ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ನೋಡಲು ಬಂದು, ಲಾಕ್ ಆದ ಮಹಿಳೆಯರು!
silk sarees: ನಾರಿಯರಿಗೆ ಸೀರಿ ಎಂದರೆ ಪ್ರೀತಿ. ಇನ್ನು ರೇಷ್ಮೆ ಸೀರೆ ಎಂದರೆ ಕೇಳಬೇಕಾ ? ಆದ್ರೆ, ಇಲ್ಲೊಂದು ಆರು ಜನರ ಮಹಿಳಾ ತಂಡ ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ಖರೀದಿಸಲು ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಬ್ಬದ ಸಂತೋಷಕ್ಕಡ ಸೀರೆ ಖರೀದಿ ಮಾಡಲು ಬಂದರೂ, ಇಲ್ಲ ಇವರ ಉದ್ದೇಶ ಬೇರೆಯೇ ಇತ್ತ ಎನ್ನುವ ಅನುಮಾನವೇ ಇವರಿಗೆ ಸಂಕಷ್ಟವಾಗಿದೆ.
ಸೀರೆ ಕದಿಯುವುದರಲ್ಲಿ ನಿರತವಾಗಿದ್ದು, ಈ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಸೀರೆ ಕದಿಯುತ್ತಿದ್ದ ವಿಧಾನವೂ ಮಜವಾಗಿದೆ. ರೇಷ್ಮೆ ಸೀರೆನ ಖರೀದಿಸುವುದಕ್ಕಿಂತ, ಕದಿಯುತ್ತಿದ್ದ ಆರು ಜನ ಮಹಿಳಾ ತಂಡವನ್ನು ಬಂಧಿಸಿದ ಕಥೆಯೂ ರೋಚಕವಾಗಿದೆ.

ಆರು ಜನರಿದ್ದ ಈ ಮಹಿಳೆ ತಂಡವು ಬೆಂಗಳೂರಿನ ಪ್ರತಿಷ್ಠಿತ ಮಳಿಗೆಗಳನ್ನೇ ಹುಡುಕಿಕೊಂಡು ಸೀರೆಗಳನ್ನು ಖರೀದಿ ಮಾಡುವ ನೆಪದಲ್ಲಿ ಅಂಗಡಿಗೆ ಹೋಗುತ್ತಿತ್ತು.
ಅಂಗಡಿಗೆ ಹೋದ ಮೇಲೆ ಮೊದಲೇ ದುಬಾರಿ ಸೀರೆಗಳನ್ನು ತೋರಿಸುವಂತೆ ಅಂಗಡಿ ಅವರಿಗೆ ಹೇಳುತ್ತಿದ್ದರು. ಅಂಗಡಿಯವರು ಸೀರೆಗಳನ್ನು ತೋರಿಸುವಾಗ ಗುಂಪು ಸೇರುತ್ತಿದ್ದ ಮಹಿಳೆಯರು ಒಂದೊಂದೇ ಸೀರೆಯನ್ನು ಎಗರಿಸುತ್ತಿದ್ದರು. ಈ ರೀತಿ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳಿಯರು ಮೊದಲು ಇಬ್ಬರನ್ನು ಹೊರಗೆ ಕಳುಹಿಸಿ, ಮತ್ತೆ ಸೀರೆ ಕದಿಯಲು ಶುರು ಮಾಡಿಕೊಳ್ಳುತ್ತಿದ್ದರು. ಮೊದಲು ಹೊರಗೆ ಹೋದವರಿಗೂ ಸೀರೆಗಳನ್ನು ಕೊಟ್ಟು ಹೊರಕ್ಕೆ ಕಳುಹಿಸುತ್ತಿದ್ದರು.
ಸೀರೆ ಕಳ್ಳತನ: ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?
