ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಹೆತ್ತವರನ್ನು ಊರಿಗೆ ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ, ಅವರಿಗೆ ಹ್ಯಾಪಿ ಜರ್ನಿ ಎಂದು ಹೊರಟಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ತನ್ನ ಜೀವನದ ಜರ್ನಿಯನ್ನು ಅಲ್ಲಿಯೇ ಅಂತ್ಯಗೊಳಿಸಿದ್ದ.

ವಿಕ್ರಮ್ ಮೃತರು, ವಿಕ್ರಮ್ ಅವರನ್ನು ರಕ್ಷಿಸಲು ಹೋಗಿದ್ದ ತಂದೆ ವಿಜಯನ್ ಅವರಿಗೂ ಕಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನೊಂದಿಗೆ ಸಮಯ ಕಳೆಯಬೇಕು ಎನ್ನುವ ಆಸೆಯಲ್ಲಿ ಪೋಷಕರು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಸುತ್ತಾಡಿಸಿ ಬಳಿಕ ರೈಲು ಹತ್ತಿಸಲು ವಿಕ್ರಂ ತೆರಳಿದ್ದ, ಮಾತನಾಡುತ್ತಲೇ ರೈಲು ಹೊರಟೇ ಬಿಟ್ಟಿತು ಆತುರವಾಗಿ ಇಳಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

 ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಕೇರಳ ಮೂಲದ ವಿಕ್ರಮ್ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದನು, ತಂದೆ ವಿಜಯನ್ ಹಾಗೂ ತಾಯಿ ಉದಯಕುಮಾರಿ ಮಗನನ್ನು ನೋಡಲು ಐದು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಡಿ.17ರಂದು ಅವರನ್ನು ಊರಿಗೆ ಕಳುಹಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

Wipro techie tries to jump off moving train, crushed to death

ರೈಲು ಹೊರಟ ವಿರುದ್ಧ ದಿಕ್ಕಿನಲ್ಲಿ ಇಳಿದ ವಿಕ್ರಮ್, ನೋಡನೋಡುತ್ತಲೇ ರೈಲಿನ ಚಕ್ರದಡಿ ಸಿಲುಕಿದ್ದ, ಅದನ್ನು ನೋಡಿದ ವಿಜಯನ್ ರೈಲಿನಿಂದ ಜಿಗಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

English summary
In a heart wrenching incident , 28 year old software engineer , who had gone to bid his home -bound parents goodbye.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X