ಪ್ರಥಮ್ ವಿರುದ್ಧ ಐಪಿಸಿ 309ರ ಅಡಿ ಪ್ರಕರಣ ದಾಖಲಾಗುತ್ತಾ?

ಐಪಿಸಿ 309ರ ಅಡಿಯಲ್ಲಿ ಆತ್ಮಹತ್ಯೆ ಯತ್ನ ಅಪರಾಧ. ಆತ್ಮಹತ್ಯೆಗೆ ಯತ್ನಿಸಿರುವ ಬಿಗ್ ಬಾಸ್ ಕನ್ನಡ ಅವತರಣಿಕೆಯ ವಿಜೇತರಾದ ಪ್ರಥಮ್ ವಿರುದ್ಧ ಪ್ರಕರಣ ದಾಖಲಾಗುತ್ತಾ?

ಬೆಂಗಳೂರು, ಏಪ್ರಿಲ್ 5: ಬಿಗ್ ಬಾಸ್ ಕನ್ನಡ ಅವತರಣಿಕೆಯ ಈ ಬಾರಿ ವಿಜೇತರಾದ ಪ್ರಥಮ್ ಆತ್ಮಹತ್ಯೆ ಯತ್ನದ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ತಾವೇ ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿರುವ ಪ್ರಥಮ್ ಮೇಲೆ ಈಗ ದೂರು ದಾಖಲಾಗುತ್ತಾ? ಅವರ ಈ ಕೃತ್ಯಕ್ಕೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತಾ ಎಂಬ ಪ್ರಶ್ನೆಗಳು ಎದುರಾಗಿವೆ.

ಏಕೆಂದರೆ, ಭಾರತೀಯ ದಂಡ ಸಂಹಿತೆ (ಐಪಿಸಿ) 309ರ ಪ್ರಕಾರ ಆತ್ಮಹತ್ಯೆ ಯತ್ನಿಸುವುದು ಅಪರಾಧವಾಗುತ್ತದೆ. ಆದರೆ ಈಚೆಗೆ ಲೋಕಸಭೆಯಲ್ಲಿ ಮಂಡಿಸಿದ ಮಾನಸಿಕ ಆರೋಗ್ಯ ರಕ್ಷಣೆ ಮಸೂದೆಯಲ್ಲಿ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಆತ್ಮಹತ್ಯೆಗೆ ಯತ್ನಿಸಿದರೆ ಅಪರಾಧ ಎಂದು ಪರಿಗಣಿಸುವಂತಿಲ್ಲ ಎಂಬ ತಿದ್ದುಪಡಿ ತಂದಿದೆ.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

Will case registered against Pratham for attempt to suicide under IPC 309?

ಆದರೆ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮಾನಸಿಕವಾಗಿ ದೃಢವಾಗಿದ್ದು, ಯಾವುದೇ ಒತ್ತಡ ಇರಲಿಲ್ಲ ಎಂದು ಸಾಬೀತಾದರೆ ಐಪಿಸಿ 309ರ ಅಡಿಯಲ್ಲಿ ಅಪರಾಧವಾಗುತ್ತದೆ ಮತ್ತು ಅದಕ್ಕೆ ಶಿಕ್ಷೆಯಾಗುತ್ತದೆ. ಇದೀಗ ಆತ್ಮಹತ್ಯೆಗೆ ಯತ್ನಿಸಿರುವ ಪ್ರಥಮ್ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುತೂಹಲವಂತೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+