Bengaluru 2nd Airport: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವ ಸ್ಥಳ ಫಿಕ್ಸ್‌?

Bengaluru 2nd Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಇದು ಎರಡು ಟರ್ಮಿನಲ್‌ ಒಳಗೊಂಡಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆ ನಗರದ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ 5 ಸ್ಥಳಗಳನ್ನು ಸಹ ಗುರುತಿಸಲಾಗಿದೆ. ಆದರೆ ಇನ್ನೂ ಯಾವುದು ಫೈನಲ್‌ ಆಗಿಲ್ಲ. ಬದಲಾಗಿ ಈ ಬಗ್ಗೆ ಆಗಾಗ ಅಪ್ಡೇಟ್‌ ಮಾಹಿತಿ ಮಾತ್ರ ಹೊರಬೀಳುತ್ತಲೇ ಇದೆ.

ಈಗಾಗಲೇ ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಸರ್ವೇ ಕಾರ್ಯಗಳು ಕೂಡ ಮುಂದುವರೆಸಿದ್ದರು. ಆದರೆ ಈ ಭಾಗದ ರೈತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಾವು ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಜನರ ನಿಲುವಿನ ಪರ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಶಾಸಕರು ಕೂಡ ನಿಂತಿದ್ದು, ಈ ಭಾಗದಲ್ಲಿ ವಿಮಾನ ನಿಲ್ದಾಣ ಬೇಡ ಎಂದು ಹೇಳಿದ್ದಾರೆ.

Which Location Has Been Fixed for Bengaluru s 2nd Airport Construction

ನೆಲಮಂಗಲ, ತುಮಕೂರು, ಬಿಡದಿ, ಹಾರೋಹಳ್ಳಿ, ದಾಬಸ್‌ಪೇಟೆ 5 ಸ್ಥಳಗಳನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿತ್ತು. ಈ ಸ್ಥಳಗಳ ಪೈಕಿ ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಿ ಸರ್ವೇ ಕಾರ್ಯಗಳನ್ನು ಕೂಡ ಆರಂಭಿಸಿದ್ದರು ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಈ ಭಾಗದ ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮತ್ತೊಂದೆಡೆ ಹಲವು ಸಚಿವರು, ಶಾಸಕರು, ಉದ್ಯಮಿಗಳು, ಸಾರ್ವಜನಿಕರು ಸೇರಿದಂತೆ ಬಹುತೇಕ ಮಂದಿ ತುಮಕೂರಿನ ಬಳಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕೆಂದು ಹೇಳುತ್ತಲೇ ಬರುತ್ತಿದ್ದಾರೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ಮಾಡಿದರೆ, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಭಾಗದವರಿಗೆ ತುಂಬಾ ಪ್ರಯೋಜನಾ ಆಗಲಿದೆ ಅಂತಲೂ ಸಚಿವ ಜಿ.ಪರಮೇಶ್ವರ್, ವಿ.ಸೋಮಣ್ಣ ಅವರು ಹೇಳುತ್ತಲೇ ಬಂದಿದ್ದಾರೆ.

ಎಲ್ಲೆಲ್ಲಿ ಸರ್ವೇ?: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೆಲಮಂಗಲ-ಕುಣಿಗಲ್‌ ರಾಷ್ಟ್ರೀಯ ಹೆದ್ದಾರಿ 75ರ ಬಳಿ 6,000 ಹೆಕ್ಟೇರ್‌ ಜಾಗವನ್ನ ಹೆಲಿಕಾಪ್ಟರ್‌ ಮೂಲಕ ಡಿಜಿಟಲ್‌ ಸರ್ವೆ ನಡೆಸಲಾಗಿದೆ. ಮಾಗಡಿಯ ಮೋಟಗೊಂಡನಹಳ್ಳಿ, ನೆಲಮಂಗಲ ಸೋಮಪುರದ ಯಂಟಗಾನಹಳ್ಳಿ ಹಾಗೂ ಸೋಲದೇವನಹಳ್ಳಿ ವ್ಯಾಪ್ತಿಯ 3 ಪಂಚಾಯಿತಿಯ ವ್ಯಾಪ್ತಿಯಲ್ಲಿ ಈ 6,000 ಹೆಕ್ಟೇರ್‌ ಜಾಗ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೀಗ ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಈ ಬಗ್ಗೆ ಸಚಿವರು ಸಭೆ ನಡೆಸಲಿದ್ದು, ಈ ವೇಳೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳವನ್ನು ಅಂತಿಮ ಮಾಡಲಿದ್ದಾರೆ ಎಂದು ಹೇಳಲಾಗುತ್ತುದೆ. 2033ರ ವೇಳೆಗೆ ಬೆಂಗಳೂರಿನ ಬಳಿ 2ನೇ ಅಂತಾರಾಷ್ಟ್ರೀಯ ನಿರ್ಮಾಣ ಮಾಡಬೇಕೆಂದು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸ್ಥಳಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಹುಡುಕಾಟ ನಡೆಯುತ್ತಲೇ ಇದೆ.

ತುಮಕೂರಲ್ಲಿ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ ಯೋಜನೆ ಹಾಗೂ ಪ್ರಸ್ತಾಪಿತ ತುಮಕೂರು ಬೈಪಾಸ್‌ಗೆ ಹೊಂದಿಕೊಂಡಂತೆ ಸುಮಾರು 3,500 ಹೆಕ್ಟೇರ್‌ ಪ್ರದೇಶವನ್ನು ಡ್ರೋನ್‌ ಸರ್ವೆ ಮೂಲಕ ಗುರುತಿಸಲಾಗಿದೆ. ತುಮಕೂರು, ಶಿರಾ, ಮಧುಗಿರಿ, ಕೊರಟಗೆರೆ ಈ ನಾಲ್ಕು ತಾಲೂಕುಗಳಿಗೆ ಹೊಂದಿಕೊಂಡಂತೆ ವಿಮಾನ ನಿಲ್ದಾಣ ನಿರ್ಮಾಣ ಆಗಲಿದೆ ಎಂಬ ಚರ್ಚೆಯೂ ನಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈಗಾಗಲೇ 5 ಸ್ಥಳಗಳನ್ನು ಗುರುತಿಸಲಾಗಿದ್ದು, ಸಿಎಂ ಸಭೆ ಬಳಿಕ ಇವುಗಳಲ್ಲಿ ಯಾವ ಸ್ಥಳ ನಿಗದಿ ಆಗಲಿದೆ ಎಂದು ಕಾದುನೋಡಬೆಕಿದೆ ಅಷ್ಟೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+