ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಡ್ ರೂಮ್ ಸಂಗತಿ ಬಿಚ್ಚಿಟ್ಟ ವಿಕೃತ 'ವಾಟ್ಸಾಪ್ ಗಂಡ'

|
Google Oneindia Kannada News

ಬೆಂಗಳೂರು, ಡಿ. 14: ನಾಲ್ಕು ಗೋಡೆಗಳ ಮಧ್ಯೆ ಇರಬೇಕಾಗಿದ್ದ ಸಂಗತಿ ನಾಲ್ಕು ಜನರಿಗೆ ಗೊತ್ತಾದರೆ ಎಂಥ ಎಡವಟ್ಟಾಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಅಂಥದ್ದೇ ಕೆಲಸ ಮಾಡಿದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋ ವನ್ನು ವಾಟ್ಸಾಪ್ ಮೂಲಕ ತನ್ನ ಸ್ನೇಹಿತರಿಗೆ ಹಂಚಿದ್ದ ವಿಲಕ್ಷಣ ಆಸಾಮಿಯೊಬ್ಬನ ವಿರುದ್ಧ ಆತನ ನಾದಿನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ.[ದುಬೈನಲ್ಲಿ ಸಂಸಾರ ಮುರಿದ ವಾಟ್ಸಾಪ್ ಸಂದೇಶ]

whatsapp

ಮೈಸೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ವೆಂಕಟೇಶ್ ಪುಟ್ಟಸ್ವಾಮಿ ತಾನಾಯಿತು, ತನ್ನ ಕೆಲಸವಾಯಿತು ಎಂದಿದ್ದರೆ ಏನಾಗುತ್ತಿರಲಿಲ್ಲ. ಹೆಂಡತಿಯೊಂದಿಗೆ ನಡೆಸಿದ ಸರಸ ಸಲ್ಲಾಪ ಮತ್ತು ಕಾಮ ಚೇಷ್ಟೆಗಳನ್ನು ವಾಟ್ಸಾಪ್ ನಲ್ಲಿ ಹರಿಯ ಬಿಡುತ್ತಿದ್ದ. ಸ್ನೇಹಿತರೊಂದಿಗೆ ಅನುಭವವನ್ನು ಹಂಚಿಕೊಳ್ಳುತ್ತಿದ್ದ.

ಗಂಡ ಹೆಂಡತಿ ಇಬ್ಬರೂ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ಒಮ್ಮೆ ಇಂಥ ವಿಡಿಯೋ ಕುರಿತು ಸಹೋದ್ಯೋಗಿಯೊಬ್ಬರು ಸಂತ್ರಸ್ತೆಯನ್ನು ಪ್ರಶ್ನಿಸಿದ್ದಾರೆ. ಆದರೆ ಆಕೆ ತನಗೇನು ಗೊತ್ತಿಲ್ಲ ಎಂದಿದ್ದಾಳೆ. ನಂತರ ಭೂಪನ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಮೊದಲೇ ಮದುವೆಯಾಗಿದ್ದ ವೆಂಕಟೇಶ ಅನೇಕ ಹೆಂಗಸರ ಜತೆ ಸಂಪರ್ಕ ಇಟ್ಟುಕೊಂಡಿದ್ದ. ಅಲ್ಲದೇ ಖಾಸಗಿ ವಿಷಯಗಳನ್ನು ಕದ್ದು ಚಿತ್ರಿಸುವ ಚಟ ಬೆಳೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಕೃತ ಮನಸ್ಸಿನ ಇಂಜಿನಿಯರ್ ತನ್ನ ಚಿಕ್ಕಮ್ಮನ ಮಗಳು ಮತ್ತು ಹೆಂಡತಿ ತಂಗಿಯೊಂದಿಗೂ ಸಂಬಂಧ ಇರಿಸಿಕೊಂಡಿದ್ದ. ಅವರ ಜತೆ ಆಡಿದ ಆಟಗಳನ್ನು ವಾಟ್ಸಾಪ್ ನಲ್ಲಿ ಹಂಚುತ್ತಿದ್ದ. ಈ ಸಂಗತಿಗಳನ್ನು ತಿಳಿದ ನಾದಿನಿ ಪೊಲೀಸರಿಗೆ ದೂರು ನೀಡಿದ್ದು 'ವ್ಯಾಟ್ಸಾಪ್ ಹಂಚಿಕೆದಾರ' ಇದೀಗ ಜೈಲು ಸೇರಿದ್ದಾನೆ.

English summary
Bangaluru: A software engineer arrested by the police allegedly sending sex videos with his wife through whatssapp. Mysore Native theque working in Bangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X