ವೈಫ್ ಸ್ನೇಹಿತೆಗೆ ಲೈಫ್ ನೀಡ್ತೀನಿ ಎಂದು ಕೊಂದಿದ್ದವ ಅರೆಸ್ಟ್

ಬೆಂಗಳೂರು, ಜೂನ್ 14: ಪ್ರೀತಿಗೆ ಸ್ನೇಹವೇ ಮೂಲ.. ಪ್ರೀತಿ ಪ್ರೇಮ ಪ್ರಣಯಕ್ಕೆ ಮೊದಲು ಪರಿಚಯವಾಗುತ್ತೆ. ಆ ಪರಿಚಯ ಯಾವ ರೀತಿಯಲ್ಲಿ ಆಗುತ್ತೆ ಅನ್ನೋದು ಬಹುಮುಖ್ಯವೇ. ತನ್ನ ಪತ್ನಿಯ ಆತ್ಮೀಯ ಸ್ನೇಹಿತೆ ಆಗಾಗ ಮನೆಗೆ ಬರುತ್ತಿದ್ದರೇ ಪತ್ನಿಗಂತೂ ಬಹು ಖುಷಿ. ಆ ಪತ್ನಿಯ ಖುಷಿಗಿಂತಲೂ ಡಬಲ್ ಖುಷಿ ಪತಿಗೆ. ಯಾಕಂದ್ರೆ ಪತ್ನಿಯ ಸ್ನೇಹಿತೆಯ ಜೊತೆ ಲಲ್ಲೆ ಹೊಡೆಯುತ್ತ ಸ್ನೇಹ ಗಳಿಸಿ ಸ್ನೇಹದ ಮೂಲಕವೇ ಆಲಿಂಗನದ ಅವಕಾಶವನ್ನು ಬಳಸೋ ಮಾಸ್ಟರ್ ಪ್ಲಾನ್ ಪತಿಯದ್ದಾಗಿರುತ್ತೆ. ಪತ್ನಿಯ ಸ್ನೇಹಿತೆಯ ಜೊತೆಯಲ್ಲೇ ಪಲ್ಲಂಗದಾಟವಾಡುತ್ತಿದ್ದವ ಪ್ರೇಯಸಿಯನ್ನು ಕೊಂದು ತಗ್ಲಾಕಿಕೊಂಡಿದ್ದಾನೆ.

ತಾನು ಪಲ್ಲಂಗಕ್ಕೆ ಕರೆದಾಗೆಲ್ಲಾ ಬರುತ್ತಿದ್ದ ಪತ್ನಿಯ ಸ್ನೇಹಿತೆಯನ್ನು ಬಲುವಾಗಿ ಪ್ರೀತಿಸುತ್ತಿದ್ದ ಆಸಾಮಿ ಪ್ರೇಯಸಿಯನ್ನೇ ಕೊಂದು ಮುಗಿಸಿದ್ದ. ಸ್ನೇಹ ಸಮ್ಮಿಲನ ಸರಸದ ಜೀವನಕ್ಕೆ ಬೇಸತ್ತ ಪ್ರೇಯಸಿ ಸಾಕು ಈ ಇಂಥಾ ಜೀವನ ಎಂದಿದ್ದಳು. ಪ್ರೇಯಸಿಗಾಗಿ ತನು ಮನ ಧನವನ್ನೆಲ್ಲಾ ಅರ್ಪಿಸಿದ್ದವ ಮತ್ತೊಂದು ಪ್ಲಾನ್ ಮಾಡಿಕೊಂಡಿದ್ದ.

ಪ್ರೇಯಸಿಗೆ ಕರೆಯನ್ನು ಮಾಡಿ ಮೀಟ್ ಮಾಡೋಣ ಎಂದಿದ್ದ. ಮೀಟ್ ಮಾಡಿ ಔಟಿಂಗ್ ಹೋಗಿ ಬರೋಣ ನಿನ್ನೊಂದಿಗೆ ತುಂಬಾ ಮಾತನಾಡಬೇಕಿದೆ ಎಂದು ಪುಸಲಾಯಿಸಿದ್ದ. ಇದೇ ಕೊನೆ ಮತ್ತೊಮ್ಮೆ ಬರೋದಿಲ್ಲ ಎಂದು ಹೇಳಿ ಬಂದಿದ್ದ ಪ್ರೇಯಸಿಯನ್ನು ಯಶವಂತಪುರದ ಲಾಡ್ಜ್‌ಗೆ ಕರೆತಂದು ಕೊಲೆಯನ್ನು ಮಾಡಿ ಮತ್ತೊಮ್ಮೆ ಕರೆದರೂ ಬಾರದಂತ ಲೋಕಕ್ಕೆ ಕಳುಹಿಸಿಕೊಟ್ಟು ಬಿಟ್ಟಿದ್ದ.

