ಮದ್ಯ ಮಾರಾಟ ಆರಂಭದ ಹಿಂದಿನ ದಂಧೆ ಏನು: ಮುಖ್ಯಮಂತ್ರಿಗಳಿಗೆ ಗಂಭೀರ ಪ್ರಶ್ನೆ
ಬೆಂಗಳೂರು, ಮೇ 9: ಸುಮಾರು ನಲವತ್ತು ದಿನಗಳ ನಂತರ ಮದ್ಯದ ಅಂಗಡಿ ತೆರೆಯಲು ಸರಕಾರ ಅನುಮತಿಯನ್ನು ನೀಡಿತ್ತು. ಈ ಬಗ್ಗೆ, ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಜೆಡಿಎಸ್ ಮುಖಂಡ, ರಮೇಶ್ ಬಾಬು ಗಂಭೀರ ಪ್ರಶ್ನೆಯೊಂದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮೇಶ್ ಬಾಬು, "ಸ್ವತಂತ್ರ ಬಂದು 20 ವರ್ಷಗಳ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೇಶದ ಅನೇಕ ರಾಜ್ಯದಲ್ಲಿ ನಿಷೇಧವಿದೆ. ಅಂದರೆ ಇದು ಅನಿವಾರ್ಯವಲ್ಲ".
ಯಡಿಯೂರಪ್ಪನವರ ಕಾರ್ಯಶೈಲಿಯನ್ನು ಮುಕ್ತಕಂಠದಿಂದ ಹೊಗಳಿದ ವಿರೋಧ ಪಕ್ಷದ ನಾಯಕರು
"ಮುಖ್ಯಮಂತ್ರಿಗಳೇ ದಂಧೆ ಹಿಂದಿನ ದಂಧೆ ಏನು? ಪ್ರತಿದಿನ ನಿಮ್ಮ ಭಾವ ಚಿತ್ರದೊಂದಿಗೆ ಕೋವಿಡ್ ಮಾಹಿತಿ ನೀಡುವ ಸರ್ಕಾರ ಜೊತೆಯಲ್ಲಿ ಮದ್ಯದಿಂದ ಆಗುತ್ತಿರುವ ಸಾವು ಕೊಲೆ ಅಪರಾಧ ಮಾಹಿತಿ ನೀಡಲಿ" ಎಂದು ರಮೇಶ್ ಬಾಬು ಆಗ್ರಹಿಸಿದ್ದಾರೆ.
"ಕೊನೆಗೂ ರಾಜ್ಯ BJP ಸರ್ಕಾರ ಅಬಕಾರಿಗೆ ಶರಣಾಗಿದೆ. ಸಂಪನ್ಮೂಲದ ಕೊರತೆ ಕೇಂದ್ರದ ಸಹಾಯದ,ಆ ತ್ಮವಿಶ್ವಾಸದ ಕೊರತೆ ಅತಂತ್ರಕ್ಕೆ ತಳ್ಳಿದೆ. ಸರ್ಕಾರಿ ಯೋಜನೆಗಳಿಗೆ ಬಿಜೆಪಿ ಲೇಬಲ್ ಹಚ್ಚಿ ಪ್ರಚಾರ ಮಾಡುವ ಸರ್ಕಾರ ಕೊರೊನಾ ಹೆಸರಲ್ಲಿ ದಂಧೆಗೆ ಇಳಿದಿದೆ.ಇದರ ಭಾಗವಾಗಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಕೊರೊನಾ ಮತ್ತು ಅಪರಾಧ ಹೆಚ್ಚಲು ಅವಕಾಶವಾಗಿದೆ" ಎಂದು ರಮೇಶ್ ಬಾಬು ವಾರದ ಹಿಂದೆ ಟ್ವೀಟ್ ಮಾಡಿದ್ದರು.
"ಮದ್ಯ ಮಾರಾಟದಿಂದ ಆದಾಯ ಬರಬಹುದು. ಆದರೆ ರಾಜ್ಯದಲ್ಲಿ ಅಪರಾಧ ಹೆಚ್ಚಲು ಅಶಾಂತಿ ಮತ್ತು ಕೌಟುಂಬಿಕ ದೌರ್ಜನ್ಯಗಳಿಗೆ ನೇರ ಕಾರಣವಾಗುತ್ತದೆ. ಪೊಲೀಸರು ನಿರ್ವಹಣೆ ಬಿಟ್ಟು ಕಾನೂನು ಸುವ್ಯವಸ್ಥಗೆ ಸೀಮಿತ ಆಗಬೇಕಾಗುತ್ತದೆ. ಇದರಿಂದ ಕೊರೊನಾ ಪ್ರಕರಣ ಹೆಚ್ಚಾಗಿ ಲಾಕ್ ಡೌನ್ ಮೂಲ ಉದ್ದೇಶ ವಿಫಲವಾಗುತ್ತೆ. ರಾಜ್ಯ ಸರ್ಕಾರದ ನಡೆ ಸಮಾಜ ವಿರೋಧಿ ಆಗಿದೆ" ಎಂದೂ ರಮೇಶ್ ಬಾಬು ಟ್ವೀಟ್ ಮಾಡಿದ್ದರು.
ಕೊರೊನಾ ಗ್ರಾಫ್ ಹಾಕಿ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಅಣಕವಾಡಿದ್ದು ಹೀಗೆ..
"ಕನ್ನಡ ಕಟ್ಟುವ ಕೆಲಸ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಗಬೇಕು. ಹಣದ ಕಾರಣ ನೀಡಿ ಅಧ್ಯಕ್ಷರು ವಿವಿಧ ಪ್ರಶಸ್ತಿ ವಿದ್ಯಾರ್ಥಿ ವೇತನ ಸ್ಥಗಿತ ಎಂದಿದ್ದಾರೆ. ಪಲಾಯನವೇ ಇಲ್ಲಾ ಆತ್ಮ ವಂಚನೆಯೇ? ಸರ್ಕಾರ ಸಾಂಕೇತಿಕ. ನಿಮ್ಮ ಸಂಬಳ ಸಾರಿಗೆ ಸಿಬ್ಬಂದಿ ಸವಲತ್ತು ಕಡಿತ ಮಾಡಿಕೊಳ್ಳಿ. ಅವಶ್ಯಕತೆ ಬಂದರೆ ಜೋಳಿಗೆ ಹಿಡಿಯಿರಿ. ಪ್ರಾಧಿಕಾರ ನೀವು ಬೆಳಗಲಿ" ಎಂದು ರಮೇಶ್ ಬಾಬು ಟ್ವೀಟ್ ಮಾಡಿದ್ದರು.