ಯೋಗದಿನದಂದು ಹಿರಿಯಜ್ಜಿಯರ ಯೋಗ ಕಂಡು ಬೆರಗಾದ ಬೆಂಗಳೂರಿಗರು
ಬೆಂಗಳೂರು, ಜೂನ್ 21: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಈ ಬಾರಿ ನಡೆದ ಯೋಗ ದಿನಾಚರಣೆಯಲ್ಲಿ ಇಬ್ಬರು ವಿಶೇಷ ಅತಿಥಿಗಳು ಪಾಲ್ಗೊಂಡಿದ್ದರು. ಅವರು ಮತ್ಯಾರೂ ಅಲ್ಲ ವಿಶ್ವದ ಅತೀ ಹಿರಿಯ ಯೋಗ ಗುರು ತಾವೋ ಪೋರ್ಚೊನ್ ಲಿಂಚ್ ಹಾಗೂ ಭಾರತದ ಹಿರಿಯ ಯಗ ಗುರು ಅಮ್ಮ ಅನ್ನಮಲ್.
ತಾವು ಯೋಗ ಗುರುಗಳು ಎಂದು ಕೇವಲ ಭಾಗವಹಿಸಿದ್ದು ಮಾತ್ರವಲ್ಲ ತಾವೂ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ನೋಡುಗರ ಹುಬ್ಬೇರಿಸಿದರು. ಯುವಕರೇ ಕೈ ಕಾಲು ತಿರುಗಿಸಲು ಒದ್ದಾಡುವಾಗ ಇವರು ಮಾತ್ರ ಆರಾಮವಾಗಿ ಕೈ ಕಾಲುಗಳನ್ನು ಬೇಕು ಬೇಕಾದಂತೆ ತಿರುಗಿಸಿ ಯುವ ಜನತೆಯನ್ನೂ ನಾಚುವಂತೆ ಯೋಗ ಮಾಡಿದರು.

ಬೆಂಗಳೂರಿನಲ್ಲಿ ನಡೆದ ಈ ಯೋಗ ದಿನಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಸೇರಿದಂತೆ ರಾಜ್ಯ ಸಚಿವರು ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.













Click it and Unblock the Notifications