ಬನ್ನೇರುಘಟ್ಟ : ಹುಲಿಗಳ ಕಾದಾಟ, ಬಿಳಿ ಹುಲಿ ಸಾವು

Recommended Video

      ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 21 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಳಿ ಹುಲಿ ಮೃತಪಟ್ಟಿದೆ. ಮೂರು ಬೆಂಗಾಲ್ ಟೈಗರ್ಸ್‌ ಜೊತೆಗಿನ ಕಾದಾಟದಲ್ಲಿ ಬಿಳಿ ಹುಲಿ ಗಂಭೀರವಾಗಿ ಗಾಯಗೊಂಡಿತ್ತು.

      ಮೂರು ಬೆಂಗಾಲ್ ಟೈಗರ್‌ಗಳು ಬಿಳಿ ಹುಲಿಯ ಮೇಲೆ ದಾಳಿ ಮಾಡುವ ವಿಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದರು. ಕಾದಾಟದಿಂದ ಬಿಳಿ ಹುಲಿ ಸ್ಪೈನಲ್‌ ಕಾರ್ಡ್‌ಗೆ ಬಲವಾದ ಪೆಟ್ಟು ಬಿದ್ದು, ಹುಲಿ ನಡೆದಾಡದಂತೆ ಆಗಿತ್ತು.

      White tiger dies in Bannerghatta National Park

      ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಬಿಳಿ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬಿಳಿ ಹುಲಿ ಮೃತಪಟ್ಟಿದೆ. ಜುಲೈ ತಿಂಗಳಿನಲ್ಲಿ ಜೀವ್ರಾವೊಂದು ಗುಂಡಿಗೆ ಬಿದ್ದು, ಬನ್ನೇರುಘಟ್ಟದಲ್ಲಿ ಮೃತಪಟ್ಟಿತ್ತು.

      ಬೆಂಗಾಲ್ ಟೈಗರ್‌ಗಳು ಬಿಳಿ ಹುಲಿ ಜೊತೆ ನಿರಂತರವಾಗಿ ಕಾದಾಟ ನಡೆಸುತ್ತಿದ್ದವು. ಆದ್ದರಿಂದ, ಹುಲಿಗಳು ಖೇಜ್ ಬಿಟ್ಟು ಹೊರಬರದಂತೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಬಿಳಿ ಹುಲಿ ಖೇಜ್‌ನಿಂದ ಹೊರಬಂದಾಗ ಬೆಂಗಾಲ್ ಟೈಗರ್‌ಗಳು ಅದರ ಮೇಲೆ ದಾಳಿ ನಡೆಸಿದ್ದವು.

      ಮೂರು ಹುಲಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಹುಲಿಗಳ ಕಾದಾಟಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+