ಬೆಂಗಳೂರಿನ ಈ ಬಿಡಿಎ ಕಾಂಪ್ಲೆಕ್ಸ್ ಅಭಿವೃದ್ಧಿಗೆ ವಿರೋಧ, ಯಾಕೆ ?
Bangalore BDA complex property: ಬೆಂಗಳೂರಿನ ಈ ನಿರ್ದಿಷ್ಟ ಭಾಗದಲ್ಲಿ ಬಿಡಿಎ ಕಾಂಪ್ಲೆಕ್ಸ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಸಾರ್ವಜನಿಕ ಸಹಭಾಗಿತ್ವದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದೆ. ಆದರೆ, ಈ ನಿರ್ದಿಷ್ಟ ಭಾಗದಲ್ಲಿ ಬಿಡಿಎ ಕಾಂಪ್ಲೆಕ್ಸ್ ಅಭಿವೃದ್ಧಿ ಮಾಡುವುದು ಬೇಡ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೇ ಈ ಮಾದರಿಯ (ಪಿಪಿಪಿ) ಅಭಿವೃದ್ಧಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಈ ಕಾಂಪ್ಲೆಕ್ಸ್‌ಗಳ ಅಭಿವೃದ್ಧಿಗೆ ವಿರೋಧ: ಬೆಂಗಳೂರಿನ ಎಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ಗಳ ಅಭಿವೃದ್ಧಿಗೆ ವಿರೋಧ ವ್ಯಕ್ತವಾಗಿದೆ. ಎಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಜಾಗ ಚದರ ಅಡಿಗೆ ಬರೋಬ್ಬರಿ 50 ಸಾವಿರ ಇದೆ. ಎಚ್‌ಎಸ್‌ಆರ್ ಮತ್ತು ಕೋರಮಂಗಲದಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಈಚೆಗಷ್ಟೇ ಅಭಿವೃದ್ಧಿಪಡಿಸಲಾಗಿದೆ. ಈ ಎರಡೂ ಕಾಂಪ್ಲೆಕ್ಸ್‌ಗಳನ್ನು ಬರೋಬ್ಬರಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಈಚೆಗಷ್ಟೇ ಅಭಿವೃದ್ಧಿಪಡಿಸಲಾಗಿದೆ. ಈ ಎರಡೂ ಕಾಂಪ್ಲೆಕ್ಸ್‌ಗಳು ಇನ್ನೂ ಹತ್ತಾರು ವರ್ಷಗಳ ಕಾಲ ಬಾಳಿಕೆ ಬರುವ ಸುಸ್ಥಿತಿಯಲ್ಲಿವೆ. ಇದೀಗ ಈ ವಾಣಿಜ್ಯ ಸಂಕೀರ್ಣಗಳನ್ನು ಕೆಡವಿ ಹಾಕುವುದು ಎಷ್ಟು ಸರಿ ಎಂದು ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ ಪ್ರಶ್ನೆ ಮಾಡಿದೆ.

ಪಿಪಿಪಿ ಯೋಜನೆಯಡಿ ಸಾರ್ವಜನಿಕ ಆಸ್ತಿಗಳನ್ನು ಲೀಸ್ ಹೆಸರಲ್ಲಿ ಖಾಸಗಿಯವರಿಗೆ ಒತ್ತೆ ಇರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇವುಗಳಲ್ಲಿ ಬೆಂಗಳೂರಿನ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗಿಯವರಿಗೆ ನೀಡುತ್ತಿರುವುದು ಒಂದು ಭಾಗವಷ್ಟೆ. ಈ ಆಸ್ತಿಗಳು (ಪ್ರದೇಶ) ಪ್ರೈಮ್ ಲೊಕಾಲಿಟಿಯಲ್ಲಿವೆ. ಈಗ ಇರುವ ಮಾರುಕಟ್ಟೆಯ ಬೆಲೆಯನ್ನು ನೋಡಿದರೆ, ಇದು ಅಂದಾಜು 20 ಸಾವಿರ ಕೋಟಿ ರೂಪಾಯಿ ಬಾಳುತ್ತವೆ. ಹೀಗಾಗಿ, ಇವು ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಅಧೀನದಲ್ಲೇ ಇರಬೇಕು. ಇನ್ನು ಪಿಪಿಪಿಗೆ 30 ರಂಗಗಳನ್ನು ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. Monetisation & PPP ಎನ್ನುವುದು ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳು.ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರವೂ ಇದನ್ನೇ ಅನುಸರಿಸುತ್ತಿದೆ ಎಂದು ಜನ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಸ್ತಿ ಉಳಿಸಿ ಅಭಿಯಾನ
Public property ಸಾರ್ವಜನಿಕ ಆಸ್ತಿಗಳ ಉಳಿವಿಗಾಗಿ ಎನ್ನುವ ಘೋಷಾವಾಕ್ಯದೊಂದಿಗೆ ನಾಗರಿಕರ ಪ್ರತಿರೋಧ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಬಡಾವಣೆಗಳ ನಿವಾಸಿಗಳು, ಬಿಡಿಎ ಕಾಂಪ್ಲೆಕ್ಸ್‌ಗಳ ವರ್ತಕರು, ವಿವಿಧ ಸಂಘಟನೆಗಳು, ನಾಗರಿಕ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಸೆಪ್ಟೆಂಬರ್ 12ರಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 12ರ ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ಪ್ರಾರಂಭವಾಗಲಿದೆ.












Click it and Unblock the Notifications