ಪೊಲೀಸರು ತನಿಖೆ ವೇಳೆ ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಮಾರ್ಗಸೂಚಿ

ಬೆಂಗಳೂರು, ಅಕ್ಟೋಬರ್ 20: ವಿವಿಧ ಪ್ರಕರಣಗಳ ತನಿಖೆ ನಡೆಸುವಾಗ ಪೊಲೀಸರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುತ್ತಾರೆ. ಆರ್ಥಿಕ ಅಪರಾಧಗಳ ತನಿಖೆ ವೇಳೆಯಂತೂ ಆರೋಪಿಗಳಖಾತೆಯಿಂದ ಹಣದ ವಹಿವಾಟಿಗೆ ನಿರ್ಬಂಧ ಹೇರಲಾಗುತ್ತದೆ. ಹಾಗಾದರೆ ಪೊಲೀಸರು ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಮಾರ್ಗಸೂಚಿಗಳಿವೆಯೇ?. ಈ ಕುರಿತು ಪೊಲೀಸರು ಹೇಳುವುದೇನು?, ಯಾವಾಗ ಬ್ಯಾಂಕ್ ಖಾತೆ ಫ್ರೀಜ್ ಮಾಡಬಹುದು? ಎಂಬ ಮಾಹಿತಿ ಇಲ್ಲಿದೆ.

ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಮಾರ್ಗಸೂಚಿ ಹೊರಡಿಸಿದ್ದಾರೆ. ಈ ಮಾರ್ಗಸೂಚಿ ಪ್ರಕರಣಗಳ ತನಿಖಾ ಕಾಲದಲ್ಲಿ ಬ್ಯಾಂಕ್ ಖಾತೆಗಳ ಫ್ರೀಜ್ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಇದನ್ನು ಬೆಂಗಳೂರು ನಗರದ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್ (ಕಾ & ಸು), ಮಹಿಳಾ ಪೊಲೀಸ್ ಠಾಣೆ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆಗಳಿಗೆ ಸೂಕ್ತ ಕ್ರಮಕ್ಕಾಗಿ ಕಳಿಸಲಾಗಿದೆ.

When Police Can Freeze Bank Account Know Guidelines

ಅಲ್ಲದೇ ಉಪ ಪೊಲೀಸ್ ಆಯುಕ್ತರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ, ಆಗ್ನೇಯ, ಈಶಾನ್ಯ, ವೈಟ್‌ಫೀಲ್ಡ್ ವಿಭಾಗ, ಸಂಚಾರ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಅಪರಾಧ ಮತ್ತು ಅಪರಾಧ-1 ಬೆಂಗಳೂರು ನಗರ ಇವರಿಗೆ ಪ್ರತಿಯನ್ನು ಕಳಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಐಟಿ ಕಾಯ್ದೆ ಹಾಗೂ ಇತರೆ ಕಾಯ್ದೆಗಳ ತನಿಖೆ ಸಂಬಂಧ ಅನಾವಶ್ಯಕವಾಗಿ ಗ್ರಾಹಕರ ಖಾತೆಗಳನ್ನು ಫ್ರೀಜ್ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇದರಿಂದ ಆರೋಪಿಗಳಲ್ಲದವರೂ ಸಹ ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳಿಗೆ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಪರಿಸ್ಥಿತಿಗಳನ್ನು ನಿವಾರಿಸಲು ಮತ್ತು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗದೆ ಇರಲು ಈ ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಯಾವುದೇ ತನಿಖೆ ಸಂಬಂಧ ಆರೋಪಿತ ವ್ಯಕ್ತಿ ಅಥವಾ ಇತರೆ ಯಾವುದೇ ವ್ಯಕ್ತಿಗಳ ಅಥವಾ ಸಂಸ್ಥೆಗಳ ಬ್ಯಾಂಕ್ ಖಾತೆಗಳಲ್ಲಿ ತನಿಖೆಗೆ ಸಂಬಂಧಿಸಿದ ಮೊತ್ತ ಜಮೆ ಆಗಿದ್ದಲ್ಲಿ ಅಥವಾ ಇತರೆ ಸಂದರ್ಭಗಳಲ್ಲಿ ಈ ಕೆಳಗಿನ ಕ್ರಮಗಳನ್ನು ಅನುಸರಿಸತಕ್ಕದ್ದು ಎಂದು ಹೇಳಿದೆ.

ಮಾರ್ಗಸೂಚಿಗಳು

* ಮೊದಲನೆಯದಾಗಿ ಸಕಾರಣವಿಲ್ಲದೆ ಯಾವುದೇ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡತಕ್ಕದ್ದಲ್ಲ. ಒಂದು ವೇಳೆ ಫ್ರೀಜ್ ಮಾಡುವ ಸಂದರ್ಭ ಬಂದಲ್ಲಿ ಸಂಶಯಾಸ್ಪದ ಮೊತ್ತ (Lien Amount) ಅನ್ನು ಮಾತ್ರ ಫ್ರೀಜ್ ಮಾಡತಕ್ಕದ್ದು. ಸಂಪೂರ್ಣ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡತಕ್ಕದ್ದಲ್ಲ.

* ಒಂದು ವೇಳೆ ಸಂಪೂರ್ಣ ಖಾತೆಯನ್ನು ಫ್ರೀಜ್ ಮಾಡಬೇಕಾದಲ್ಲಿ ಸೂಕ್ತ ಸಮಜಾಯಿಷಿ ಮತ್ತು ಸಕಾರಣಗಳೊಂದಿಗೆ ತಮಗೆ ಸಂಬಂಧಪಟ್ಟ ಅಪರ ಪೊಲೀಸ್ ಆಯುಕ್ತರು ಅವರಿಂದ ಲಿಖಿತ ಅನುಮತಿ ಪಡೆದು ಫ್ರೀಜ್ ಮಾಡುವುದು.

* ಯಾವುದೇ ಬ್ಯಾಂಕ್‌ನೊಂದಿಗೆ ಪತ್ರ ವ್ಯವಹಾರ ಮಾಡಿದಾಗ Bankers Books Evidence Act-1891 ನಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡತಕ್ಕದ್ದು.

* ಯಾವುದೇ ಬ್ಯಾಂಕ್ ಖಾತೆಗಳನ್ನು ಮತ್ತು ಖಾತೆಗಳ Lien Amount ಗಳನ್ನು ಫ್ರೀಜ್ ಮಾಡಿದಲ್ಲಿ. ಕೂಡಲೇ ಈ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

* ಈ ಸುತ್ತೋಲೆಯನ್ನು ಮೀರಿ ವರ್ತಿಸುವ ತನಿಖಾಧಿಕಾರಿಗಳ ವಿರುದ್ದ ಸಹಾಯಕ ಪೊಲೀಸ್ ಆಯುಕ್ತರು/ ಉಪ ಪೊಲೀಸ್ ಆಯುಕ್ತರುಗಳು ಶಿಸ್ತಿನ ಕ್ರಮಕ್ಕಾಗಿ ವರದಿ ಸಲ್ಲಿಸತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+