ಈಚೆಗೆ ಸೀರೆ ಕಳ್ಳಿಯರ ತಂಡವು ಬೆಂಗಳೂರಿನ ಪ್ರತಿಷ್ಠಿತ ಸಿಲ್ಕ್‌ಹೌಸ್‌ನಲ್ಲಿ ಸೀರೆ ಖರೀದಿ ಮಾಡುವ ನೆಪದಲ್ಲಿ ಭೇಟಿ ನೀಡಿದೆ. ಅಲ್ಲೂ ಸೀರೆ ಕದಿಯುವ ಕರಾಮತ್ತು ಪ್ರದರ್ಶಿಸಿದ್ದು ಅಂಗಡಿಯವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮೊದ ಮೊದಲು ಅಂಗಡಿಯವರಿಗೂ ಇವರು ಕಳ್ಳಿಯರು ಎಂದು ಗೊತ್ತಾಗಿಲ್ಲ. ಅನುಮಾನ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಿಲ್ಕ್‌ಹೌಸ್‌ನ ಸೇಲ್ಸ್ ವ್ಯಕ್ತಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಆರು ಜನ ಮಹಿಳೆಯರು ಗ್ರಾಹಕರಂತೆ ಸೀರೆಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಹೋಗಿದ್ದಾರೆ. ಗ್ರಾಹಕರು ಸೀರೆ ಖರೀದಿ ಮಾಡುವಂತೆ ವಿವಿಧ ಮಾದರಿಯ, ವಿವಿಧ ಬಗೆಯ ಹಲವಾರು ರೇಷ್ಮೆ ಸೀರೆಗಳನ್ನು ತೋರಿಸಲು ಕೇಳಿದ್ದಾರೆ. ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವ ನೆಪದಲ್ಲಿ ಅಂಗಡಿಯವರನ್ನು ಬೇರೆಡೆ ಸೆಳೆದಿದ್ದಾರೆ. ಈ ತಂಡದಲ್ಲಿದ್ದ ಆರು ಜನ ಮಹಿಳೆಯರ ಪೈಕಿ ಇಬ್ಬರು ಮಹಿಳೆಯರು ಅವರು ಧರಿಸಿದ್ದ ಸೀರೆಯೊಳಗೆ 8 ರೇಷ್ಮೆ ಸೀರೆಗಳನ್ನು ಅಡಗಿಸಿಕೊಂಡು ಕದಿದ್ದಾರೆ. 8 ರೇಷ್ಮೆ ಸೀರೆಗಳನ್ನು ಕದ್ದರೂ ಏನು ನಡೆದೇ ಇಲ್ಲ ಎನ್ನುವಂತೆ ಅಲ್ಲಿಂದ ಮೆಲ್ಲಗೆ ಹೊರಗೆ ಹೋಗಿದ್ದಾರೆ.
ಇಬ್ಬರು ಕಳ್ಳಿಯರನ್ನು ಹೊರಗೆ ಕಳುಹಿಸಿದ ಉಳಿದ ನಾಲ್ವರು ಕಳ್ಳಿಯರು ಅಂಗಡಿಯಲ್ಲೇ ಉಳಿದು ಇತರೆ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡುವಂತೆ ನಾಟಕ ಮಾಡಿದ್ದಾರೆ. ಮತ್ತೊಮ್ಮೆ ಅಂಗಡಿಯಲ್ಲಿದ್ದ ಮಾಲೀಕರು ಹಾಗೂ ಕೆಲಸಗಾರರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾರೆ. ಆಗ ಅಂಗಡಿಯವರಿಗೆ ಅನುಮಾನ ಮೂಡಿದೆ. ಈ ನಾಲ್ವರು ಮಹಿಳೆಯರು 10 ರೇಷ್ಮೆ ಸೀರೆಗಳನ್ನು ಅವರು ಧರಿಸಿದ್ದ ಸೀರೆಯೊಳಗೆ ಅಡಗಿಸಿಕೊಂಡು ಕಳವು ಮಾಡಿಕೊಂಡು ಅಂಗಡಿಯಿಂದ ಹೊರ ಹೋಗಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡಿರುವ ಅಂಗಡಿಯವರು ಹೊಯ್ಸಳಗೆ (ಪೊಲೀಸರಿಗೆ) ಕರೆಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಜೆ.ಪಿ.ನಗರ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿಯವರು ಈ ನಾಲ್ವರು ಮಹಿಳೆಯರನ್ನು 10 ರೇಷ್ಮೆ ಸೀರೆಗಳ ಸಮೇತ ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆಯ ವೇಳೆ ಈ ಮಹಿಳೆಯರು ಈ ಹಿಂದೆಯೂ ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಕಳವು ಮಾಡಿದ ರೇಷ್ಮೆ ಸೀರೆಗಳನ್ನು ಕೋರಮಂಗಲದಲ್ಲಿ ವಾಸವಿರುವ ಸ್ನೇಹಿತನಿಗೆ ನೀಡುತ್ತಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.
ರೇಷ್ಮೆ ಕಳ್ಳಿಯರಿಂದ 38 ದುಬಾರಿ ರೇಷ್ಮೆ ಸೀರೆ ವಶಕ್ಕೆ
ನಾಲ್ವರು ಕಳ್ಳಿಯರಿಂದ ಪೊಲೀಸರು ಇಲ್ಲಿಯವರೆಗೆ ಬರೋಬ್ಬರಿ 38 ದುಬಾರಿ ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 38 ದುಬಾರಿ ರೇಷ್ಮೆ ಸೀರೆಗಳ ಬೆಲೆಯು ಬರೋಬ್ಬರಿ 17.5 ಲಕ್ಷ ಬೆಲೆ ಇದೆ. ಇನ್ನೂ ಇಬ್ಬರು ಮಹಿಳೆಯರು ತಲೆಮರೆಸಿಕೊಂಡಿದ್ದು, ಆ ಕಳ್ಳಿಯರಿಗೂ ಪೊಲೀಸರು ಬಲೆ ಬೀಸಿದ್ದಾರೆ. ಇನ್ನಿಬ್ಬರು ರೇಷ್ಮೆ ಸೀರೆ ಕಳ್ಳಿಯರು ಎಷ್ಟು ರೇಷ್ಮೆ ಸೀರೆ ಕದ್ದಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.












Click it and Unblock the Notifications