ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಟೆಕ್ಕಿಗೆ ಸಂಕಷ್ಟ!

ಬೆಂಗಳೂರು/ ಛತ್ತೀಸ್ ಗಡ, ಮೇ 08 : ಹೆಂಡತಿಯೊಡನೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿಗೆ ಇದೀಗ ಕಂಟಕ ಎದುರಾಗಿದೆ.

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಟೆಕ್ಕಿಯೊಬ್ಬರ ವಿರುದ್ಧ ಛತ್ತೀಸ್ ಗಡದ ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗ ಪ್ರಕರಣ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.[ಬೆಳಗಾವಿ: ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!]

ಛತ್ತೀಸ್ ಗಡದ ಮೂಲದ ಯುವತಿ ಆರು ವರ್ಷದ ಹಿಂದೆ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಮದುವೆಯಾಗಿ ಈಜೀಪುರದಲ್ಲಿ ನೆಲೆಸಿದ್ದರು. ಆರಂಭದಲ್ಲಿ ಸಂತೋಷದಲ್ಲಿದ್ದ ಪತ್ನಿಗೆ ನಂತರ ಪತಿಯ ವಿಕೃತ ಮನಸ್ಥಿತಿ ಗೊತ್ತಾಗಿದೆ.

Wife files unnatural sexual offence against her husband in Bengaluru

ಪ್ರತಿ ದಿನ ಬ್ಲೂ ಫಿಲ್ಮ್ ವೀಕ್ಷಿಸುವ ಚಟವನ್ನು ಹೊಂದಿದ್ದ ಈತ ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿ ನೀನು ಈ ರೀತಿಯಾಗಿ ಸಹಕರಿಸು ಎಂದು ಪತ್ನಿಗೆ ಪೀಡಿಸುತ್ತಿದ್ದ. ಇದರಿಂದ ರೋಸಿ ಹೋದ ಯುವತಿ ಪೊಲೀಸ್ ಮೇಟ್ಟಿಲೇರಿದ್ದಾಳೆ.

ಅಸ್ವಾಭಾವಿಕ ಲೈಂಗಿಕ ಕ್ರೀಯೆಗೆ ಆರಂಭದಲ್ಲಿ ಒಂದೆರಡು ಬಾರಿ ನಾನು ಒಪ್ಪಿ ಸಹಕರಿಸಿದ್ದೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಸಿಕೊಂಡಿದ್ದ ಪತಿ ನಂತರ ಪ್ರತಿ ಬಾರಿಯೂ ಈ ರೀತಿಯಾಗಿ ಸಹಕರಿಸು ಎಂದು ಒತ್ತಾಯಿಸುತ್ತಿದ್ದ.

ನಾನು ನಿರಾಕರಿಸಿದಕ್ಕೆ ನಮ್ಮಿಬ್ಬರ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನಿನ್ನ ತಂದೆಗೆ ವಾಟ್ಸಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಕಿರುಕುಳದ ಬಗ್ಗೆ ಹತ್ತೆ ಬಳಿ ಹೇಳಿದಾಗ ಅವರು ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲವೆಂದು ಕೊನೆಗೆ ವಿಕೃತ ಪತಿಯ ಕಾಟ ತಡೆಯಲಾರದೆ ಗಂಡನನ್ನು ಬಿಟ್ಟು ಪತ್ನಿ ತಂದೆಯ ಮನೆಯಾದ ಛತ್ತೀಸ್ ಗಡದ ರಾಯಭಾಗಕ್ಕೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಪ್ರಕರಣ ಈಗ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗುತ್ತಿದ್ದಂತೆ ಟೆಕ್ಕಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+