ಲೋಕಸಭಾ ಮತ ಎಣಿಕೆ: ಮದ್ಯ ಮಾರಾಟ ನಿಷೇಧ

ಬೆಂಗಳೂರು,ಮೇ. 13: ಲೋಕಸಭಾ ಚುನಾವಣೆ ಮತ ಎಣಿಕೆಯನ್ನು ಶಾಂತಿಯುತವಾಗಿ, ಸುವ್ಯವಸ್ಥಿವಾಗಿ ಹಾಗೂ ಸುಗಮವಾಗಿ ನಡೆಸುವ ಸಲುವಾಗಿ ಅಬಕಾರಿ ಕಾಯಿದೆಯನ್ವಯ ಮೇ.15ರ ಮಧ್ಯರಾತ್ರಿ 12 ಗಂಟೆಯಿಂದ ಮೇ. 16 ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಲಾಗಿದೆ.

ಮತ ಎಣಿಕೆ ದಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೇ 15ರ ರಾತ್ರಿ 12 ಗಂಟೆಯಿಂದ ಮರುದಿನ ರಾತ್ರಿ 12ರವರೆಗೆ ಮದ್ಯ ನಗರದ ಎಲ್ಲಾ ಬಾರ್‌ ರೆಸ್ಟೋರೆಂಟ್‌, ಹೋಟೆಲ್‌‌, ಕ್ಲಬ್‌ಗಳನ್ನು ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಗರ ಪೊಲೀಸ್‌ ಆಯುಕ್ತ ರಾಘವೇಂದ್ರ ಔರಾದ್‌‌ಕರ್ ಹೇಳಿದ್ದಾರೆ.

ಅಬಕಾರಿ ಸಿಬ್ಬಂದಿಗಳು ನಗರದಾದ್ಯಂತ ಸಂಚರಿಸಿ, ಗಸ್ತು ತಿರುಗಿ ಯಾವುದೇ ರೀತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರವಹಿಸಲಿದ್ದಾರೆ.

vote count: Liquor sale, processions banned

ಮೇ 16ರಂದು ಮತ ಎಣಿಕೆ ನಡೆಯುವವರೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಮೂರು ಹಂತದಲ್ಲಿ ಈಗಾಗಲೇ ಭದ್ರತೆ ನೀಡಲಾಗುತ್ತಿದೆ. ಮತಯಂತ್ರವಿರುವ ಕೊಠಡಿಯ ಹೊರಭಾಗದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರ ಸಜ್ಜಿತ ಯೋಧರು ಕಾವಲಿದ್ದಾರೆ.[ಯಂತ್ರದಲ್ಲಿ ಭದ್ರವಾದ ಮತಗಳು ಈಗ ಎಲ್ಲಿವೆ?]

ಎಲೆಕ್ಟ್ರಾನಿಕ್ ಮತಯಂತ್ರವಿರುವ ಕಟ್ಟಡದ ಆವರಣವನ್ನು ಕೆಎಸ್ಆರ್ ಪಿ ಕಾವಲು ಕಾಯುತ್ತಿದೆ. ಕಟ್ಟಡದ ಆವರಣದ ಮುಂಭಾಗ, ರಸ್ತೆಗಳನ್ನು ಆಯಾ ನಗರ ಪೊಲೀಸರು ಕಾವಲು ಕಾಯುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿಆರ್ ಪಿಫ್ ಯೋಧರು ಸ್ಟ್ರಾಂಗ್ ರೂಮ್ ಗಳ ಭದ್ರತೆಯನ್ನು ಹೊಣೆಯನ್ನು ಹೊತ್ತಿದ್ದಾರೆ.[ಕರ್ನಾಟಕದಲ್ಲಿ ಒಟ್ಟು ಎಷ್ಟು ಮತದಾನವಾಗಿದೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+