ಕೊಲೆ ಕೇಸ್‌ನಲ್ಲಿ ಅಂದರ್ ಆಗಿರೋ ದರ್ಶನ್‌ ಅಭಿಮಾನಿ ರಘು ಪತ್ನಿಯ ಹಿನ್ನೆಲೆ ಕೇಳಿದ್ರೆ ಶಾಕ್‌ ಆಗ್ತಿರಾ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ, ದಿನ ಕಳೆದಂತೆ ಹೊಸ ಹೊಸ ತಿರುವ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಬಂಧಿತರಾದವರ ಹಿನ್ನೆಲೆಯನ್ನು ತಿಳಿದು ಕಂಡರೆ ಮೈ ಎಲ್ಲ ಜುಮ್‌ ಎನ್ನುತ್ತದೆ. ಈ ಪ್ರಕರಣದಲ್ಲಿ ಹೆಚ್ಚಾಗಿ ಕೆಳಿಸಿಕೊಳ್ಳುವ ಹೆಸರುಗಳಲ್ಲಿ ರಘು ಹೆಸರು ಸಹ ಒಂದು.

ಚಿತ್ರದುರ್ಗದ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿರುವ ಇತ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ. ಪವಿತ್ರಾ ಗೌಡಾಗೆ ದರ್ಶನ್‌ ಅಸಭ್ಯ ಮೆಸೇಜ್‌ ಮಾಡಿದ್ದರಿಂದ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರುವಂತೆ, ಸೂಚಿಸಲಾಗಿತ್ತು. ಡಿ ಬಾಸ್‌ ಹೇಳಿದಂತೆ ರಘು, ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ಸಂಪರ್ಕಿಸಿ ಬೆಂಗಳೂರಿಗೆ ಕರೆದುಕೊಂಡು ಬರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

Wife of Raghu Accused of Theft and Fraud

ರಘು ಪತ್ನಿಯ ಹಿನ್ನೆಲೆ ಏನು?

ರಘು ಈ ಪ್ರಕರಣದಲ್ಲಿ ಸದ್ಯ ದರ್ಶನ್‌ ಜೊತೆಗೂಡಿ ಪೊಲೀಸ್‌ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಆದರೆ ಈ ಪ್ರಕರಣ ಬಿಟ್ಟು, ಬೇರೆ ಪ್ರಕರಣಗಳಲ್ಲೂ ರಘು ಕೈವಾಡ ಇರುವುದು ಬಯಲಾಗಿದೆ. ಇಷ್ಟೇ ಏಕೆ ರಘು ಪತ್ನಿ ಹಿಸ್ಟರಿ ಕಂಡು ಪೊಲೀಸರು ಆತಂಕಕ್ಕೆ ಒಳಗಾಗಿದೆ.

ಎಷ್ಟು ಸಿಮ್ ಕಾರ್ಡ್‌ ಇವೆ ಗೊತ್ತಾ?

ಇನ್ನು ರಘು ಅವರ ಪತ್ನಿಯ ವಿಚಾರಣೆಯನ್ನು ಸಹ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಖಾಕಿ ಪಡೆಗಳಿಗೆ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ರಘು ಪತ್ನಿ ಸಖತ್ ಆಗಿದೆ. ಇವಳ ಹೆಸರಿನಲ್ಲಿ ಬರೋಬ್ಬರಿ 10 ಸಿಮ್‌ ಕಾರ್ಡ್‌ಗಳು ಇವೆಯಂತೆ.

ಇವರ ಮೇಲೆ ಇವೆ ಪ್ರಕರಣ

ರಘು ಪತ್ನಿಯ ಬಳಿ ಸಿಮ್‌ ಕಲೆಕ್ಷನ್‌ ಕಂಡು ಪೊಲೀಸರು ಬೆಚ್ಚಿದ್ದಾರೆ ಎನ್ನಲಾಗುತ್ತಿದೆ. ರಘು ದಂಪತಿಯ ಮೇಲೆ ಸ್ಥಳೀಯ ಮಹಿಳೆಯಿಂದ ಕಳ್ಳತನ ಆರೋಪ ಸಹ ಕೇಳಿ ಬಂದಿದೆ. ರಘು ಪತ್ನಿಯ ಹೆಸರಿನಲ್ಲಿ ಸ್ಥಳೀಯ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. 2015 ರಲ್ಲಿ ಎದುರು ಮನೆಯಲ್ಲಿ ಕಳ್ಳತನ‌ಮಾಡಿದ್ದ ಆರೋಪ ಇದೆ. 2016 ರಲ್ಲಿ FIR ದಾಖಲಾಗಿದೆ. ಇನ್ನು ರಘು ಪತ್ನಿ 2015ರಲ್ಲಿ ಖಾಸಗಿ ಬ್ಯಾಂಕಲ್ಲಿ ನಕಲಿ ಗೋಲ್ಡ್ ಇಟ್ಟು ಸಾಲ‌ಪಡೆದಿದ್ದರು ಎಂಬ ಆರೋಪ ಸಹ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ರಘು ಪತ್ನಿ ಹಣ ಹಾಗೂ ಚಿನ್ನಾಭರಣಗೊಂದಿಗೆ ಊರಿಗೆ ಕಾಲು ಕಿತ್ತಿದ್ದಳು ಎಂದು ತಿಳಿದು ಬಂದಿದೆ. ಈಗ ಪೊಲೀಸರ ವಿಚಾರಣೆಯ ವೇಳೆ ಹಲವು ಅಸಲಿ ಸಂಗತಿಗಳು ಬಯಾಲಗುತ್ತಿವೆ.

ರಘು ಹಿನ್ನೆಲೆ ಏನು?

ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು, 15 ವರ್ಷಗಳಿಂದ ದರ್ಶನ್‌ ಅಭಿಮಾನಿ. ಇವರನ್ನು ದರ್ಶನ್‌ ಆಗಾಗ್ಗ ಭೇಟಿ ಆಗುತ್ತಿದ್ದ ಎಂದು ಹಲವರು ಹೇಳುತ್ತಾರೆ. ಚಿತ್ರದುರ್ಗದ ಮೇಲೆ ದರ್ಶನ್‌ ಪ್ರಯಾಣ ಬೆಳೆಸಿದಾಗಲೆಲ್ಲಾ ಇವರನ್ನು ಭೇಟಿ ಆಗುತ್ತಿದ್ದರು ಎನ್ನಲಾಗಿದೆ. ದರ್ಶನ್‌ ಚಿತ್ರಗಳು ಬಿಡುಗಡೆ ಆದಾಗ ಈತ, ಚಿತ್ರ ಮಂದಿರದ ಆವರಣದಲ್ಲಿ ಕಟೌಟ್‌ ಅಳವಡಿಸುತ್ತಿದ್ದ. ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕ ಎಂದು ತಿಳಿದು ಬಂದಿದೆ.

ರಘು ಅವರು ಎನ್‌.ಸಹನಾರನ್ನು ಲವ್‌ ಮಾಡಿ ಮದುವೆ ಮಾಡಿದ್ದಾರೆ. ಅಲ್ಲದೆ ಇವರಿಗೆ ಒಬ್ಬ ಮಗಳು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+