Bengaluru Viral Video: ಆಟೋ ಚಾಲಕಿ ಜೀವನ ಪ್ರೀತಿಯ ವೀಡಿಯೋಗೆ 3 ಮಿಲಿಯನ್ ವೀಕ್ಷಣೆ

Viral Video: ಬೆಂಗಳೂರಿನ ಮಹಿಳಾ ಆಟೋ ಚಾಲಕಿಯೊಬ್ಬರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ ಅಮೆಜಾನ್ ಉದ್ಯೋಗಿಯೊಬ್ಬರು ಮಹಿಳಾ ಆಟೋ ಚಾಲಕಿಯೊಬ್ಬರೊಂದಿಗಿನ ಹೃದಯಸ್ಪರ್ಶಿ ಸಂಭಾಷಣೆ ಹಾಗೂ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಆಟೋ ಓಡಿಸುವ ವೃತ್ತಿ ಆಯ್ಕೆ ಮಾಡಿಕೊಂಡ ಬಗ್ಗೆ ಅವರ ಮಾತುಗಳು ಇದೀಗ ವೈರಲ್ ಆಗಿವೆ. ಆಟೋ ಚಾಲಕ ಮಹಿಳೆಯ ಮಾತುಗಳು ನೆಟ್ಟಿಗರಿಂದ ಮೆಚ್ಚುಗೆಗೆ ಕಾರಣವಾಗಿದೆ. ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸರಳವಾದ ಆದರೆ ಪ್ರಬಲವಾದ ಕಾರಣವು ಸಾಮಾಜಿಕ ಮಾಧ್ಯಮದಲ್ಲಿ ಅನೇಕರನ್ನು ಆಕರ್ಷಿಸಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಆತ್ಮನಿರ್ಭರತೆ ನೀಡುವ ಕೆಲಸವನ್ನು ಆಯ್ಕೆ ಮಾಡುವ ಮಹಿಳೆಯರನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ ಅಂತಲೂ ಅವರು ಹೇಳಿದ್ದಾರೆ.

Vijay - Bengaluru: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೆ ತಮಿಳುನಾಡಿನ ವಿಜಯ್, ಟಿವಿಕೆ ಪಕ್ಷದ ಕಣ್ಣು
Vijay - Bengaluru: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೆ ತಮಿಳುನಾಡಿನ ವಿಜಯ್, ಟಿವಿಕೆ ಪಕ್ಷದ ಕಣ್ಣು

ಇನ್ನು ವೈರಲ್ ವಿಡಿಯೋದಲ್ಲಿ ಆಟೋ ಚಾಲಕಿಯು, ಪಾತ್ರೆ ತೊಳೆಯುವ ಕೆಲಸ ಮಾಡುವುದಕ್ಕಿಂತ ಆಟೋ ಓಡಿಸುವುದೇ ಉತ್ತಮ. ಏಕೆಂದರೆ ನನಗೆ ಸುತ್ತಾಡೋದು ಸಹ ತುಂಬಾ ಇಷ್ಟ. ಇಲ್ಲಿ ಯಾವುದೇ ಡೆಡ್‌ಲೈನ್ ಇಲ್ಲ. ನನ್ನ ಇಷ್ಟ ಬಂದಾಗ, ಎಷ್ಟು ಬೇಕಾದರೂ ಆಟೋ ಓಡಿಸಬಹುದು ಮತ್ತು ಬೇಕಾದ ಕಡೆಗೆ ಹೋಗಬಹುದು. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಆತ್ಮನಿರ್ಭರತೆ ನೀಡುವ ಕೆಲಸವನ್ನು ಆಯ್ಕೆ ಮಾಡುವ ಮಹಿಳೆಯರನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ ಅಂತ ಅವರು ಹೇಳಿದ್ದಾರೆ.

Viral Video

ಶ್ರೇಯಾಶಿ ಸಿನ್ಹಾ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಆಟೋ ಚಲಾಯಿಸುವ ಆಯ್ಕೆಯ ಬಗ್ಗೆ ಅವರ ಮಾತುಗಳು ಇದೀಗ ಗಮನ ಸೆಳೆದಿದೆ. ಆಟೋ ಚಲಾಯಿಸುವ ಮಹಿಳೆಯ ಫೋನ್ ಸಮಸ್ಯೆ ಆಗಿದ್ದು, ಶ್ರೇಯಾಶಿ ಸಿನ್ಹಾ ಅವರು ತಮ್ಮ ಮೊಬೈಲ್‌ನಲ್ಲಿ ಲೊಕೇಶ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಾಯಿಸುವ ಮಹಿಳೆಯೊಂದಿಗೆ ಮಾತನಾಡಿರುವ ಅನುಭವವನ್ನು ಅವರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯ ನೀಡುವ ಕೆಲಸವನ್ನು ಆಯ್ಕೆ ಮಾಡುವ ಮಹಿಳೆಯರನ್ನು ನಾನು ಮೆಚ್ಚುತ್ತೇನೆ ಅಂತ ಅವರು ಹೇಳಿಕೊಂಡಿದ್ದಾರೆ.

ಇಂದು, ಒಬ್ಬ ಮಹಿಳಾ ಆಟೋ ಚಾಲಕಿ ನನ್ನನ್ನು ಕರೆದುಕೊಂಡು ಹೋಗಲು ಬಂದರು. ನಾನು ಅವರೊಂದಿಗೆ ಮಾತನಾಡುವಾಗ ಆಟೋ ಚಾಲನೆ ವೃತ್ತಿ ಯಾಕೆ ಆಯ್ಕೆ ಮಾಡಿಕೊಂಡಿರಿ ಅಂತ ಕೇಳಿದೆ. ಅವರು ಮುಗುಳ್ನಗುತ್ತಾ, ಪಾತ್ರೆ ತೊಳೆಯುವ ಕೆಲಸ ಮಾಡುವುದಕ್ಕಿಂತ ಆಟೋ ಓಡಿಸುವುದೇ ಉತ್ತಮ ಎಂದರು ಅಂತ ಹೇಳಿದ್ದಾರೆ. ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್‌ ಬಂದಿದೆ. ಈ ವಿಡಿಯೋವನ್ನು ನೋಡಿರುವ ಹಲವು ನೆಟ್ಟಿಗರು ಮಹಿಳೆಯ ಚೈತನ್ಯ ಮತ್ತು ಅವರ ಕೆಲಸದ ಬಗ್ಗೆ ಹೊಂದಿರುವ ಘನತೆಯನ್ನು ಮೆಚ್ಚಿಕೊಂಡಿದ್ದಾರೆ.

Viral Video: ನೆಟ್ಟಿಗರಿಂದ ಮೆಚ್ಚುಗೆ

ಮಹಿಳೆಯೊಬ್ಬರು ಇಷ್ಟೊಂದು ಮುಕ್ತವಾಗಿ ಹಾಗೂ ಸ್ವಾತಂತ್ರ್ಯವಾಗಿ ಆಟೋ ಚಾಲನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಹಲವು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ಪುರುಷರು ಆಟೋ ಓಡಿಸಿದರೆ ಜೀವನದಲ್ಲಿ ವಿಫಲ, ಮಹಿಳೆ ಆಟೋ ಓಡಿಸಿದರೆ ಅವಳು ರಾಣಿ ಎಂಬ ಅಭಿಪ್ರಾಯ ಇದೆ ಎಂದು ಕುಹಕದ ಮಾತುಗಳನ್ನಾಡಿ ತಮ್ಮ ಮನಸ್ಸಿನ ಅತೃಪ್ತಿ ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+