೆ ಬ್ಯಾರಿಕೇಡ್‌ ಇರಿಸಿ. ಭದ್ರತೆಗೆ ವ್ಯವಸ್ಥೆ ಕಲ್ಪಿಸಿ. ಇನ್ನೂ ಅಪ್ರೋಚ್ ರೋಡ್ ಭೂಸ್ವಾಧೀನ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಪರಿಶೀಲಿಸಿ ಕ್ರಮ ವಹಿಸಿ ಎಂದು ರೈಲ್ವೇ ಅಧಿಕಾರಿಗಳು, ಮುಖ್ಯ ಅಭಿಯಂತರರು, ಗುತ್ತಿಗೆದಾರರು ಹಾಗೂ ಪಾಲಿಕೆಯ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರಿಗೆ ನಿರ್ದೇಶಿಸಿದರು.

ಕ್ರೀಡಾ ಸಂಕೀರ್ಣ ನಿರ್ವಹಣೆ

ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ಹಾಗೂ ಮಾನ್ಯ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಮಲ್ಲೇಶ್ವರದ ಕ್ರೀಡಾ ಸಂಕೀರ್ಣದ ನಿರ್ವಹಣೆ ಮತ್ತು ವ್ಯವಸ್ಥೆ ಕುರಿತಂತೆ ಪಾಲಿಕೆಯಲ್ಲಿ ಮಹತ್ವದ ಸಭೆ ನಡೆಸಿದರು.

ಮಿಶೆಝೋ ಸ್ಪೋರ್ಟ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕ್ರೀಡಾ ಸಂಕೀರ್ಣದ ವ್ಯವಸ್ಥೆ ನೋಡಿಕೊಳ್ಳಲು ಟೆಂಡರ್ ಪಡೆದಿದೆ. ಸಂಸ್ಥೆಯ ಸಹ ಸಂಸ್ಥಾಪಕರಾದ ಮಹಾರಿಷಿ ಶ್ರೀಧರ್ ಹಾಗೂ ಇನ್ನೋರ್ವ ಪ್ರತಿನಿಧಿ ವಿಜಯ್ ಲ್ಯಾನ್ಸಿರವರು ಕಾರ್ಯಯೋಜನೆ ಕುರಿತು ವಿವರಿಸಿದರು.

ಕ್ರೀಡಾಸಕ್ತರಿಗೆ ಅನುಕೂಲವಾಗುವಂತೆ ಸುವ್ಯವಸ್ಥಿತ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿ, ಸಮರ್ಥ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಮುಂದುವರಿಯಬೇಕು ಎಂದು ಸೂಚಿಸಿದರು.

SIR ನಮೂನೆ ಹಿಂತಿರುಗಿಸುವಂತೆ ಜಿಬಿಎ ಮನವಿ

ಬೆಂಗಳೂರಿನಲ್ಲಿ 1,03,88,363 ಮತದಾರರಿಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಶೇ.100ರಷ್ಟು ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಈ ಪೈಕಿ ಇದುವರೆಗೆ 50,19,442 (48.32%) ಮತದಾರರ ವಿವರಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಉಳಿದ ಮತದಾರರು ಸಹ ಭರ್ತಿ ಮಾಡಿದ ನಮೂನೆಗಳನ್ನು ಕೂಡಲೇ ಬಿಎಲ್‌ಒ ಅಥವಾ ಸೌಲಭ್ಯ ಕೇಂದ್ರಗಳಿಗೆ ಸಲ್ಲಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮನವಿ ಮಾಡಿದರು.

ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಸಹಿ ಮಾಡಿದ ಗಣತಿ ನಮೂನೆಗಳನ್ನು ಯಾವುದೇ ವಿಳಂಬವಿಲ್ಲದೆ ಹಿಂತಿರುಗಿಸಬೇಕು. ಗಣತಿ ನಮೂನೆಗಳನ್ನು ಸಲ್ಲಿಸಲು ಆಗಸ್ಟ್ 8 ರವರೆಗೆ ಅವಕಾಶವಿದೆ. ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇದರಿಂದ ಸಾರ್ವಜನಿಕರು ತುರ್ತಾಗಿ ನಮೂನೆಗಳನ್ನು ಬಿಎಲ್‌ಒಗಳಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಗಣತಿ ನಮೂನೆಗಳನ್ನು ಹಿಂತಿರುಗಿಸದಿದ್ದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಡುವ ಸಾಧ್ಯತೆಯೂ ಇದೆ. ಮತದಾರರ ಅನುಕೂಲಕ್ಕಾಗಿ ಬೂತ್ ಮಟ್ಟದ ಕೇಂದ್ರಗಳು ಹಾಗೂ ಮತದಾರರ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿಯೂ ನಮೂನೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.

ಒಂದು ಗಣತಿ ನಮೂನೆಯನ್ನು ಆನ್‌ಲೈನ್ ಮೂಲಕ ಡಿಜಿಟಲೀಕರಣ ಮಾಡಲು ಸರಿಸುಮಾರು 4ರಿಂದ 5 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಸಂಖ್ಯೆಯ ಗಣತಿ ನಮೂನೆಗಳು ಹಿಂದಿರುಗಿರುವುದನ್ನು ಗುರುತಿಸಿ, ಆ ಪ್ರದೇಶಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಮತ್ತೊಮ್ಮೆ ಭೇಟಿ ನೀಡಿ, ಮತದಾರರು ಗೈರು ಹಾಜರಾಗಿರುವುದು, ಸ್ಥಳಾಂತರಗೊಂಡಿರುವುದು, ಮೃತಪಟ್ಟಿರುವುದು ಅಥವಾ ನಕಲು ದಾಖಲೆಗಳಿರುವ(ASDDO) ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+