Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಫೆ.21ರಂದು ಶನಿವಾರ ವೈನ್ ಮೇಳ

ಬೆಂಗಳೂರು, ಫೆ. 20 : ವೈನ್ ಪ್ರಿಯರಿಗೆ ಸಿಹಿ ಸುದ್ದಿ. ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್ ಜಂಟಿಯಾಗಿ ಫೆ.21ರಂದು ವೈನ್ ಮೇಳವನ್ನು ಆಯೋಜಿಸಿವೆ. 150ಕ್ಕೂ ಹೆಚ್ಚು ರೀತಿಯ ವೈನ್‌ಗಳು ಮೇಳದಲ್ಲಿ ದೊರೆಯುತ್ತವೆ.

ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷರಾದ ಬಕ್ಕಪ್ಪಾಕೋಟೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಫೆ.21ರ ಶನಿವಾರ ಪ್ರೆಸ್‌ಕ್ಲಬ್ ಆವರಣದಲ್ಲಿ ಮೈನ್ ಮೇಳ ನಡೆಯಲಿದೆ ಎಂದು ಹೇಳಿದ್ದಾರೆ. ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರು ಮೇಳವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. [ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ, ಕಲ್ಲಂಗಡಿ ಮೇಳ]

Wine

ಮೇಳದಲ್ಲಿ ರಾಜ್ಯದ 9, ಮಹಾರಾಷ್ಟ್ರದ 3 ಮತ್ತು ವಿದೇಶದ 6 ವೈನರಿಗಳು ಪಾಲ್ಗೊಳ್ಳುತ್ತಿದ್ದು ಸುಮಾರು 150ಕ್ಕೂ ಹೆಚ್ಚು ಮಾದರಿಯ ವೈನ್‌ಗಳು ಲಭ್ಯವಿರಲಿವೆ. ಸಂಜೆ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿದ್ದು, ನಟಿಯರಾದ ರೂಪಿಕಾ, ರಾಗಿಣಿ ದ್ವಿವೇದಿ ಮುಂತಾದವರು ಭಾಗವಹಿಸಲಿದ್ದಾರೆ. [ಬೆಂಗಳೂರಿನಲ್ಲಿ ವೈನ್ ಲೈಬ್ರರಿ ಮತ್ತು ಅಕಾಡೆಮಿ]

ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್ ಜಂಟಿಯಾಗಿ ಈ ಮೇಳವನ್ನು ಆಯೋಜಿಸಿದ್ದು, ಆರೋಗ್ಯಕರ ವೈನ್ ಬಳಕೆ ಉತ್ತೇಜಿಸಲು ವೈನ್ ತಯಾರಿಕೆ ಬಗ್ಗೆ ತರಬೇತಿ ನೀಡಲು ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. [ಪಿಟಿಐ ಚಿತ್ರ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+