ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉಪಮೇಯರ್ ಯಾರಾಗ್ತಾರೆ? ಚುನಾವಣೆಗೆ ಕ್ಷಣಗಣನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 5: ಬಿಬಿಎಂಪಿ ಉಪಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಉಪ ಮೇಯರ್ ಯಾರಾಗ್ತಾರೆ ಎನ್ನುವ ಕುತೂಹಲ ಕೂಡ ಎಲ್ಲರಲ್ಲಿ ಆರಂಭವಾಗಿದೆ. ಕೇವಲ ಉಪ ಮೇಯರ್ ಚುನಾವಣೆ ಮಾತ್ರವಲ್ಲದೆ ಸ್ಥಾಯಿ ಸಮಿತಿ ಚುನಾವಣೆ ಕೂಡ ನಡೆಯಲಿದೆ.

ಅವಧಿ ಮುಗಿದು ಒಂದೂವರೆ ತಿಂಗಳು ತಡವಾಗಿ ಬಿಬಿಎಂಪಿ 12 ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಪ್ರತಿ ಸ್ಥಾಯಿ ಸಮಿತಿಗೆ 12 ಸದಸ್ಯರಂತೆ ಒಟ್ಟು 132 ಮಂದಿ ಸದಸ್ಯರನ್ನು ಆಯ್ಕೆಮಾಡಲಾಗುತ್ತದೆ.

ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?

ಪ್ರತಿ ಸದಸ್ಯರ ಆಯ್ಕೆಯನ್ನು ಕೈ ಎತ್ತುವ ಮೂಲಕ ನಡೆಸಲಾಗುತ್ತದೆ. ನಿಗದಿತ ಪ್ರಮಾಣದಲ್ಲಿ ನಾಮಪತ್ರ ಸಲ್ಲಿಕೆಯಾದರೆ ಅವಿರೋಧ ಆಯ್ಕೆ ಎಂದು ಘೋಷಿಸಲಾಗುತ್ತದೆ. ಬಿಬಿಎಂಪಿಯಲ್ಲಿ ನಾಲ್ಕನೇ ಅವಧಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯಲು ಸಹಕರಿಸಿದ 6 ಪಕ್ಷೇತರರಲ್ಲಿ ಮೂವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಚಂದ್ರಪ್ಪರೆಡ್ಡಿ, ಲಕ್ಷ್ಮೀನಾರಾಯಣ್ ಮತ್ತು ಮುಜಾಹಿದ್ ಪಾಷಾಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ.

Who will be deputy mayor of Bengaluru

ಬಿಬಿಎಂಪಿ ಉಪಮೇಯರ್ ರಮೀಳಾ ಶಂಕರ್ ನಿಧನದಿಂದ ತೆರವಾಗಿದ್ದ ಬಿಬಿಎಂಪಿ ಉಪ ಮೇಯರ್ ಹುದ್ದೆಗೆ ಜೆಡಿಎಸ್‌ನ ಭದ್ರೇಗೌಡ ಹಾಗೂ ಇಮ್ರಾನ್ ಪಾಷಾ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಬುಧವಾರ ಮಧ್ಯಾಹ್ನ 1 ಗಂಟೆಗೆ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ನಡುವೆ ಮೇಯರ್ ಹಾಗೂ ಉಪಮೇಯರ್ ಪಟ್ಟ ಹಂಚಿಕೆಯಾಗಿರುವುದರಿಂದ ಉಪ ಮೇಯರ್ ಹುದ್ದೆ ಜೆಡಿಎಸ್ ಪಾಲಾಗಿದೆ.

ಬೆಂಗಳೂರಿನ ಉಪಮೇಯರ್ ಪಟ್ಟಕ್ಕೆ ಭದ್ರೇಗೌಡ ಹೆಸರು ಬಹುತೇಕ ಅಂತಿಮ ಬೆಂಗಳೂರಿನ ಉಪಮೇಯರ್ ಪಟ್ಟಕ್ಕೆ ಭದ್ರೇಗೌಡ ಹೆಸರು ಬಹುತೇಕ ಅಂತಿಮ

ಕಳೆದ ಸೆಪ್ಟೆಂಬರ್ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜು ಹಾಗೂ ಉಪ ಮೇಯರ್ ಆಗಿ ರಮೀಳಾ ಉಮಾಶಂಕರ್ ಆಯ್ಕೆಯಾಗಿದ್ದರು. ಆದರೆ ಉಪ ಮೇಯರ್ ಆಗಿ ಆಯ್ಕೆಯಾದ ಆರೇ ದಿನಗಳಲ್ಲಿ ರಮೀಳಾ ನಿಧನ ಹೊಂದಿದ್ದರು. ಹೀಗಾಗಿ ಉಪಮೇಯರ್ ಸ್ಥಾನ ತೆರವಾಗಿದ್ದು, ಬುಧವಾರ ಹೊಸ ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಶನಿವಾರ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಪಕ್ಷದ ವರಿಷ್ಠರು ಸಭೆ ನಡೆಸಿದ್ದು, ಇಮ್ರಾನ್ ಪಾಷಾ ಹಾಗೂ ಭದ್ರೇಗೌಡ ಇಬ್ಬರು ಆಕಾಂಕ್ಷಿಗಳಾಗಿದ್ದಾರೆ.

English summary
Alliance with Congress party, JDS will fight for the deputy mayor post in BBMP which election will be conducted on December 5 at 1pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X