ಜನವರಿಯಲ್ಲಿ ಆರು ಬೋಗಿ ಮೆಟ್ರೋ ರೈಲು ಪ್ರಾಯೋಗಿಕ ಆರಂಭ

ಬೆಂಗಳೂರು, ಡಿಸೆಂಬರ್ 21 : ಜನವರಿ ಅಂತ್ಯದ ವೇಳೆಗೆ 6 ಬೋಗಿಯ ಒಂದು ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದೆ. ಬಿಎಂಆರ್​ಸಿಎಲ್​ಗೆ 3 ಬೋಗಿಗಳನ್ನು ಬಿಇಎಂಎಲ್ ಸರಬರಾಜು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಮೆಟ್ರೋದಲ್ಲಿ ಪ್ರತಿನಿತ್ಯ 1.50 ರಿಂದ 2 ಲಕ್ಷ ಜನರು ಪ್ರಯಾಣಿಕರು ಸಂಚರಿಸುತ್ತಾರೆ. ಬೆಳಗ್ಗೆ7 ರಿಂದ 10 ಗಂಟೆ ಹಾಗೂ ಸಂಜೆ 5 ರಿಂದ8 ರವರೆಗೆ ಮೆಟ್ರೋದಲ್ಲಿ ಕಾಲಿಡಲಾಗದಷ್ಟು ಪ್ರಯಾಣಿಕರ ದಟ್ಟಣೆ ಇರುತ್ತದೆ. ಪ್ರತಿ ಕಿ.ಮೀ ನಡುವೆ10 ಸಾವಿರ ಜನ ಸಂಚಿರಿಸುತ್ತಾರೆ. ಹೀಗಾಗಿಯೇ ವಿಶ್ವದ ಅತಿ ಹೆಚ್ಚು ದಟ್ಟಣೆಯ ಮೆಟ್ರೋಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದು ಎಂಬ ಹೆಗ್ಗಳಿಕೆಯಿದೆ.

Within end of January Six coach of metro will on lane

ದಿನದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ೩ ಬೋಗಿಯ ರೈಲುಗಳನ್ನು 6 ಬೋಗಿಗೆ ಪರಿವರ್ತಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. 1, 421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ತಯಾರಿಸಿಕೊಡುವುದಾಗಿ 2017 ಮಾರ್ಚ್ ನಲ್ಲಿ ಬಿಇಎಂಎಲ್ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ ಜನವರಿ ಅಂತ್ಯದೊಳಗೆ 3 ಬೋಗಿಗಳನ್ನು ಬಿಇಎಂಎಲ್ ಸರಬರಾಜು ಮಾಡಲಿದ್ದು, ಇವುಗಳನ್ನು ಈಗಿರುವ 3 ಬೋಗಿಯ ನಡುವೆ ಸೇರಿಸಲಾಗುತ್ತದೆ.

6 ಬೋಗಿಯ ರೈಲು ಸೇವೆ ಪ್ರಾರಂಭವಾದರೆ ಒಂದು ಬೋಗಿಯಲ್ಲಿ ಒಟ್ಟು 1, 576 ರಿಂದ 2, 004 ಜನ ಪ್ರಯಾಣಿಸಬಹುದು. ಗಡುವು: ಎಲ್ಲಾ150 ಬೋಗಿಗಳ ಸರಬರಾಜಿಗೆ 2019 ಡಿಸೆಂಬರ್ ಗಡುವು ಹಾಕಿಕೊಳ್ಳಲಾಗಿದೆ. ಬಿಇಎಂಡಲ್ ನಲ್ಲಿ ಈ ಹಿಂದೆ 2 ಮೆಟ್ರೋ ಬೋಗಿ ತಯಾರಿಕಾ ಘಟಕವಿತ್ತು. ಇತ್ತೀಚೆಗಷ್ಟೇ 3 ನೇ ಉತ್ಪಾದನಾ ಘಟಕ ಪ್ರಾರಂಭಿಸಲಾಗಿದೆ. ಪ್ರತಿ ತಿಂಗಳಿಗೆ 6-9ಬೋಗಿಯಂತೆ ಸರಬರಾಜು ಮಾಡಲು ಸಾದ್ಯವಿದೆ. ಹೀಗಾಗಿ ನಿಗದಿತ ಸಮಯದೊಳಗೇ ಬೋಗಿ ಸರಬರಾಜು ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಯೋಗಿಕ ಓಡಾಟ: ಬೋಗಿಗಳು ಜನವರಿಯಲ್ಲಿ ಸರಬರಾಜಾದರೂ ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕವಷ್ಟೇ ಪ್ರಯಾಣಿಕರ ಸೇವೆಗೆ ಬಿಎಂಆರ್ ಸಿಎಲ್ ನೀಡಲಿದೆ. 6 ಬೋಗಿ ರೈಲು ನಿಲ್ಲುವಂತಹ ನಿಲ್ದಾಣಗಳನ್ನು ಮೊದಲೇ ವಿನ್ಯಾಸಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+