ನೀರಿನ ಬಿಕ್ಕಟ್ಟು: ನೋಂದಾಯಿತ ಎಲ್ಲ ಟ್ಯಾಂಕರಗಳ ಮೇಲೆ 'ಸ್ಟಿಕ್ಕರ್': ವಲಯವಾರು ಮಾಹಿತಿ, ಸ್ಟಿಕ್ಕರ್‌ನಲ್ಲೇನಿದೆ?

ಬೆಂಗಳೂರು, ಮಾರ್ಚ್ 18: ಬೆಂಗಳೂರು ಜಲಮಂಡಳಿಯು ಪ್ರತಿನಿತ್ಯ ಪೂರೈಸುವ 1450 ಎಂಎಲ್‌ಡಿ ನೀರು ಪೂರೈಕೆಗೆ ತೊಂದರೆ ಇಲ್ಲ. ಆದರೆ ಅಂತರ್ಜಲ ಕುಸಿತ ಇನ್ನಿತರೆ ಕಾರಣಗಳಿಂದ ನಗರದ ಹಲವೆಡೆ ನೀರಿನ ಅಭಾವ ಸೃಷ್ಟಿಯಾಗಿದೆ. ಇದರ ಪರಿಹಾರಕ್ಕೆ ನಗರದಲ್ಲಿ ಎಲ್ಲ ಎಂಟು ವಲಯದಿಂದ ಒಟ್ಟು 1732 ಟ್ಯಾಂಕರ್ ಮಾಲೀಕರು ಸ್ವಯಂ ನೋಂದಣಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಟಿಕ್ಕರ್ ಅಂಟಿಸಲು ಬಿಬಿಎಂಪಿ ಕಡ್ಡಾಯ ಸೂಚನೆ ನೀಡಿದೆ.

ನೀರಿನ ಸಮಸ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿಯು (BWSSB) ಜನರಿಗೆ ತೊಂದರೆ ಆಗದಂತೆ, ಹೆಚ್ಚು ಹಣ ಕೀಳದಂತೆ ಉಪಾಯ ಮಾಡಿದೆ. ಸಹಾಯವಾಣಿ ನಂಬರ್ ಸಹ ಕೊಡಲಾಗಿದೆ.

Water Crisis BBMP Make Mandatory Sticker On 1732 Water Tankers in 8 Zones Why Know Details

ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ‌ ವ್ಯಾಪ್ತಿಯಲ್ಲಿ (ಬಿಬಿಎಂಪಿ) ಈಗಾಗಲೆ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಗಳನ್ನು ಆಯಾ ವಲಯವಾರು ನಿಯೋಜಿಸಲಾಗಿದೆ. ನೋಂದಣಿ ಯಾಗಿರುವ ಟ್ಯಾಂಕರ್ ಗಳಿಗೆ ಜಲಮಂಡಳಿ ನೀಡಿರುವ ಸ್ಟಿಕರ್ ಅಂಟಿಸುವುದನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ.

ಸ್ಟಿಕ್ಕರ್ ಕಡ್ಡಾಯ ಜತೆ ಇತರ ಸೂಚನೆಗಳು

ಜಲಮಂಡಳಿ (BWSSB) ವತಿಯಿಂದ ಸ್ಟಿಕ್ಕರ್ ಗಳನ್ನು ಸಿದ್ದಪಡಿಸಿ ಪಾಲಿಕೆಗೆ ನೀಡಿದೆ. ಸದರಿ ಸ್ಟಿಕ್ಕರ್ ಗಳನ್ನು ವಲಯವಾರು ಹಂಚಿಕೆ ಮಾಡಲಾಗಿದೆ. ಪ್ರತಿ ಟ್ಯಾಂಕರ್ ಮಾಲೀಕರು ಪಾಲಿಕೆಯಲ್ಲಿ ಸ್ವಂ ನೋಂದಣಿ ಮಾಡಿಕೊಂಡಿರುವ ನೋಂದಣಿ ಪ್ರಮಾಣ ಪತ್ರವನ್ನು ಹಾಗೂ ಪಾಲಿಕೆ ನೀಡಿರುವ ಸ್ಟಿಕರ್ ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರುವಾಣಿ ಸಂಖ್ಯೆ ಹಾಗೂ ಸ್ವಂ ನೋಂದಣಿಯಾಗಿರುವ ಸಂಖ್ಯೆಯನ್ನು ಹಾಗೂ ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕು. ಇಲ್ಲವಾದಲ್ಲಿ ಅಂತಹ ಟ್ಯಾಂಕರ್ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Water Crisis BBMP Make Mandatory Sticker On 1732 Water Tankers in 8 Zones Why Know Details

ಸ್ಟಿಕ್ಕರ್ ಕಡ್ಡಾಯ ಯಾಕೆ?

