ಖರ್ಚಿಲ್ಲದೇ ದಿನವಿಡೀ ಕೆಲಸ, ವೈಟ್‌ಫೀಲ್ಡ್‌ ಮಾಲ್‌ನಲ್ಲಿ ಹೊಸ ಫ್ರೀ ಆಫೀಸ್‌, Video Viral

ಬೆಂಗಳೂರು ನಗರದಲ್ಲಿ ವರ್ಕ್‌ ಫ್ರಮ್ ಹೋಮ್‌ ಹಾಗೂ ರಿಮೋಟ್‌ ಕೆಲಸದ ಸಂಸ್ಕೃತಿ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದನ್ನು "ಫ್ರೀ ಕೋವರ್ಕಿಂಗ್‌ ಸ್ಪೇಸ್‌" ಆಗಿ ಬಳಸುವ ಐಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು ಮೂಲದ ಇನ್‌ಸ್ಟಾಗ್ರಾಂ ಇನ್‌ಫ್ಲುವೆನ್ಸರ್ ಅಮೋಲ್ ನಾರಂಗ್ ಅವರು ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಉಚಿತವಾಗಿ ಲ್ಯಾಪ್‌ಟಾಪ್‌ ಬಳಸಿ ಕೆಲಸ ಮಾಡಬಹುದಾದ ಸ್ಥಳಗಳನ್ನು ಗುರುತಿಸಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Viral Video

ಬೆಂಗಳೂರಲ್ಲಿ ಸೊನ್ನೆ ರೂಪಾಯಿಗೆ ಫ್ರೀ ವೈಫೈ, ಎಸಿ ಮತ್ತು ಚಾರ್ಜಿಂಗ್ ಸೌಲಭ್ಯ ಬಳಸಿ ದಿನವಿಡೀ ಕೆಲಸ ಮಾಡಬಹುದು ಎಂಬ ಶೀರ್ಷಿಕೆಯಲ್ಲಿ ಅವರು ಇನ್‌ಸ್ಟಾಗ್ರಾಂಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಸೊನ್ನೆ ಖರ್ಚಿನಲ್ಲಿ ವೈಫೈ, ಎಸಿ ಮತ್ತು ಚಾರ್ಜಿಂಗ್ ಸೌಲಭ್ಯ ಪಡೆದು ದಿನವಿಡೀ ಕೆಲಸ ಮಾಡಬಹುದು ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಮಾಲ್‌ನ ವಿವಿಧ ಸ್ಥಳಗಳನ್ನು ತೋರಿಸಿರುವ ಅಮೋಲ್‌, "ಮಾಲ್‌ನ ಎರಡನೇ ಮಹಡಿಯಲ್ಲಿ ಇರುವ Zeiss Vision Centre ಹತ್ತಿರ ಕುಳಿತು ಕೆಲಸ ಮಾಡಲು ಸೂಕ್ತವಾದ ವರ್ಕ್‌ಸ್ಟೇಷನ್‌ಗಳಿವೆ. ಇಲ್ಲಿ ನೆಕ್ಸಸ್‌ ಫ್ರೀ ವೈಫೈ ಬಳಸಬಹುದು" ಎಂದು ಹೇಳಿದ್ದಾರೆ.

ಇದಾದ ಬಳಿಕ ಅವರು ಯುಜಿ ಮಹಡಿಯಲ್ಲಿ ಇರುವ ಸ್ಟಾರ್ಬಕ್ಸ್‌ ಹತ್ತಿರದ ಕುಳಿತುಕೊಳ್ಳುವ ಜಾಗವನ್ನೂ ತೋರಿಸಿದ್ದಾರೆ. "ಸ್ಟಾರ್ಬಕ್ಸ್‌ ಹಿಂಭಾಗದಲ್ಲಿ ಉಚಿತ ಚಾರ್ಜಿಂಗ್‌ ಪಾಯಿಂಟ್‌ಗಳಿವೆ. ಜೊತೆಗೆ ಸ್ಟಾರ್ಬಕ್ಸ್‌ನ ಹೈ-ಸ್ಪೀಡ್‌ ವೈಫೈ ಸಹ ಬಳಸಬಹುದು" ಎಂದು ತಿಳಿಸಿದ್ದಾರೆ.

ಇನ್ನಷ್ಟು ಪ್ರಶಾಂತವಾದ ಸ್ಥಳ ಹುಡುಕುವವರಿಗಾಗಿ ಚಾಯೋಸ್(Chaayos) ಕಫೆ ಹತ್ತಿರದ ಜಾಗವನ್ನೂ ಅವರು ಸೂಚಿಸಿದ್ದಾರೆ. ಮಾಲ್‌ ಹೊರಭಾಗದಲ್ಲಿಯೂ ಮೊಬೈಲ್‌ ಹಾಟ್‌ಸ್ಪಾಟ್‌ ಬಳಸಿ ಕೆಲಸ ಮಾಡಬಹುದು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋ ವೈರಲ್‌ ಆದ ಬಳಿಕ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. "ವೈಟ್‌ಫೀಲ್ಡ್‌ನ ಬೆಸ್ಟ್‌ ಫ್ರೀ ಕೋವರ್ಕಿಂಗ್‌ ಜಾಗದ ರಹಸ್ಯವನ್ನು ಬಿಚ್ಚಿಟ್ಟಿದ್ದೀಯಾ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು "ಇದೀಗ ಎಲ್ಲರೂ ಲ್ಯಾಪ್‌ಟಾಪ್‌ ಹಿಡಿದು ಮಾಲ್‌ಗೆ ಬರುತ್ತಾರೆ" ಎಂದು ಹಾಸ್ಯ ಮಾಡಿದ್ದಾರೆ.

ಕೆಲವರು ಈ ಐಡಿಯಾವನ್ನು ಉಪಯುಕ್ತ ಎಂದು ಮೆಚ್ಚಿದರೆ, ಇನ್ನೂ ಕೆಲವರು ಸಾರ್ವಜನಿಕ ವೈಫೈ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. "ಪಬ್ಲಿಕ್‌ ವೈಫೈ ಬಳಸುವಾಗ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು" ಎಂದು ಬಳಕೆದಾರರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ, ಈ ವಿಡಿಯೋ "ಬೆಂಗಳೂರು ರಿಮೋಟ್‌ ವರ್ಕ್‌ ಸ್ಟೈಲ್‌" ಉದಾಹರಣೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+