ಪತಿ ಮೇಲೆ ಕಾದ ಎಣ್ಣೆ ಎರಚಿ ಪತ್ನಿಯಿಂದ ಹಲ್ಲೆ

ಬೆಂಗಳೂರು, ಫೆಬ್ರವರಿ 10: ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಪತಿ ಮೇಲೆ ಪತ್ನಿ ಕಾದ ಎಣ್ಣೆ ಎರಚಿ ಗಾಯಗೊಳಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಯಶವಂತಪುರದ ಮೋಹನ್ ಕುಮಾರ್ ನಗರದ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಂಪತಿ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮಂಜುನಾಥ್ ಮತ್ತು ಪದ್ಮ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.ಗಾಯಾಳು ಮಂಜುನಾಥ್ ಪರಸ್ತ್ರೀ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ಪತ್ನಿಗೆ ತಿಳಿದು ಆಗಾಗ ಜಗಳವಾಡುತ್ತಿದ್ದರು.

Woman Poured Boiling Oil Over Husband Face

ಆದರೆ ಇತ್ತೀಚೆಗೆ ಆತ ಕೆಲಸಕ್ಕೂ ಹೋಗುತ್ತಿರಲಿಲ್ಲ, ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುವುದಷ್ಟೇ ಅಲ್ಲದ ಹಲ್ಲೆ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಪದ್ಮಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಈ ವೇಳೆ ಕುಡಿದು ಬಂದು ಗಲಾಟೆ ಮಾಡಿದ್ದ, ಅಡುಗೆ ಸೌಟಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ.

ಸಿಟ್ಟಿನಲ್ಲಿ ಪದ್ಮಾ ಒಲೆ ಮೇಲೆ ಕುದಿಯುತ್ತಿದ್ದ ಎಣ್ಣೆಯನ್ನು ಪತಿಯ ಮುಖಕ್ಕೆ ಎರಚಿದ್ದಾಳೆ. ಇದೀಗ ಪದ್ಮಾಳನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+