ಪತ್ನಿಯ ಕಾಲೇಜ್ ಫ್ರೇಂಡನ್ನೇ ಪ್ರೀತಿಸಿದ ಪತಿ

ಪತ್ನಿಯ ಕಾಲೇಜ್ ಫ್ರೇಂಡನ್ನೇ ಪ್ರೀತಿಸಿದ ಪತಿ

ಬೆಂಗಳೂರಿನ ಎಚ್ಎಎಲ್ ನಿವಾಸಿಯಾಗಿರುವ ಅನ್ಮೋಲ್ ಎಂಬಾತ ದೀಪಾ ಪದಲ್ ಎಂಬ ಪತ್ನಿಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಎರಡು ವರ್ಷದಿಂದ ತನ್ನ ಪತ್ನಿಗೆ ಗೊತ್ತಾಗದ ರೀತಿಯಲ್ಲಿ ಪ್ರೀತಿಸುತ್ತಿದ್ದ. ದೀಪಾ ಪದಲ್ ಅನ್ಮೋಲ್ ಪತ್ನಿ ದೀಪಾವತಿ ಮಂಜಿಯ ಕಾಲೇಜ್ ಮೇಟ್ ಆಗಿದ್ದಳು. ದೀಪಾವತಿ ಮಂಜಿಯ ಜೊತೆ ಅನ್ಮೋಲ್ ಮದ್ವೆಯಾದ ಬಳಿಕ ದೀಪಾ ಪದಲ್ ಪದೇ ಪದೇ ಮನೆಗೆ ಬರುತ್ತಿದ್ದಳು. ಈ ವೇಳೆ ಸ್ನೇಹಿತೆ ದೀಪಾಳ ಪತಿಯನ್ನೇ ದೀಪಾ ಪದಲ್ ಗುಟ್ಟಾಗಿ ಪ್ರೀತಿ ಮಾಡ್ತಿದ್ದಳು. ಅನ್ಮೋಲ್ ತನ್ನ ಪ್ರೇಯಸಿ ದೀಪಾ ಪದಲ್‌ಗೆ ಲೈಫ್ ಕೊಡ್ತೀನಿ ಎನ್ನುತ್ತಿದ್ದನಂತೆ.

ಔಟಿಂಗ್‌ಗೆ ಕರೆದವನು ಉಸಿರುಗಟ್ಟಿಸಿ ಕೊಂದ

ಔಟಿಂಗ್‌ಗೆ ಕರೆದವನು ಉಸಿರುಗಟ್ಟಿಸಿ ಕೊಂದ

ಪ್ರೀತಿ ಪ್ರೇಮ ಪ್ರಣಯದ ಬಳಿಕ ದೀಪಾ ಪದಲ್‌ಗೆ ಅನ್ಮೋಲ್ ಮೇಲೆ ಇದ್ದ ಮೋಹ ಕಡಿಮೆಯಾಗಿತ್ತು. ದೀಪಾ ಪದಲ್ ನೇರವಾಗಿ ಅನ್ಮೋಲ್‌ಗೆ ತಾನು ಬೇರೊಬ್ಬನನ್ನ ಪ್ರೀತಿಸೋದಾಗಿ ಹೇಳಿಕೊಂಡಿದ್ದಾಳೆ. ಒಂದಷ್ಟು ಬಾರಿ ಮನವೊಲಿಸಲು ಪ್ರಯತ್ನ ಪಟ್ಟಿದ್ದ ಅನ್ಮೋಲ್ ಕೊನೆಗೆ ಆಕೆಯ ಹತ್ಯೆಗೆ ಸ್ಕೆಚ್ ಹಾಕಿದ್ದ. ಪ್ಲಾನ್ ಮಾಡಿ ಒಂದಿನ ಔಟಿಂಗ್ ಹೋಗೋಣ ಅಂದವನು ಮೊದಲಿಗೆ ರೈಲ್ವೆ ನಿಲ್ದಾಣದ ಬಳಿ ಇರುವ ಬೆಂಗಳೂರು ರೆಸಿಡನ್ಷಿಯಲ್ ಲಾಡ್ಜ್‌ಗೆ ಕರೆತಂದಿದ್ದ ನಂತರ ಆಕೆಯನ್ನ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದ. ಆಕೆ ಪ್ರಜ್ಞೆ ತಪ್ಪಿರಬಹುದು ಸತ್ತಿಲ್ಲ ಎಂದು ಮತ್ತು ಕುತ್ತಿಗೆ ಹಿಚುಕಿದ್ದ. ಸತ್ತಿದ್ದಾಳೆಂದು ಕನ್ಪರ್ಮ್ ಮಾಡಿಕೊಂಡವನು ಕಾಲಿಗೆ ಬುದ್ದಿಹೇಳಿದ್ದ.

