Big Potholes: ಮಳೆ ಬಂದರೆ ಪ್ರವಾಹ, ಬಾರದಿದ್ದರೆ ರಸ್ತೆಗುಂಡಿ! ಬೆಂಗಳೂರಿನ ರಸ್ತೆಗಳ ದುಸ್ಥಿತಿಗೆ ಜನಾಕ್ರೋಶ

ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಗುಂಡಿಗಳ ದುರಸ್ತಿ, ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಾಮಗಾರಿಗೆಂದು ಕೋಟಿ ಕೋಟಿ ಹಣ ಹಂಚಿಕೆಯಾಗುತ್ತದೆ. ಆದರೆ ಅಭಿವೃದ್ಧಿ ಆಗದೇ ಪ್ರಮುಖ ರಸ್ತೆಗಳಲ್ಲಿ ಬಿದ್ದ ಒಂದೆರಡು ಅಡಿಗಳಷ್ಟು ಆಳದ ರಸ್ತೆಗುಂಡಿಗಳು ಜೀವ ಬಲಿ ಪಡೆಯಲು ಬಾಯ್ತೆರೆದು ಕುಳಿತಿವೆ. ನಗರದ ಮೂಲಸೌಕರ್ಯ ಅಭಿವೃದ್ಧಿ ಪಣತೊಟ್ಟಿರುವಂತೆ ಅಧಿಕಾರಿಗಳನ್ನು ಎಚ್ಚರಿಸುವ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ಕ್ಷೇತ್ರದಲ್ಲೇ ಅತ್ಯಧಿಕ ರಸ್ತೆಗುಂಡಿಗಳಿರುವುದು ವರದಿ ಆಗಿದೆ. ನೆಟ್ಟಿಗರು ಆನ್‌ಲೈನ್‌ನಲ್ಲಿ ವಿವಿಧ ರಸ್ತೆಗಳ ಹದಗೆಟ್ಟ ಸ್ಥಿತಿ ಬಗ್ಗೆ ವಿಡಿಯೋಗಳನ್ನು ಹಂಚಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. JDS ಟ್ವೀಟ್ ಮೂಲಕ ಕಿಡಿ ಕಾರಿದೆ.

ಬೆಂಗಳೂರು ವಾಹನ ಸವಾರರು, ವಾಹನ ದಟ್ಟಣೆ, ಮಳೆ, ಪ್ರವಾಹ ಜೊತೆಗೆ ರಸ್ತೆಗುಂಡಿಗಳ ಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಇಷ್ಟು ದಿನ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳ ವಿರುದ್ಧ ಹರಿಹಾಯ್ದದ್ದು, ವಿಡಿಯೋ ಮಾಡಿದ್ದೆಲ್ಲವು ಸುಳ್ಳ. ಜನರ ಕಣ್ಣಿಗೆ ಮಣ್ಣೆರಚಲು ಈ ರೀತಿ ರಾಜಕಾರಣಿಗಳು ನಾಟವಾಡುತ್ತಿದ್ದಾರಾ? ಎಂದು ಸಾರ್ವಜನಿಕರು, ವಿಪಕ್ಷ ನಾಯಕರು ಪ್ರಶ್ನಿಸುತ್ತಿದ್ದಾರೆ.

Viral Video of Bengaluru Potholes

₹200 ಕೋಟಿಯ "ಬೆಂಗಳೂರು ಜಾತ್ರೆ" ಬೇಕಾ?

ರಾಜ್ಯದಲ್ಲಿ ಬರಗಾಲ ಇದ್ದು, ಅದ್ಧೂರಿ ದಸರಾ ಆಚರಣೆ ಕುರಿತು ಒಂದಷ್ಟು ಮಂದಿ ಆಕ್ಷೇಪ ಎತ್ತಿದ್ದರು. ಇದೀಗ ಜೆಡಿಎಸ್ ಟ್ವೀಟ್ ನಲ್ಲಿ ಕಳಪೆ ರಸ್ತೆಗಳ ಫೋಟೋಗಳನ್ನು ಪೋಸ್ಟ್ ಮಾಡಿದೆ. 'ರಾಜ್ಯ ಸರ್ಕಾರ ₹200 ಕೋಟಿ ರೂಪಾಯಿ ವೆಚ್ಚದಲ್ಲಿ "ಬೆಂಗಳೂರು ಜಾತ್ರೆ"ಗೆ ಭರ್ಜರಿ ಸಿದ್ಧತೆ ಶುರುವಾಗಿದೆ!. ಜಾತ್ರೆ ಮಾಡಲು ನಿಮಗೆ ಕೇಳಿದ್ದು ಯಾರು? ಅಂತಲೂ ಜೆಡಿಎಸ್ ಕಿಡಿ ಕಾರಿದೆ.

ರಸ್ತೆಗುಂಡಿಗಳ ಕುರಿತು ವಿರೋಧ ಪಕ್ಷ ಟ್ವೀಟ್ ಮಾಡಿದ ತಕ್ಷಣ ಎಚ್ಚೆತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ರಸ್ತೆ ಗುಂಡಿಗಳಿಗೆ 'ಒಡೆದ ಇಟ್ಟಿಗೆ'ಗಳ ಕಾಸ್ಟ್ಲಿ ಮೇಕಪ್ ಮಾಡಿದೆ ಎಂದು ಆರೋಪಿಸಿದೆ. 'ಮಳೆ ಬಂದರೆ ಇವೇ ರಸ್ತೆಗಳು ಕೆರೆಯಾಗಿ ಬೋಟಿಂಗ್ ವ್ಯವಸ್ಥೆಯೂ ಫ್ರೀ ಸಿಗುತ್ತೆ. ಇಂತಹ ದರಿದ್ರ ತೇಪೆ ಕಾರ್ಯವೇ ನಿಮ್ಮ ಸರ್ಕಾರದ ಬಹುದೊಡ್ಡ ಸಾಧನೆ ಅಲ್ಲವೇ? ಎಂದು ಜೆಡಿಎಸ್ ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಕೃಷ್ಣ ಬೈರೇಗೌಡರನ್ನು ಪ್ರಶ್ನಿಸಿದೆ.'

ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ 'ಬೆಂಗಳೂರು ಜಾತ್ರೆ' ಮಾಡುವ ಬದಲು ನಗರದ ಸಮಸ್ಯೆಗಳ ಪರಿಹಾರ, ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಗಮನ ಕೊಡುವಂತೆ ಅನೇಕರು ಒತ್ತಾಯಿಸಿದ್ದಾರೆ. ಮಳೆ ಬಂದರೆ ಪ್ರವಾಹ, ಬಾರದಿದ್ದರೆ ರಸ್ತೆಗುಂಡಿ ಸಮಸ್ಯೆಗೆ ಸವಾರರು, ಪ್ರಯಾಣಿಕರು ಹೈರಾಣಾಗಿದ್ದಾರೆ.

2-3 ಅಡಿಯಷ್ಟು ಬೃಹತ್ ಹೊಂಡ!

ಬೆಂಗಳೂರಿನ ಎನ್‌ಟಿಟಿಎಸ್-ರಾಜಕುಮಾರ್ ರಸ್ತೆಯಲ್ಲಿ ಬೃಹತ್ ಹೊಂಡ ಬಿದ್ದಿದೆ. ಪತ್ರಕರ್ತರೊಬ್ಬರು ಅದರೊಳಗೆ ಕೂತರೆ ಕಾಣದಷ್ಟು ದೊಡ್ಡ ಗುಂಡಿ ಬಿದ್ದಿದೆ. ಸುಮಾರು ಮೂರು ಅಡಿಯಷ್ಟು ಆಳದ ಗುಂಡಿ ಎನ್ನಲಾಗಿದೆ. ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ನಗರದ ರಸ್ತೆಗಳ ನಿರ್ವಹಣೆಯಲ್ಲಿ ವಿಫಲರಾಗಿರುವುದಕ್ಕೆ ಸಾಕ್ಷಿ ಎಂಬಂತಿದೆ. ಅಪಾಯ, ಜೀವ ಹಾನಿ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವ ಜಿಬಿಎ ರಸ್ತೆಗಳ ನಾಮಕಾವಸ್ತೆ ಕಾಮಗಾರಿ ಮಾಡುತ್ತದೆ. ಒಂದೇ ಮಳೆಗೆ ಮತ್ತಷ್ಟು ಗುಂಡಿಗಳು ನಿರ್ಮಾಣವಾಗುತ್ತಿವೆ. ಅಷ್ಟರ ಮಟ್ಟಿಗಿನ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಈ ಮೂಲಕ ಜನರ ತೆರಿಗೆ ಹಣ ಲೂಟಿ ಆಗುತ್ತಿದೆ ಅಂತಲೂ ಜನರು ದೂರಿದ್ದಾರೆ. ಸದ್ಯ ನಗರದ ಬೃಹತ್ ರಸ್ತೆಗುಂಡಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಕೃಷ್ಣ ಬೈರೇಗೌಡ ಕ್ಷೇತ್ರದಲ್ಲೇ 6000 ರಸ್ತೆಗುಂಡಿಗಳು!

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ 'ಎಐಎಆರ್-ಎಐ' ಕಂಪನಿಯು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಖುದ್ದಿ ಸರ್ವೇ ನಡೆಸಿ ವರದಿ ಸಿದ್ಧಪಡಿಸಿದೆ. ಈ ಸರ್ವೇಯು ಎಐ ಜೊತೆಗೆ ಕಂಪ್ಯೂಟರ್ ವಿಷನ್, ಭೂಮೇಲ್ಮೈ ಸ್ಥಳಗಳ ನಕ್ಷೆ ಆಧರಿಸಿ ರಸ್ತೆಗಳ ಸರ್ವೇ ಮಾಡಿದೆ. ಇದರಲ್ಲಿ 6000 ರಸ್ತೆಗುಂಡಿಗಳು ಇರುವುದು ಗೊತ್ತಾಗಿದೆ. ಕಂಪನಿಯು ಅದನ್ನು ಎಕ್ಸ್ ಪೋಸ್ಟ್ ಮೂಲಕ ಸಚಿವರಿಗೆ ಹಂಚಿಕೊಂಡಿದೆ. ಇದರ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಿ ಸೂಕ್ತ ದುರಸ್ತಿ ಕಾಮಗಾರಿ ಕೈಗೊಳ್ಳಲು ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಮೂಲಕ ಬೆಂಗಳೂರು ನಗರದ ಅಭಿವೃದ್ಧಿ ಕುರಿತು ಸಭೆ ನಡೆಸುವ, ಅಧಿಕಾರಿಗಳಿಗೆ ತಾಕೀತು ಮಾಡುವ ಸಚಿವರ ಸ್ವಕ್ಷೇತ್ರದಲ್ಲೆ ಇಷ್ಟೊಂದು ಗುಂಡಿಗಳು ಇರುವುದು ಹಾಸ್ಯಾಸ್ಪದವಾಗಿದೆ ಅಂತಲೂ ಕೆಲವರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+