ಟ್ಯಾಂಕರ್ ಮೇಲೆ ಅಳವಡಿಕೆ ಆಗುವ ಸ್ಟಿಕ್ಕರ್ ಮೇಲೆ ಇಂತಿಷ್ಟು ನೀರಿಗೆ, ಇಷ್ಟಿಷ್ಟೇ ದರ ಎಂದು ಬಿಬಿಎಂಪಿ ನಿಗದಿ ಮಾಡಿರುವ ಬ್ಯಾನರ್ ರೀತಿಯ ಸ್ಟಿಕ್ಕರ್ ಇದಾಗಿದೆ. ಇದರಲ್ಲಿ ಸಹಾಯವಾಣಿ ಸಂಖ್ಯೆ ಸಹ ನೀಡಿದ್ದು, ಹೆಚ್ಚು ಹಣ ಕೇಳಿದರೆ, ಕರೆ ಮಾಡಲು ಸೂಚಿಸಲಾಗಿದೆ.

ಬಿಬಿಎಂಪಿ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಮಾಲೀಕರಿಗೆ ಈಗಾಗಲೇ ನಿಗದಿಪಡಿಸಿರುವ ದರದ ಅನುಸಾರ ನೀರು ಪೂರೈಕೆ‌ ಮಾಡಲು ಸೂಚಿಸಲಾಗಿದೆ. ನೋಂದಣಿ ಆಗದ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಮಾಡಲು ಅವಕಾಶ ನೀಡುವುದಿಲ್ಲ.

ಟ್ಯಾಂಕರ್ ನೀರಿನ ಸಮಸ್ಯೆ ಬಗ್ಗೆ ಕರೆ ಮಾಡಿ

ಇನ್ನು ಸರ್ಕಾರದಿಂದ ನಿಗದಿಪಡಿಸಿರುವ ದರಕ್ಕಿಂದ ಹೆಚ್ಚಾಗಿ ಮಾರಾಟ ಮಾಡಿದಲ್ಲಿ ಅಥವಾ ನೀರಿನ ಗುಣಮಟ್ಟದ ಸಮಸ್ಯೆ ಉಂಟಾದಲ್ಲಿ ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916 ಗೆ ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಗೆ ಸಂಪರ್ಕಿಸಬಹುದು ಗ್ರಾಹಕರಿಗೆ ಬಿಬಿಎಂಪಿ ತಿಳಿಸಿದೆ.

ಪಾಲಿಕೆ ತೆರೆದಿದ್ದ ಪೋರ್ಟಲ್ ನಲ್ಲಿ ಸ್ವಯಂ ನೋಂದಣಿಯಾಗಿದ್ದ ಟ್ಯಾಂಕರ್ ಗಳನ್ನು ಈಗಾಗಲೇ ವಲಯವಾರು ನಿಯೋಜಿಸಲಾಗಿದೆ. ಆಯಾ ವಲಯ ಆಯುಕ್ತರಿಗೆ ಆಯಾ ವಲಯಗಳಿಗೆ ನೀಡಿರುವ ಟ್ಯಾಂಕರ್ ಮಾಲೀಕರ ಹೆಸರು, ದೂರವಾಣಿ ಸಂಖ್ಯೆ ಹಾಗೂ ನೀರು ಪೂರೈಕೆ‌ ಮಾಡುವ ಪ್ರದೇಶದ ಮಾಹಿತಿಯನ್ನು ನೀಡಲಾಗಿದೆ ಎಂದು ಆರೋಗ್ಯ ವಿಭಾಗದ ಅಧಿಕಾರಿ ಸುರೋಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿರುತ್ತಾರೆ.

ಬಿಬಿಎಂಪಿ ವಲಯವಾರು ಟ್ಯಾಂಕರ್ ನೋಂದಣಿ ಮಾಹಿತಿ

ಬೊಮ್ಮನಹಳ್ಳಿ ವಲಯ: 117

ದಾಸರಹಳ್ಳಿ ವಲಯ: 98

ಯಲಹಂಕ ವಲಯ: 141

ಮಹಾದೇವಪುರ: 341

ಆರ್ಆರ್ ನಗರ: 86

ಪಶ್ಚಿಮ ವಲಯ : 87

ದಕ್ಷಿಣ ವಲಯ : 456

ಪೂರ್ವ ವಲಯ: 406

ಒಟ್ಟು: 1732

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+