ಲಾಡ್ಜ್ ಮುಂದೆ ಗೋಳಿಟ್ಟ ಕೊಲೆಗಾರನ ಪತ್ನಿ

ಲಾಡ್ಜ್ ಮುಂದೆ ಗೋಳಿಟ್ಟ ಕೊಲೆಗಾರನ ಪತ್ನಿ

ಪ್ರೇಯಸಿ ದೀಪ ಪದಲ್ ಕೊಂದ ಬಳಿಕ ಅನ್ಮೋಲ್ ನೇರವಾಗಿ ತನ್ನ ಪತ್ನಿ ದೀಪಾಗೆ ಕರೆ ಮಾಡಿ ನಾನು ನಿನ್ನ ಸ್ನೇಹಿತೆಯನ್ನ ಕೊಂದಿದ್ದೇನೆ ಎಂದಿದ್ದ. ಲಾಡ್ಜ್‌ನವರೇ ಕೊಂದಿದ್ದಾರೆಂದು ಲಾಡ್ಜ್ ಮುಂದೇ ಗೋಳಾಡು ಎಂದು ಹೇಳಿದ್ದ. ದೀಪಾ ತನ್ನ ಗಂಡನನ್ನ ಉಳಿಸಿಕೊಳ್ಳುವ ಸಲುವಾಗಿ ಲಾಡ್ಜ್ ಮುಂದೆ ಅತ್ತು ಕರೆದು ನಾಟಕವಾಡಿದ್ದಳು. ಇತ್ತ ಪತ್ನಿಗೆ ಕರೆ ಮಾಡಿದ್ದು ಬಿಟ್ಟರೆ ಹಂತಕನ ಬೇರ್ಯಾವ ಸುಳಿವು ಸಿಕ್ಕಿರಲಿಲ್ಲ. ವಸಂತನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.

ಅನಂತಪುರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಅನಂತಪುರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಯಶವಂತಪುರ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಗಿಳಿದರು. ದೀಪಳಾ ಲಾಸ್ಟ್ ನಂಬರ್ಸ್ ಪರಿಶೀಲಿಸಿದಾಗ ಅನ್ಮೋಲ್ ನಂಬರ್ ಸಿಗುತ್ತೆ. ಆ ನಂಬರ್‌ಗೆ ಕರೆ ಮಾಡಿದರೇ ಮೊಬೈಲ್ ಸ್ವಿಚ್ ಆಫ್ ಆಗಿರುತ್ತೆ. ಲಾಸ್ಟ್ ಲೋಕೇಷನ್ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಅದೇ ವೇಳೆ ಹೊರಟಿದ್ದ ಕುರ್ಲಾ ಎಕ್ಸ್ಪ್ರೆಸ್ ಟ್ರೈನ್ ಹೊರಟಿರುವುದು ಗೊತ್ತಾಗುತ್ತದೆ. ಪೊಲೀಸರು ವೇರ್ ಮೈ ಟ್ರೈನ್ ಆ್ಯಪ್ ಮುಖಾಂತರ ರೈಲು ಎಲ್ಲಿ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿತ್ತಾರೆ. ಅನಂತ್ಪುರ ಸ್ಟೇಷನ್‌ಗೆ ರೈಲು ತಲುಪುವ ಮೊದಲೇ ರೈಲನ್ನ ಚೇಝ್ ಮಾಡಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+