ಮಗನ ಜೊತೆ ಏಳನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ
ಬೆಂಗಳೂರು, ಜುಲೈ 3: ಶೀಲ ಶಂಕಿಸುತ್ತಿದ್ದ ಗಂಡನ ಹಿಂಸೆ ತಡೆಯಲಾರದೆ ಪತ್ನಿ ಮಗನ ಜೊತೆಗೆ ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಭಾವನಾ(29) ಮತ್ತು ದೇವಂತ್ ಮೃತರು, ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮಂಗಳವಾರ ಮನೆಯಲ್ಲಿ ಅರಿಹಂತ್ ತಾಯಿ , ಭಾವನಾ ಮತ್ತು ಮಗ ಇದ್ದರು, ಪತಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡ ಭಾವನಾ ಮಗನ ಜೊತೆ ಬಾಲ್ಕನಿಯಿಂದ ಹಾರಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಭಾವನಾ ಮೃತಪಟ್ಟರೆ, ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಜಾಹೀರಾತು ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅರಿಹಂತ್ ಮತ್ತು ಭಾವನಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ನಡೆಯುತ್ತಲೇ ಇತ್ತು.
ಪತಿಯ ವಿರುದ್ಧ ಭಾವನಾ ಸಂಬಂಧಿಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ಹಿಂಸೆಗೆ ಎರೆಡು ಮುಗ್ದ ಜೀವಗಳು ಬಲಿಯಾಗಿವೆ.
ಅರಿಹಂತ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ, ಯಾವುದೇ ಕಾರಣವಿಲ್ಲದಿದ್ದರೂ ಆಕೆಯ ಮೇಲೆ ಸುಮ್ಮನೆ ಅನುಮಾನ ಪಡುತ್ತಿದ್ದ ಎಂದು ಭಾವನಾ ಸಹೋದರಿಯರು ತಿಳಿಸಿದ್ದಾರೆ.












Click it and Unblock the Notifications