ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಜಾಗ ಇನ್ನೂ ಫಿಕ್ಸ್ ಆಗಿಲ್ಲ ಯಾಕೆ, ಇಲ್ಲಿದೆ ನಿಖರ ಮಾಹಿತಿ!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಜಾಗ ಅಂತಿಮವಾಗಿಲ್ಲ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರವು ಇಲ್ಲಿಯ ವರೆಗೆ ಒಟ್ಟು 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡಿದೆ. ಈ ಜಾಗಗಳಲ್ಲಿ ಈಗಾಗಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸದಸ್ಯರು / ಕೇಂದ್ರ ತಂಡದ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಇದೀಗ ಈ ಜಾಗಗಳಲ್ಲಿ ಸ್ಥಳ ಪರಿಶೀಲನೆ ಮಾಡಿರುವ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೊಡಲಿದ್ದು. ಯಾವ ಜಾಗ ಸೂಕ್ತ ಹಾಗೂ ಯಾವ ಜಾಗದಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ಯೋಗ್ಯವಾಗಿದೆ ಎನ್ನುವ ವಿಷಯಗಳ ಆಧಾರದ ಮೇಲೆ ಜಾಗ ಅಂತಿಮವಾಗಲಿದೆ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕನಕಪುರ - ಕುಣಿಗಲ್ ಹಾಗೂ ಮಾಗಡಿ ಪ್ರದೇಶದಲ್ಲಿ ಒಟ್ಟು 5 ಜಾಗಗಳನ್ನು ಗುರುತಿಸಲಾಗಿದೆ. ಈ ಜಾಗಗಳನ್ನು ರಾಜ್ಯ ಸರ್ಕಾರವು ಈಗಷ್ಟೇ ಶಾರ್ಟ್ ಲಿಸ್ಟ್ ಮಾಡಿದೆ. ಇನ್ನೂ ಈ ರೀತಿ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳನ್ನು ಫೈನಲ್ ಮಾಡುವುದು ಸುದೀರ್ಘ ಪ್ರಕ್ರಿಯೆಯಾಗಿದ್ದು. ಕನಿಷ್ಠ ಎರಡರಿಂದ ಮೂರು ತಿಂಗಳು ಆಗುವ ಸಾಧ್ಯತೆ ಇದೆ ಹೇಳಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ: ಜಾಗ ನಿಗದಿಗೆ ವಿಳಂಬವೇಕೆ
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವುದಕ್ಕೆ ಇಷ್ಟೊಂದು ವಿಳಂಬವೇಕೆ ಎನ್ನುವ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಹಲವು ಕಾರಣಗಳು ಇವೆ. ಪ್ರಮುಖವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 5 ಮಾನದಂಡಗಳು ಇವೆ. ಈ ಮಾನದಂಡಗಳು ಹೊಂದಾಣಿಕೆಯಾದರೆ ಮಾತ್ರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿದೆ.
ಆ ಪ್ರಮುಖ ಮಾನದಂಡಗಳು ಈ ರೀತಿ ಇವೆ
* ತಾಂತ್ರಿಕ ಹೊಂದಾಣಿಕೆ
* ಪ್ರಯಾಣಿಕರ ಅನುಕೂಲ
* ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪೂರಕ ಜಾಗ
* ವಾಯು ಪ್ರದೇಶ ಹೊಂದಾಣಿಕೆ
* ಕೊನೆಯದಾಗಿ ಪ್ರಸಕ್ತ ಇರುವ ಏರ್ ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಅಂಶ
ಎರಡನೇ ಅಂತಾರಾಷ್ಟ್ರೀಯ ವಿಮಾನ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇನ್ನೂ ಜಾಗ ಅಂತಿಮಾಗಿಲ್ಲ. ಸರ್ಕಾರವು ಜಾಗವು ಗುರುತು ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದು ಅಥವಾ ಜಾಗಗಳನ್ನು ಹುಡುಕುತ್ತಿರುವುದರ ಹಿಂದೆ ಈ 5 ಪ್ರಮುಖ ಕಾರಣಗಳೊಂದಿಗೆ ಜಾಗವೂ ಸೇರಿದೆ. ಎರಡನೇ ವಿಮಾನ ನಿಲ್ದಾಣಕ್ಕೆ 4,000 ಸಾವಿರದಿಂದ 5,000 ಸಾವಿರ ಎಕರೆ ಜಾಗದ ಅವಶ್ಯಕತೆ ಇದೆ.
ಇದರಲ್ಲಿ ಸರ್ಕಾರಿ ಜಾಗವೇ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಚಿಂತನೆ ನಡೆಸಿದೆ. ಸರ್ಕಾರಿ ಜಾಗ ಹೆಚ್ಚಾಗಿ ಇರುವ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ, ಭೂಸ್ವಾಧೀನ ಪ್ರಕ್ರಿಯೆ ಸುಲಭವಾಗಲಿದೆ. ಅಲ್ಲದೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆರ್ಥಿಕ ವೆಚ್ಚವೂ ಹೆಚ್ಚಾಗಲಿದೆ. ಹೀಗಾಗಿ, ಸರ್ಕಾರಿ ಭೂಮಿಯ ಲೆಕ್ಕಾಚಾರ ಜೋರಾಗಿದೆ. ಇದೇ ಕಾರಣಕ್ಕೆ ವಿಮಾನ ನಿಲ್ದಾಣ ಜಾಗ ಫಿಕ್ಸ್ ಮಾಡುವುದು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.
ಯಾವ ಜಾಗವೂ ಫೈನಲ್ ಆಗಿಲ್ಲ: ಇನ್ನು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದರೂ ಯಾವುದೇ ಜಾಗವೂ ಇಲ್ಲಿಯ ವರೆಗೆ ಫೈನಲ್ ಆಗಿಲ್ಲ. ಸರ್ಕಾರವು ಈ ಸಂಬಂಧ ಇನ್ನಷ್ಟೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.












Click it and Unblock the Notifications