ಮತಗಟ್ಟೆಗೆ ಬರಲು ವಾಹನ ವ್ಯವಸ್ಥೆ; ನೋಂದಣಿ ಮಾಡಿಸಿ

ಬೆಂಗಳೂರು, ಮೇ 05; ಚುನಾವಣಾ ಆಯೋಗ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಅವಕಾಶ ನೀಡಿತ್ತು. ಈಗ ಮತದಾನದ ದಿನ ಮತಗಟ್ಟೆಗೆ ಬರಲು ಸಹ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಮೇ 10ರ ಬುಧವಾರ ರಾಜ್ಯದಲ್ಲಿ ಮತದಾನ ನಡೆಯಲಿದೆ.

ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವೃದ್ಧರು ಮತ್ತು ವಿಶೇಷಚೇತನರಿಗೆ ಮತಗಟ್ಟೆಗೆ ಬರಲು ಸಹಾಯಕವಾಗುವಂತೆ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಎಲ್ಲಾ ಅರ್ಹರು ತಪ್ಪದೇ ಮತ ಚಲಾವಣೆ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ.

Voting On May 10th Vehicle Facility For Senior Citizens

ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ. "ನಗರದ 28 ವಿಧಾನಸಭಾ ಕ್ಷೇತ್ರದಲ್ಲಿನ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಮೇ 7ರೊಳಗೆ ಸಕ್ಷಮ್ ಅಪ್ಲಿಕೇಶನ್‌ನಲ್ಲಿ ನೋಂದಣಿ ಮಾಡಿದರೆ ಅವರು ಮತಗಟ್ಟೆಗೆ ಆಗಮಿಸಲು ವಾಹನ ವ್ಯವಸ್ಥೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

5 ಜನರು ನೋಂದಣಿ; ಈ ಬಾರಿ ಮನೆಯಿಂದಲೇ ಮತದಾನ ಮಾಡಲು 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಅವಕಾಶ ನೀಡಲಾಗಿತ್ತು. ಆದರೆ ಕೆಲವರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಲು ನಿರ್ಧರಿಸಿದ್ದಾರೆ. ವಾಹನ ವ್ಯವಸ್ಥೆಗಾಗಿ ಈಗಾಗಲೇ ಸಕ್ಷಮ್ ಅಪ್ಲಿಕೇಶನ್ ಮೂಲಕ ಈಗಾಗಲೇ 5 ಜನರು ನೋಂದಣಿ ಮಾಡಿದ್ದಾರೆ.

Voting On May 10th Vehicle Facility For Senior Citizens

ಸಕ್ಷಮ್ ಅಪ್ಲಿಕೇಶನ್‌ನಲ್ಲಿ ತಮ್ಮ ಹೆಸರು ಸೇರಿದಂತೆ ಇತರ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಂಡರೆ ಅವರು ಮತಗಟ್ಟೆಗೆ ತೆರಳಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯ ಬೆಂಗಳೂರು ನಗರದಲ್ಲಿ ಮಾತ್ರ ಈ ಸೌಲಭ್ಯವಿದೆ.

2018ರ ಚುನಾವಣೆಯಲ್ಲಿ ಓಲಾ ಮತ್ತು ಊಬರ್ ಸಂಸ್ಥೆಗಳು ಉಚಿತವಾಗಿ ಜನರನ್ನು ಮತಗಟ್ಟೆಗೆ ಕರೆತರುವ ಕೆಲಸ ಮಾಡಿದ್ದವು. ಈ ಬಾರಿಯೂ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆದರೆ ಇನ್ನೂ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ.

ಮತದಾನ ಪ್ರಮಾಣ ಹೆಚ್ಚಿಸಲು ಪ್ರಯತ್ನ; ಪ್ರತಿ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತದೆ. ಆದ್ದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮ ನಡೆಸಲಾಗುತ್ತಿದೆ. ತಪ್ಪದೇ ಮತದಾನ ಮಾಡಿ ಎಂದು ಅಭಿಯಾನ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದಲ್ಲಿ 97.03 ಲಕ್ಷ ಮಂದಿ ಮತದಾರರು ಇದ್ದಾರೆ. ಇವರ ಪೈಕಿ 1.43 ಲಕ್ಷ ಹೊಸ ಮತದಾರರು. ಎಲ್ಲಾ ಅರ್ಹ ಮತದಾರರು ಈ ಬಾರಿ ತಪ್ಪದೇ ಮತದಾನ ಮಾಡುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ನಗರದಲ್ಲಿ ವಲಸೆ ಬಂದಿರುವ ಜನರು ಹೆಚ್ಚು, ಅವರು ತಮ್ಮ ಊರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ, ಚುನಾವಣೆ ಬಂದಾಗ ಊರಿಗೆ ಮತ ಹಾಕಲು ಹೋಗುತ್ತಾರೆ. ಆದ್ದರಿಂದ ಇಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತದೆ.

ಬೆಂಗಳೂರು ನಗರದಲ್ಲಿ 2008ರಲ್ಲಿ ರಾಜ್ಯದಲ್ಲಿ ಶೇ 65ರಷ್ಟು ಮತದಾನವಾಗಿತ್ತು, ಬೆಂಗಳೂರು ನಗರದಲ್ಲಿ 47.3ರಷ್ಟು ಮತದಾನವಾಗಿತ್ತು. 2013ರಲ್ಲಿ ರಾಜ್ಯದಲ್ಲಿ 71.45ರಷ್ಟು ಮತದಾನವಾಗಿತ್ತು, ನಗರದಲ್ಲಿ 52.83ರಷ್ಟು ಮತದಾನವಾಗಿತ್ತು. 2018ರಲ್ಲಿ ರಾಜ್ಯದಲ್ಲಿ 72.36ರಷ್ಟು ಮತದಾನವಾಗಿತ್ತು, ಬೆಂಗಳೂರಲ್ಲಿ 54.72ರಷ್ಟು ಮತದಾನವಾಗಿತ್ತು.

ವೃದ್ಧರು ಮತ್ತು ವಿಶೇಷಚೇತನರು ಮತಗಟ್ಟೆ ತನಕ ಬಂದು, ಅಲ್ಲಿ ಸರತಿ ಸಾಲಿನಲ್ಲಿ ಕಾದು ಮತಚಲಾವಣೆ ಮಾಡಲು ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ. ಆದ್ದರಿಂದ ಅವರು ಮತದಾನ ಮಾಡಲು ಆಗಮಿಸುತ್ತಿಲ್ಲ ಎಂಬ ಹಿನ್ನಲೆಯಲ್ಲಿ ಈ ಬಾರಿ ಮನೆಯಿಂದಲೇ ಮತದಾನ ಮಾಡುವುದು, ಮತಗಟ್ಟೆಗೆ ಆಗಮಿಸಲು ವಾಹನ ವ್ಯವಸ್ಥೆ ಮಾಡಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+