ಕಲೆಯ ರಂಗಿನಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ

ಬೆಂಗಳೂರು, ಡಿಸೆಂಬರ್ 09 : ವೀಕೆಂಡ್ ನ್ನು ಎಂಜಾಯ್ ಮಾಡ ಹೊರಟವರಿಗೆ ಇನ್ನೊಂದು ವಿಶೇಷತೆ ಕಾದಿದೆ. ಮೆಟ್ರೋ ನಿಲ್ದಾಣದಲ್ಲಿ ರೈಲನ್ನು ಕಾಯುವ ಅವಧಿಯಲ್ಲೂ ಕೂಡ ಮನರಂಜನೆ ಪಡೆಯಲಿದ್ದೀರಿ.

ಹೌದು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಕಲಾ ಔತಣ ತಯಾರಿಸಿದೆ, ಬಡಿಸುವವರು ಕೂಡ ತಯಾರಿದ್ದಾರೆ, ಹಲವಾರು ವಿಶೇಷ ಕಾರ್ಯಕ್ರಮಗಳು ಜನರ ಮನಸೂರೆಗೊಳ್ಳಲಿದೆ. ಡಿಸೆಂಬರ್ 9 ರ ಶನಿವಾರ ಹಾಗೂ ಭಾನುವಾರ ಕಬ್ಬನ್ ಮೆಟ್ರೋ ನಿಲ್ದಾಣ ಕಲಾಜಾತ್ರೆಯಾಗಿ ಮಾರ್ಪಡಲಿದೆ.

ಮೆಟ್ರೋ ಪ್ರಯಾಣಿಕರಿ ವಾರಾಂತ್ಯವನ್ನು ಇನ್ನಷ್ಟು ಸೊಸಸಾಗಿಸಲು ಬಿಎಂಆರ್ ಸಿಎಲ್ ಹಾಗೂ ಸೃಷ್ಟಿ ಇನ್ಸ್ಟ್ಇಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆ ಸಿದ್ಧವಾಗಿದೆ. ಹಾಗಾಗಿ ವಿಶೇಷ ಕಲಾ ಚಟುವಟಿಕೆಗಳನ್ನು ಆಯೋಜಿಸಿದೆ. ಕಾರ್ಯಕ್ರಮ ಬೆಳಗ್ಗೆ 10 ರಿಂದ ಸಂಜೆ 7 ವರೆಗೆ ಎರೆಡು ದಿನಗಳ ಕಾಲ ನಡೆಯಲಿದೆ.

Weekend Masti of Art in Namma Metro

ಮೆಟ್ರೋ ಪ್ರಯಾಣಿಕರು ರೈಲನ್ನು ಕಾಯುತ್ತ ನಿಂತಲ್ಲಿಯೇ ಮನರಂಜನೆ ಪಡೆಯಬಹುದು, ಕರಕುಶಲ ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಮೂಖ ವಿಡಿಯೋವನ್ನು ಇನ್ನೊಂದು ಮೆಟ್ರೋ ಬರುವ ಅವಧಿಯೊಳಗೆ ಪ್ರಸಾರ ಮಾಡಲಾಗುತ್ತದೆ.

ಇಷ್ಟೇ ಅಲ್ಲದೆ ಪರಿಸರವನ್ನು ಸಂರಕ್ಷಿಸುವುದು ಹೇಗೆ, ಬೆಂಗಳೂರಿನ ಪರಿಸರ ಯಾವ ಹಂತಕ್ಕೆ ಬಂದು ತಲುಪಿದೆ, ಬೆಂಗಳೂರನ್ನು ಮತ್ತೆ ಹಸಿರು ನಗರಿಯನ್ನಾಗಿ ಪುನರ್ ನಿರ್ಮಾಣ ಮಾಡುವುದು ಹೇಗೆ ಎನ್ನುವರ ಕುರಿತು ವಿಶೇಷ ಸಂವಾದಗಳು ನಡೆಯಲಿದೆ. ಜತೆಗೆ ಚಿತ್ರಕಲೆಯಲ್ಲಿ ಅದನ್ನು ಬಿಂಬಿಸಲಾಗುತ್ತದೆ.

ಕಥೆಗಳ ಹಬ್ಬ, ಕಾಮಿಕ್ ಬುಕ್, ಮ್ಯಾಪಿಂಗ್ ವರ್ಕ್ ಶಾಪ್, ಶಾಡೋ ಆರ್ಕಿಟೆಕ್ಚರ್, ಸ್ಪೋಕನ್ ವರ್ಡ್ ಕಾರ್ಯಕ್ರಮ ನಡೆಯಲಿದೆ. ಎಐಟಿ ಕೋ ಲೀಡ್ ಅಮಿತಾಬ್ ಕುಮಾರ್ ಅವರು ಕಳೆದ ಎರಡು ವರ್ಷದ ಹಿಂದೆ ಪೀಣ್ಯ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಜತೆಗೆ ಮೊದಲ ಬಾರಿಗೆ ಪ್ರದರ್ಶಿಸಿದ್ದರು. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ಇದೀಗ ಕಬ್ಬನ್ ಮೆಟ್ರೋ ನಿಲ್ದಾಣದಲ್ಲಿ ನಡೆಸಲಿದ್ದಾರೆ.

Weekend Masti of Art in Namma Metro

ಕಬ್ಬನ್ ಉದ್ಯಾನ ಬೆಂಗಳೂರಿನ ಹೃದಯಭಾಗದಲ್ಲಿದೆ ಹಾಗಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ, ವಿದ್ಯಾರ್ಥಿಗಳು, ತೋಟಗಾರಿಕೆ ಇಲಾಖೆ, ಮುನ್ಸಿಪಾಲಿಟಿ, ಬಿಎಂಆರ್ ಸಿಎಲ್ ಅನುಮತಿ ಪಡೆದು ಕಾರ್ಯಕ್ರಮ ರೂಪಿಸಿದ್ದಾರೆ.

ಮೆಟ್ರೋ ನಿಲ್ದಾಣದ ತುಂಬ ಆರ್ಟ್ ವಾಕ್ಸ್ ಕಾರ್ಯಕ್ರಮಗಳು ನಡೆಯಲಿದೆ. ಕಲಾವಿದ ರಘು ಒಡೆಯರ್, ಜೀತಿನ್ ರಾಂಗರ್, ಈ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ನೀಡಲಿದ್ದಾರೆ.

ಇಷ್ಟೇ ಅಲ್ಲದೆ ಡಿಸ್ಕೋ ಗೊಂಬೆಯಾಟ ಕಾರ್ಯಕ್ರಮ ನಡೆಯಲಿದೆ. ನಗರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ, ಸೆಲ್ಫ್ ಗೈಡೆಡ್ ಟ್ರೀ ವಾಕ್ಸ್ ಕಾರ್ಯಕ್ರಮ ವಿಶೇಷವಾಗಿದ್ದು ನಾಶವಾಗುತ್ತಿರುವ ಹಸಿರನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ವಿಷಯದ ಕುರಿತು ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 9 ರಂದು ಶನಿವಾರ ಪಾರ್ಕಿನ ಒಂದು ಸುತ್ತು ವರ್ಡ್ ಆಫ್ ಮೌತ್ ಎನ್ನುವ ಕಾರ್ಯಕ್ರಮ ಮಧ್ಯಾಹ್ನ3 ರಿಂದ 5 ಗಂಟೆಯವರೆಗೆ ನಡೆಯಲಿದೆ.5 ರಿಂದ 6 ರವರೆಗೆ ಆರ್ಟ್ ವಾಕ್ಸ್ ಕಾರ್ಯಕ್ರಮ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+