ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ: ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಯಾಕೆ ಗೊತ್ತಾ..?

ಬೆಂಗಳೂರು, ಅಕ್ಟೋಬರ್ 12: ಸಾಮಾನ್ಯವಾಗಿ ಯಾವುದೇ ಎರಡು ದೇಶಗಳ ನಡುವಣ ನಡುವೆ ಯುದ್ಧ ನಡೆದಾಗ ಆ ದೇಶಕ್ಕೆ ಮಾತ್ರ ಪರಿಣಾಮ ಆಗದೇ ಇನ್ನುಳಿದ ದೇಶಕ್ಕೂ ಕೂಡ ಯುದ್ಧದ ಬಿಸಿ ತಟ್ಟುತ್ತದೆ. ಆ ದೇಶದ ಜನರಿಗೆ ಒಂದು ರೀತಿಯ ಸಮಸ್ಯೆಯಾದರೆ ಉಳಿದ ದೇಶಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತದೆ. ಸದ್ಯ ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧವಾಗುತ್ತಿರುವುದರಿಂದ ಭಾರತದಲ್ಲಿ ಬಂಗಾರದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಭಾನುವಾರದಿಂದಲೇ ಸ್ವರ್ಣದ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದು, ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರ ಸಂಖ್ಯೆ ಕೂಡ ಕುಂಠಿತ ಆಗುತ್ತಿದೆ. ಶನಿವಾರ ಯುದ್ಧ ಶುರುವಾಗಿದ್ದು, ಭಾನುವಾರದಿಂದಲೇ ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಇಸ್ರೇಲ್ ನಲ್ಲಿ ಯುದ್ಧವಾದ್ರೆ ಭಾರತದಲ್ಲಿ ಚಿನ್ನದ ರೇಟ್ ಹೆಚ್ಚಾಗಲು ಹಲವು ಕಾರಣಗಳಿವೆ. ಆ ಕಾರಣಗಳು ಇಲ್ಲಿವೆ.

gold-rate-suddenly-huge-increasing-in-india

ಭಾರತದಲ್ಲಿ ಪ್ರಮುಖವಾಗಿ ಚಿನ್ನದ ಉತ್ಪಾದನಾ ಕೇಂದ್ರಗಳು ಇಲ್ಲ. ಎಲ್ಲವನ್ನೂ ಕೂಡ ಹೊರ ದೇಶದಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಅಂತಾರಷ್ಟ್ರೀಯ ಮಟ್ಟದಲ್ಲಿ ಟ್ರೇಡಿಂಗ್ ಏನಿದ್ದರೂ, ಡಾಲರ್ಸ್ ಮೂಲಕ ಆಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರೀತಿ ವ್ಯಾಪಾರ- ವಹಿವಾಟು ನಡೆಯುವುದರಿಂದ ಜಾಗತಿಕ ಮಟ್ಟದಲ್ಲಿ ಏನೇ ಮುಖ್ಯವಾದ ಬೆಳವಣಿಗೆ ನಡೆದರೂ ಅದರ ಎಫೆಕ್ಟ್ ಭಾರತಕ್ಕೂ ತಟ್ಟುತ್ತದೆ.

ಅಲ್ಲದೇ ಯುದ್ಧದ ಸಮಯದಲ್ಲಿ ಹೆಚ್ಚಿನ‌ ದೇಶಗಳು ಚಿನ್ನದ ಮೇಲೆ ಅಧಿಕ ಸಂಖ್ಯೆಯಲ್ಲಿ ಹೂಡಿಕೆ ಮಾಡುತ್ತದೆ. ಚಿನ್ನದ ಮೇಲಿನ ಹೂಡಿಕೆಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದ ಹಾಗೆಯೇ ಸಹಜವಾಗಿಯೇ ಬೆಲೆ ಕೂಡ ಏರಿಕೆಯಾಗುತ್ತದೆ. ಯುದ್ಧ ಇದೇ ರೀತಿಯಲ್ಲಿ ಮುಂದುವರೆದರೆ ಚಿನ್ನದ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

gold-rate-suddenly-huge-increasing-in-india

ಬೆಂಗಳೂರು (1 ಗ್ರಾಂ)

ಕ್ರಮ
ಸಂಖ್ಯೆ
ದಿನ 22 ಕ್ಯಾರೆಟ್ 24 ಕ್ಯಾರೆಟ್
1 ಭಾನುವಾರ ₹5,150 ₹5,700
2 ಸೋಮವಾರ ₹5,229 ₹5,749
3 ಮಂಗಳವಾರ ₹5,300 ₹5,789
4 ಬುಧವಾರ ₹5360
₹5,900-₹6,000

ಮುಂಬೈ( 8 ಗ್ರಾಂ)

ಕ್ರಮ
ಸಂಖ್ಯೆ
ದಿನ 22 ಕ್ಯಾರೆಟ್ 24 ಕ್ಯಾರೆಟ್
1 ಶನಿವಾರ ₹42,784 ₹45,136
2 ಭಾನುವಾರ ₹43,304 ₹45,472
3 ಸೋಮವಾರ ₹43,464 ₹ 45,640
4 ಮಂಗಳವಾರ ₹43,794 ₹45,888
5 ಬುಧವಾರ ₹43,794 ₹45,888

ದೆಹಲಿ( 8 ಗ್ರಾಂ)

ಕ್ರಮ
ಸಂಖ್ಯೆ
ದಿನ 22 ಕ್ಯಾರೆಟ್ 24 ಕ್ಯಾರೆಟ್
1 ಶನಿವಾರ ₹42,784 ₹45,136
2 ಭಾನುವಾರ ₹43,304 ₹45,472
3 ಸೋಮವಾರ ₹43,464 ₹ 45,640
4 ಮಂಗಳವಾರ ₹43,794 ₹45,888
5 ಬುಧವಾರ ₹43,794 ₹45,888

ಇನ್ನು ಗುರುವಾರ ಭಾರತದಲ್ಲಿ ಒಂದು ಗ್ರಾಂ ಚಿನ್ನಕ್ಕೆ 5,400 ರೂಪಾಯಿ ಇದ್ದು, ಎಂಟು ಗ್ರಾಂ 43,200 ರೂಪಾಯಿ ಇದೆ ಹಾಗೂ ಹತ್ತು ಗ್ರಾಂಗೆ 54,000 ರೂಪಾಯಿ ಇದೆ. ಈ ರೀತಿಯಾಗಿ ಬಂಗಾರದ ಬೆಲೆ ಏರಿಕೆಯಾಗಿ ತನ್ನ ಓಟ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+