ಲಾಕ್ ಡೌನ್: ಬೆಂಗಳೂರಿಗರಿಗೆ ಕಾದಿದೆಯಾ ಶಾಕಿಂಗ್ ನ್ಯೂಸ್!?

ಬೆಂಗಳೂರು, ಜುಲೈ 17: ಜುಲೈ 13ರಂದು ಕ್ಯಾಬಿನೆಟ್ ಸಚಿವರು ಮತ್ತು ಕೆಲವು ಜಿಲ್ಲಾಧಿಕರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಆಡಿದ ಮೊದಲ ಮಾತು,"ಲಾಕ್ ಡೌನ್ ನಿಂದ ಸೋಂಕು ಹರಡುವುದು ಕಮ್ಮಿಯಾಗುತ್ತದೆ ಎನ್ನುವ ನಂಬಿಕೆ ನನಗಿಲ್ಲ"ಎಂದು.

Recommended Video

      ಕೇಂದ್ರ ಸರ್ಕಾರಕ್ಕೆ ವರ್ನಿಂಗ್ ಕೊಟ್ಟ ರಾಹುಲ್ ಗಾಂಧಿ.! | Oneindia Kannada

      ಆದರೂ, ತಜ್ಞರ ವರದಿ ಜೊತೆಗೆ ಎಚ್ಚರಿಕೆ, ಪಕ್ಷದೊಳಗೆ ಹಲವು ಸಚಿವರು ಹಾಕಿದ ಒತ್ತಡದಿಂದ ಬಿಎಸ್ಬೈ ಬೆಂಗಳೂರು ಸೇರಿದಂತೆ, ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಗೆ ಗ್ರೀನ್ ಸಿಗ್ನಲ್ ಕೊಟ್ಟರು. ಒಂದು ರೀತಿಯಲ್ಲಿ ಒಲ್ಲದ ಮನಸ್ಸಿನಿಂದಲೇ ಸಿಎಂ ಅನುಮತಿ ಕೊಟ್ಟಿದ್ದರು.

      ಕಳೆದ ಎರಡು ದಿನಗಳಿಂದ ರಾಜಧಾನಿ ಸೇರಿದಂತೆ ಹಲವು ಜಿಲ್ಲಾ ವ್ಯಾಪ್ತಿಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ, ಕೊರೊನಾ ನಾಗಾಲೋಟ ಮುಂದುವರಿಯುತ್ತಲೇ ಇದೆ. ಲಾಕ್ ಡೌನ್ ಜಾರಿಗೆ ಬಂದ ನಂತರದ ಎರಡು ದಿನಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿದೆ.

      ಮೂರ್ನಾಲ್ಕು ದಿನಗಳ ಹಿಂದಿನ ರಿಪೋರ್ಟ್ ಇಂದು, ನಿನ್ನೆಯಲ್ಲಿ ಬಂದಿರುತ್ತದೆ ಎನ್ನುವುದು ಸರಿಯಾದ ವಿಚಾರವಾದರೂ, ಒಂದು ವಾರದ ಲಾಕ್ ಡೌನ್, ಬೆಂಗಳೂರಿನಲ್ಲಿ ವಿಸ್ತರಣೆಗೊಳ್ಳಲಿದೆಯೇ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

      ಒಂದು ವಾರದ ಲಾಕ್ ಡೌನ್ ವರ್ಕೌಟ್ ಆಗುವುದಿಲ್ಲ

      ಒಂದು ವಾರದ ಲಾಕ್ ಡೌನ್ ವರ್ಕೌಟ್ ಆಗುವುದಿಲ್ಲ

      ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಕೊರೊನಾ ಹತೋಟಿಗೆ ತರಲು ಒಂದು ವಾರದ ಲಾಕ್ ಡೌನ್ ವರ್ಕೌಟ್ ಆಗುವುದಿಲ್ಲ ಎನ್ನುವ ವಿಷಯ ಈಗಾಗಲೇ ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಹಲವು ಬಾರಿ ಚರ್ಚೆಗೆ ಬಂದಿದೆ. ಜುಲೈ 22ನಂತರವೂ ಲಾಕ್ ಡೌನ್ ಮುಂದುವರಿಸಬೇಕೇ ಎನ್ನುವ ವಿಚಾರ ಈ ವಾರಾಂತ್ಯದಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.

      ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಹೆಚ್ಚು

      ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಹೆಚ್ಚು

      ಲಾಕ್ ಡೌನ್ ಘೋಷಣೆಯಾದ ನಂತರದ ದಿನಗಳ ಪರೀಕ್ಷಾ ವರದಿ ವಾರಾಂತ್ಯದೊಳಗೆ ಬರುವ ಸಾಧ್ಯತೆ ಇರುವುದರಿಂದ, ಒಂದು ವೇಳೆ, ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಲ್ಲಿ, ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಹೆಚ್ಚು ಎನ್ನುವ ಮಾತು ಕೇಳಿಬರುತ್ತಿದೆ.

      ಆರೋಗ್ಯ ಇಲಾಖೆ, ಬಿಬಿಎಂಪಿ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆ

      ಆರೋಗ್ಯ ಇಲಾಖೆ, ಬಿಬಿಎಂಪಿ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆ

      ಆದರೆ, ಈ ಎಲ್ಲಾ ವಿಷಯಗಳು ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆ, ಬಿಬಿಎಂಪಿ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಲಾಕ್ ಡೌನ್ ವಿಸ್ತರಣೆ ಮಾಡುವುದು ಸೂಕ್ತ ಎನ್ನುವ ವರದಿ ಬಂದಿದೆ ಎಂದು ಹೇಳಲಾಗುತ್ತಿದೆ.

      ಲಾಕ್ ಡೌನ್ ವಿಸ್ತರಣೆ ವಿಚಾರ ತೂಗೊಯ್ಯಾಲೆಯಲ್ಲಿ

      ಲಾಕ್ ಡೌನ್ ವಿಸ್ತರಣೆ ವಿಚಾರ ತೂಗೊಯ್ಯಾಲೆಯಲ್ಲಿ

      ಸೋಂಕು ಹರಡುವ ಚೈನ್ ಅನ್ನು ತಪ್ಪಿಸಲು ಲಾಕ್ ಡೌನ್ ಪ್ರಯೋಗ ಎಂದು ರಾಜ್ಯ ಗೃಹ ಸಚಿವರು ಹೇಳಿದ್ದಾರೆ. ನಗರದಲ್ಲಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಏರುತ್ತಲೇ ಇದೆ. ಬಿಬಿಎಂಪಿಗೆ ಸಿದ್ದವಾಗಿರುವಂತೆ ಮೌಕಿಕ ಆದೇಶ ಬಂದಿದೆ ಎನ್ನುವ ಮಾತೂ ಹರಿದಾಡುತ್ತಿದೆ. ಆದರೆ, ಲಾಕ್ ಡೌನ್ ಮೇಲೆ ಸಿಎಂ ಸೇರಿದಂತೆ ಆಯಕಟ್ಟಿನ ಮಂತ್ರಿಗಳಿಗೆ ನಂಬಿಕೆಯಿಲ್ಲ. ಹಾಗಾಗಿ, ಲಾಕ್ ಡೌನ್ ವಿಸ್ತರಣೆ ವಿಚಾರ ಸದ್ಯದ ಮಟ್ಟಿಗೆ ತೂಗೊಯ್ಯಾಲೆಯಲ್ಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+